ಕುಂಬ್ಳೆಯಿಂದ ಕಲಿಯಬೇಕಾದದ್ದು ಬಹಳಷ್ಟಿದೆ ಎಂದರು ಸೆಹ್ವಾಗ್…!

Date:

ಸೆಹ್ವಾಗ್ ಜೊತೆಗಿನ ಸಂದರ್ಶನವು ಒಂದು ಅದ್ಭುತ ಅನುಭವ ನೀಡುವಂತಾದ್ದು ಅಷ್ಟೇ ಅಲ್ಲ ವಿನೋದಕಾರಿಯೂ ಆಗಿರುತ್ತದೆ. ಹೌದು ವಿನೋದಕ್ಕಾಗಿ ಅವರ ಬಳಿ “ನಿಮಗೆ ಇವೆರಡರಲ್ಲಿ ಯಾವುದು ಅತೀ ಆನಂದವನ್ನು ತರೋ ಕ್ಷಣ,ಟೆಸ್ಟ್ ಕ್ರಿಕೆಟ್ನಲ್ಲಿ ಹೊಡೆದ ಮೂರು ಪಟ್ಟು ಸೆಂಚುರಿಯೇ ಅಥವಾ T20 ಯಲ್ಲಿನ ಬಿರುಗಾಳಿಯಂತೆ ಬೀಸಿದ ಸೆಂಚುರಿಯೇ ?” ಎಂಬ ಪ್ರಶ್ನೆಗೆ ಈ ಡೇಷಿಂಗ್ ಕ್ರಿಕೆಟರ್ ಉತ್ತರ”1000 ರೀಟ್ವೀಟ್ಸ್” ಎಂಬುದಾಗಿತ್ತು. TNPL ಮದುರೈ ಸೂಪರ್ ಗ್ಯಾಂಟ್ಸ್ ನ ಪ್ರಚಾರ ಕಾರ್ಯಕ್ರಮಕ್ಕಾಗಿ ಆಗಮಿಸಿದ ವೇಳೆ ಸೆಹವಾಗ್ ಈ ರೀತಿಯಾಗಿ ತಮ್ಮನ್ನು ತಾವು ತೆರೆದಿಟ್ಟರು.ಆ ಸಂದರ್ಶನದತ್ತ ಒಂದು ಇಣುಕು ನೋಟ.

 ನಿಮಗೆ ಅವಕಾಶ ಸಿಕ್ಕಿದಲ್ಲಿ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗುತ್ತೀರಾ?

ಇಲ್ಲ.ನನಗೆ ಸಮಯವಿಲ್ಲ(ನಗು).ಅದಲ್ಲದೆ ನಮ್ಮ ಟೀಂ ಇಂಡಿಯಾಕ್ಕೆ ಬ್ಯಾಟಿಂಗ್ ಕೋಚ್ ನ ಅಗತ್ಯವಿದೆಯೆಂದು ನನಗನ್ನಿಸುತ್ತಿಲ್ಲ.ಅವರಲ್ಲಿ ಒಳ್ಳೆಯ ಬ್ಯಾಟ್ಸ್ ಮ್ಯಾನ್ ಗಳಿದ್ದಾರೆ.ಕೋಚ್ ಕೇವಲ ಒಬ್ಬ ಸ್ನೇಹಿತನಷ್ಟೇ ಅವನು ಕೋಚ್ ಅಲ್ಲ.ಇಲ್ಲಿ  ಬೇಕಾಗಿರುವುದು ಕೇವಲ ನಮಗೆ ಸ್ಪೂರ್ಥಿ ನೀಡುವ ವ್ಯಕ್ತಿಗಳು.ಅದಕ್ಕಾಗಿ ಅನಿಲ್ ಕುಂಬ್ಳೆ ಒಬ್ಬ ಸಮರ್ಥ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ.ನಾನೆಂದೂ ಕಂಡಿರದ ಉತ್ತಮ ಆದರ್ಶ,ಎಲ್ಲಾ ವಿಧದ ಧನಾತ್ಮಕ ವ್ಯಕ್ತಿತ್ವವಿರೋ ವ್ಯಕ್ತಿ.ಅವರೆಂದೂ ಹಿಡಿದ ಕೆಲಸವನ್ನು ಸಂಪೂರ್ಣಗೊಳಿಸದೆ ಬಿಡಲಾರರು.ಹಾಗೂ ನಮ್ಮ ಟೀಮ್ ಗೆ ಅವರಿಂದ ಕಲಿಯಬೇಕಾದ್ದು ಬಹಳಷ್ಟಿದೆ.

