ಚೀನಾ, ಭಾರತ, ಅಮೇರಿಕಾ, ಸ್ಪೇನ್ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ವೇಶ್ಯಾವಾಟಿಕೆ ಹಾಗೂ ಸೆಕ್ಸ್ ಸಂಬಂಧಿಸಿದ ಅನೈತಿಕ ಚಟುವಟಿಕೆಗಳ ವ್ಯವಹಾರವು ಭಾರೀ ಪ್ರಮಾಣದಲ್ಲಿ ಹೆಚ್ಚಿದ್ದು ಬಹು ಕೋಟಿ ಮೌಲ್ಯದ ಉದ್ಯಮವಾಗಿ ಹರಡಿದೆ. ಹವೋಸ್ಕೋಪ್ ರೀಸರ್ಚ್ ಇನ್ಸ್ಟಿಟ್ಯೂಟ್ ಇತ್ತೀಚೆಗೆ ಪ್ರಕಟಿಸಿರುವ ಸಂಶೋಧನಾ ವರದಿಯಲ್ಲಿ ಈ ವಿಷಯ ಬಯಲಾಗಿದ್ದು, ಈ ಕುರಿತಾಗಿ ಅಘಾತಕಾರಿ ವಿಷಯಗಳನ್ನು ಹೊರಹಾಕಿದೆ ನೋಡಿ. ವರದಿಯ ಪ್ರಕಾರ ಚೀನಾದಲ್ಲಿ ಸುಮಾರು 5 ಲಕ್ಷ ಕೋಟಿ ರೂ ಮೌಲ್ಯದ ವ್ಯವಹಾರ ನಡೆಯುತ್ತಿದ್ದು ಮೊದಲ ಸ್ಥಾನದಲ್ಲಿದೆ. ಸುಮಾರು 1 ಲಕ್ಷ ಕೋಟಿ ರೂ ವ್ಯವಹಾರದೊಂದಿಗೆ ಸ್ಪೇನ್ ಎರಡನೇ ಸ್ಥಾನದಲ್ಲಿದ್ದರೆ, ಜಪಾನ್, ಉತ್ತರ ಕೊರಿಯಾ, ಅಮೇರಿಕಾವೂ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದು ಭಾರತ 7ನೇ ಸ್ಥಾನದಲ್ಲಿದೆ. ಭಾರತದಲ್ಲಿ ಈ ಉದ್ಯಮ 54 ಸಾವಿರ ಕೋಟಿ ದಾಟಿದೆ ಎಂದು ವರದಿ ಮಾಡಿದೆ.
ವಿಶೇಷ ಅಂದ್ರೆ ವರಧಿಯಲ್ಲಿ ಪ್ರಮುಖ ಸ್ಥಾನ ಪಡೆದ ರಾಷ್ಟ್ರಗಳಾದ ಚೀನಾ, ಭಾರತ, ದ.ಕೊರಿಯಾ, ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ವೇಶ್ಯಾವಾಟಿಕೆ ನಿಷೇಧಿಸಿದೆ. ಇದರ ನಡುವೆಯೂ ಈ ಉದ್ಯಮ ಹೆಮ್ಮರವಾಗಿ ಬೆಳೆದು ನಿಂತಿದೆ. ಜಪಾನ್ ಮತ್ತು ಅಮೇರಿಕಾ ದೇಶಗಳಲ್ಲಿ ವೇಶ್ಯಾವಾಟಿಕೆ ಕಾನೂನು ಮಾನ್ಯತೆ ಪಡೆದಿದೆ. ಆದರೆ ಸ್ಪೇನ್ ನಲ್ಲಿ ಪಿಂಪಿಂಗ್ ಸೇರಿದಂತೆ ಕೆಲವೊಂದು ವ್ಯವಹಾರಗಳಿಗೆ ನಿರ್ಬಂಧವಿದ್ದರೂ, ವೇಶ್ಯಾ ವಾಟಿಕೆ ಕಾನೂನಿನ ಪ್ರಕಾರ ಅಪರಾಧವಲ್ಲ. ಆದರೆ ಭಾರತದಲ್ಲಿ ವೇಶ್ಯಾವಾಟಿಕೆ ಸೇರಿದಂತೆ ಲೈಂಗಿಕತೆಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳೂ ಕಾನೂನಿನ ಪ್ರಕಾರ ಅಪರಾಧ. ಆದರೆ ನಿರ್ಬಂಧದ ನಡುವೆಯೂ ಚೀನಾ ಮೊದಲ ಸ್ಥಾನ ಪಡೆದುಕೊಂಡಿದೆ.