ಚುನಾವಣೆಯಲ್ಲಿ ಮತ್ತೊಮ್ಮೆ GTDರನ್ನು MLA ಮಾಡಿ..!

Must read

ಬಹಿರಂಗವಾಗಿ ಸಿಡಿದೆದ್ದಿದ್ದ ಬೆಳವಾಡಿ ಶಿವಮೂರ್ತಿಯನ್ನ ಸಂಧಾನ ಮಾಡುವಲ್ಲಿ ಶಾಸಕ ಜಿ.ಟಿ.ದೇವೇಗೌಡ ಯಶಸ್ವಿಯಾಗಿದ್ದಾರೆ. ಬೆಳವಾಡಿಯಲ್ಲಿ ನಿನ್ನೆ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿ.ಟಿ.ದೇವೇಗೌಡ ಜೊತೆ ಬೆಳವಾಡಿ ಶಿವಮೂರ್ತಿ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಜಿ.ಟಿ.ದೇವೇಗೌಡ ವಿರುದ್ಧ ಶಿವಮೂರ್ತಿ ಅಸಮಾಧಾನಗೊಂಡಿದ್ದರು. ಇದೀಗ ಬೆಳವಾಡಿ ಶಿವಮೂರ್ತಿ ಜೊತೆ ಜಿ.ಟಿ.ದೇವೇಗೌಡ ಸಂಧಾನ ಸಕ್ಸಸ್ ಆಗಿದ್ದು, ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ GTDರನ್ನು MLA ಮಾಡಿ, ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಮತ್ತೊಮ್ಮೆ ಅವಕಾಶ ನೀಡಿ ಎಂದು ಬೆಳವಾಡಿ ಶಿವಮೂರ್ತಿ ಮನವಿ ಮಾಡಿದ್ದಾರೆ.

- Advertisement -spot_img

More articles

- Advertisement -spot_img

Latest article