 ವಿರಾಟ್ ಕೊಹ್ಲಿಯಿಂದ ಎಲ್ಲಾವನ್ನು ನಿಭಾಯಿಸಲು ಸಾಧ್ಯ ಎಂಬುದರ ಬಗ್ಗೆ ನೀವೇನಂತೀರಾ?

ನಮಗಿರೋ ಸವಾಲು ಈಗ ಅವರು ಭಾರತಕ್ಕೆ ಆಗಮಿಸಿದಾಗ ಇಂಗ್ಲೆಂಡ್,ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾವನ್ನು ಎದುರಿಸುವುದಾಗಿದೆ.ಅವರು ಒತ್ತಡದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಇಲ್ಲಿ ಮುಖ್ಯ.ಈಗ ನಮಗೆ ತಿಳಿದಿರುವಂತೆ ಇಂಗ್ಲೆಂಡ್ ಉತ್ತಮವಾಗಿ ಕ್ರಿಕೆಟ್ ಆಡುತ್ತಿದೆ ಹಾಗೂ ಮುಂದಿನ ದಿನಗಳಲ್ಲಿ ನಮ್ಮಟೀಂ ಇಂಗ್ಲೆಂಡ್ನ ಟೂರ್ ನಲ್ಲಿ ಹೇಗೆ ನಿಭಾಯಿಸುತ್ತದೆ ಎಂಬುದು ಮಾಡಬೇಕಾಗಿರೋ ಬಲು ದೊಡ್ದ ಕೆಲಸ.ಸೌತ್ ಆಫ್ರಿಕಾ ಜೊತೆಯಲ್ಲಿ ಇಂಡಿಯಾ ಚೆನ್ನಾಗಿ ಆಡಿತ್ತು,ಅದರಂತೆ ಅವ್ರು ಇಂಗ್ಲೆಂಡ್ ನ್ನು ಬೀಟ್ ಮಾಡುತ್ತಾರೆ ಎಂದು ಅಂದುಕೊಂಡಿದ್ದೇನೆ.

 ಎಮ್.ವಿಜಯ್,ಶಿಕರ್ ಧವನ್ ಹಾಗೂ ಕೆ.ಎಲ್.ರಾಹುಲ್ ನಡುವಿನ ಕಾಂಪಿಟೀಷನ್ ನಲ್ಲಿ ನೀವು ಯಾರನ್ನು ಆಯ್ಕೆ ಮಾಡುತ್ತೀರಿ?

ನಾನು ಹೇಳುವುದಾದರೆ ಅಲ್ಲಿರೋ 11 ಜನರ ನಡುವೆಯೂ ನಿಮಗೆ ಕಾಂಪಿಟೀಷನ್ ಬೇಕು.ಒಬ್ಬ ಉತ್ತಮ ಆಟಗಾರನೇ ನಿಜವಾಗಿಯೂ ಆಡುತ್ತಾನೆ ಹಾಗೂ ಆ ಉತ್ತಮ ಆಟಗಾರನನ್ನು ಕ್ಯಾಪ್ಟನ್ ಹಾಗೂ ಕೋಚ್ ಆಯ್ಕೆ ಮಾಡುತ್ತಾರೆ.

