ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರಿ ನೌಕರನೊಬ್ಬ ಕೆಲಸದ ಅವಧಿಯಲ್ಲಿ ತನ್ನ ಕೆಲ್ಸ ಮಾಡೋದು ಬಿಟ್ಟು ಬೇರೇನೋ ಮಾಡೋಕೆ ಹೋಗಿ ಇದೀಗ ಪೇಚಿಗೆ ಸಿಲುಕಿಕೊಂಡಿದ್ದಾನೆ. ದೆಹಲಿಯ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಈತನನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಲ್ಲದೇ ಸ್ಥಳದಲ್ಲೇ ಗಂಭೀರ ಕ್ರಮ ಕೈಗೊಂಡಿದ್ದಾರೆ.
ಮನೀಷ್ ಸಿಸೋಡಿಯಾ ಅವರು ಇತ್ತೀಚಿನ ದಿನಗಳಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ದೆಹಲಿಯ ಸರ್ಕಾರಿ ಕಛೇರಿಗಳಿಗೆ ಧಿಡೀರ್ ಭೇಟಿ ಕೊಡುತ್ತಿದ್ದರು. ಅದೇ ರೀತಿಯಾಗಿ ದೆಹಲಿಯ ಸರ್ಕಾರಿ ಆಸ್ಪತ್ರೆಯೊಂದಕ್ಕೆ ಭೇಟಿ ನಿಡಿದ್ದ ಸಂದರ್ಭದಲ್ಲಿ, ಸರ್ಕಾರಿ ನೌಕರನೊಬ್ಬ ಕೊಠಡಿಯಲ್ಲಿ ಇಹಲೋಕದ ಪರವೇ ಇಲ್ಲದೇ ಕಂಪ್ಯೂಟರ್‍ನಲ್ಲಿ ಸಿನಿಮಾ ನೋಡ್ತಾ ಇದ್ದ. ತಕ್ಷಣವೇ ಅವನ ಬೆನ್ನ ಹಿಂದೆ ಹೋಗಿ ನಿಂತ ಸಿಸೋಡಿಯಾ ಅವರು ಆತನನ್ನು ತಟ್ಟಿ ಎಬ್ಬಿಸಿ ಹೊರ ಭಾಗದಲ್ಲಿ ಜನರು ಅಷ್ಟೊಂದು ಕ್ಯೂನಲ್ಲಿ ನಿಂತಿರುವಾಗ ಕೆಲಸದ ಅವಧಿಯಲ್ಲಿ ಸಿನಿಮಾ ನೋಡುತ್ತಿದ್ದೀರ ಕಛೇರಿಗೆ ಬರೋದು ಈ ಕೆಲ್ಸಕ್ಕಾ ಎಂದು ಪ್ರಶ್ನಿಸಿ ಕೂಡಲೇ ಆತನನ್ನು ಕೆಲಸದಿಂದ ತೆಗೆದು ಹಾಕುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ. ಇದೀಗ ಸರ್ಕಾರಿ ನೌಕರನನ್ನು ಸ್ಥಳದಲ್ಲೇ ಬೆವರಿಳಿಸಿದ ಉಪ ಮುಖ್ಯಮಂತ್ರಿ ಸಿಸೋಡಿಯಾ ಅವರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://www.youtube.com/watch?v=EXeN8z_UFro&list=PLrnE4LMxty4YHGL_726N8_K6uuBArNwdY
POPULAR STORIES :
ವಿಶ್ವದ ಅತೀ ಹಿರಿಯ ವ್ಯಾಘ್ರ – ಮಚ್ಲಿ ದಿ ಕ್ವೀನ್ ಆಫ್ ಟೈಗರ್ಸ್ ಇನ್ನಿಲ್ಲ..!
ಜೋಗ ಜಲಪಾತದ ಅಭಿವೃದ್ಧಿ ಹೊಣೆ ಬಿ.ಆರ್.ಶೆಟ್ಟಿ ಒಡೆತನದ ಬಿ.ಆರ್.ಎಸ್.ವೆಂಚರ್ಸ್‍ಗೆ
ಮುಂದಿನ ತಿಂಗಳಿಂದ ಡ್ಯಾಂ ನೀರು ಕೃಷಿಗಿಲ್ಲ, ಕುಡಿಯೋಕೆ ಮಾತ್ರ..!
ಇಪ್ಪತ್ತೈದು ಅಡಿ ಎತ್ತರದಿಂದ ನೀರಿಗೆ ಜಿಗಿದ ಬಾಲಕ..! ಮುಂದೇನಾಯ್ತು..? ಈ ಸ್ಟೋರಿ ಓದಿ.
ಸಿಸ್ಕೋ ಸಂಸ್ಥೆಯಿಂದ ಹದಿನಾಲ್ಕು ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್.?
ಸೆಕ್ಸ್ ಉದ್ಯಮದಲ್ಲಿ ಚೀನಾ ನಂ.1 ಭಾರತ ನಂ.7..!