 ಈಗ ನಡೆಯುತ್ತಿರೋ ಇಂಡಿಯಾ-ವೆಸ್ಟ್ ಇಂಡೀಸ್ ನಲ್ಲಿ ಸ್ವಲ್ಪ ಕನಿಷ್ಟ ಮಟ್ಟದ ಜನರ ಹಾಜರಾತಿ ನೋಡಿದಲ್ಲಿ ನಿಮಗೆ ಪಿಂಕ್ ಬಾಲ್ ಟೆಸ್ಟ್ ಮ್ಯಾಚ್ ಗಳಿಂದ ಬದಲಾವಣೆ ಸಾಧ್ಯವೇ ಎಂದು ಅನ್ನಿಸುವುದೇ?

ನನಗೆ ಹಾಗೆ ಅನ್ನಿಸುತ್ತಿಲ್ಲ.ಕೇವಲ ಒಂದು ಆಟವಷ್ಟೇ ಜನರನ್ನು ಮೈದಾನಕ್ಕೆ ಕರೆತರುತ್ತದೆ.ನಮ್ಮ ಭಾರತಕ್ಕೆ ಹೋಲಿಸಿದಲ್ಲಿ ವೆಸ್ಟ್ ಇಂಡೀಸ್ ಜನಸಂಖ್ಯೆ ತೀರಾ ಕಡಿಮೆ.ಹಾಗೂ 1970 ಹಾಗೂ 1980 ರ ಕಾಲಾವಧಿಯಲ್ಲಿ ನಡೆಯುತ್ತಿದ್ದ ಟೆಸ್ಟ್ಆಟದಷ್ಟು ಈಗಿನ ಕೆರಿಬಿಯನ್ ನಲ್ಲಿ ನಡೆಯುತ್ತಿರೋ ಟೆಸ್ಟ್ ಆಟಗಳು ಪ್ರಸಿದ್ದಿಯನ್ನು ಪಡೆದಿಲ್ಲ.

 ನೀವು ಕ್ರಿಕೆಟ್ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದೀರಿ;ಅದರಲ್ಲಿ ನಿಮ್ಮ ಹೃದಯಕ್ಕೆ ತೀರಾ ಹತ್ತಿರವಾದದ್ದು ಯಾವುದು?ಹಾಗೂ ಮುಂದಿನ ಭವಿಷ್ಯದ ದಿನಗಳಲ್ಲಿ ಯಾರಿಂದಲೇ ಆದರೂ ಅಂತಹದ್ದೊಂದನ್ನು ಮತ್ತೆ ನಿರ್ಮಿಸಲು ಸಾಧ್ಯವೇ?

ಹೌದು.ಇಲ್ಲಿರೋ ಹಲವಾರು ಆಟಗಾರರಿಂದ ಅದು ಸಾಧ್ಯ.ನಿಮಗೆ ಬೇಕಾದ್ದು ಕೇವಲ ಒಂದೂವರೆ ದಿನಗಳು.ನನಗೆ ಸೌತ್ ಆಫ್ರಿಕಾ ವಿರುದ್ದ ಆಡಿದ ಇನ್ನಿಂಗ್ಸ್ ನೆನಪಿಲ್ಲ ಆದರೆ ನನಗೆ ಮುಲ್ತಾನ್ ಫೀಟ್ ಮಾತ್ರ ಎಂದೆಂದಿಗೂ ಪ್ರೀತಿಪಾತ್ರ.

 ನೀವು ಕಳೆದ IPLನಲ್ಲಿ ಕಿಂಗ್ಸ್ XI ಪಂಜಾಬ್ ಗೆ ಉತ್ತಮ ಸಲಹೆಗಾರರಾಗಿದ್ದಿರಿ.ಅಕ್ಸರ್ ಪಟೆಲ್ ಕೊನೇಯ ಓವರ್ ನಲ್ಲಿ ಧೋನಿಯಿಂದ ಸೋಲಿಸಲ್ಪಟ್ಟಾಗ ಅಂತಹ ಹಲವರಿಗೆ ನೀವು ಯಾವ ಸಲಹೆಯನ್ನು ನೀಡುತ್ತೀರಿ?

ನೀನೊಬ್ಬನೇ ಧೋನಿಯಿಂದ ಸೋಲಿಸಲ್ಪ‍ಟ್ಟವನಲ್ಲವೆಂದು ನಾನು ಅವನಿಗೆ ಮೊದಲೇ ಹೇಳಿದ್ದೇನೆ.ಇಂತಹದ್ದನ್ನು ಎದುರಿಸಿದವರು ಹಲವಾರು ಮಂದಿ.ನೀನೊಬ್ಬ ಧೋನಿಯ ತಪ್ಪಿತಸ್ಥನಾಗಿರಬಹುದು ಆದರೆ ನೀನು ಮುಂದಕ್ಕೆ ಹೋಗು,ಇನ್ನೂ ಸಾಧಿಸಬೇಕಾದ್ದು ಬಹಳಷ್ಟು ಇದೆ,ಪ್ರತೀ ದಿನವೂ ಒಂದು ಹೊಸ ದಿನ.

 ಇದೇ ಸಮಯದಲ್ಲಿ ಕಳೆದ ವರುಷದ T20 ಯಲ್ಲಿ ಹರ್ಯಾನಕ್ಕಾಗಿ ಆಟ ಆಡಿದ್ದೀರಿ.ಈ ವರುಷವೂ ಆಡುತ್ತೀರಾ?

ಇಲ್ಲ,ನಾನು BCCI ಯಿಂದ ನಿವೃತ್ತನಾಗಿದ್ದೇನೆ.ನಾನೊಂದು ವೇಳೆ ಮಾಸ್ಟರ್ಸ್ ಚ್ಯಾಂಪಿಯನ್ಸ್ ಲೀಗ್ ಆಡುತ್ತಿದ್ದರೆ ನಾನು ಶೋಯೆಬ್ ನನ್ನ ಎದುರಿಸುತ್ತಿದ್ದೆ.

 ನೀವು ಟ್ವಿಟ್ಟರ್ ನ್ನು ನಿತ್ಯ ಬಳಸುತ್ತೀರಿ;ನಿಮ್ಮ ಆಟದ ದಿನಗಳಲ್ಲಿ ನೀವು ಎಂದಾದರೂ ಅದನ್ನು ಮಿಸ್ ಮಾಡಿದ ಕ್ಷಣವಿರಬಹುದೇ?

ನಾನು BCCI ಜೊತೆಗೆ ಒಪ್ಪಂದವನ್ನು ಮಾಡಿದ್ದೆ.ನಮಗೆ ಅದನ್ನು ಬಳಸಲು ಅವಕಾಶವಿರಲಿಲ್ಲ.

 

POPULAR  STORIES :

ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!

ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!

ಸೈಕಲ್ ಕದಿಯಲು ಇಡೀ ಮರವನ್ನೇ ಕತ್ತರಿಸಿದ ಕತರ್ನಾಕ್ ಕಳ್ಳ…!

ಸ್ಯಾಮ್ ಸಂಗ್ ಕಂಪನಿಯು ಭೀಕರ ರಹಸ್ಯದ ಬಗ್ಗೆ ಬಾಯ್ಮುಚ್ಕೊಂಡು ತೆಪ್ಪಗಿರೋಕೆ ಕೆಲಸಗಾರರಿಗೆ ಭಾರೀ ಮೊತ್ತ ನೀಡಿತ್ತಂತೆ

ಈ ಹಾಡನ್ನು ಕೇಳಿದವ್ರೆಲ್ಲಾ ಸುಸೈಡ್ ಮಾಡ್ಕೊಂಡ್ರಂತೆ…!

ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!

ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು

ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video

 

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...