6th ಸೆನ್ಸ್ ಬಗ್ಗೆ ಲೇಖನ ಬರೆಯಬೇಕು ಅಂತ ಆ ಪತ್ರಕರ್ತ ಡಿಸೈಡ್ ಮಾಡ್ತಾನೆ..! ಆ ಲೇಖನಕ್ಕಾಗಿ ಇನ್ಫಾರ್ಮೇಷನ್ ಕಲೆಕ್ಟ್ ಮಾಡೋಕೆ ಒಬ್ಬ ಡಾಕ್ಟರ್ ಬಳಿಗೆ ಹೋಗ್ತಾನೆ. ಆ ಡಾಕ್ಟರ್ ಈ ಪತ್ರಕರ್ತನನ್ನು ರೋಗಿಯ ಬಳಿಗೆ ಕರೆದುಕೊಂಡು ಹೋಗ್ತಾರೆ. ಪತ್ರಕರ್ತನನ್ನು ಕಂಡಿದ್ದೇ ತಡ ಆ ರೋಗಿ ವಿಚಿತ್ರ ವಿಚಿತ್ರವಾಗಿ ಮಾತಾಡೋಕೆ ಶುರು ಮಾಡ್ತಾನೆ…!
ಆ ರೋಗಿ ಏಕೆ ಹೀಗಾಡಿದ.? ಅನ್ನೋ ಪ್ರಶ್ನೆ ನನ್ನ ಸಹ ಕಾಡ್ತಾ ಇದೆ..! ಡೈರೆಕ್ಟರ್ ವೇಮಗಲ್ ಜಗನ್ನಾಥ್ ಅವ್ರತ್ರ ಕೇಳಿದ್ರೆ? ರೀ ನಮ್ ನಂಬಿ ದುಡ್ಡು ಹಾಕಿರೋ ಪ್ರೊಡ್ಯುಸರ್ ಏನ್ ಮಾಡ್ಬೇಕ್ರೀ..ಸ್ವಾಮಿ ಅಂತ ಪ್ರಶ್ನೆ ಮಾಡ್ತಾರೆ..!
ಸಾರ್, ನೀವಾದ್ರು ಹೇಳಿ ಸಾರ್ ..ಈ ಸ್ಟೋರಿ ನಿಮಗೆ ಗೊತ್ತಂತೆ ಎಂದು ಕರ್ವ ಖ್ಯಾತಿಯ ತಿಲಕ್ ಶೇಖರ್ ಅವರಿಗೆ ಕೇಳಿದ್ರೆ…?ಅವ್ರೂ ಏನೂ ಹೇಳಿಲ್ಲ..!
ಇನ್ನೊಬ್ಬ ನಟ ರಘು ಭಟ್ ಹತ್ರ ಕೇಳಿದ್ರೆ…ಲೋ ಎಲ್ಲಾ ಕತೆ ಕೇಳ್ಸೊಂಡು ಬರೆದು ಬಿಟ್ರೆ ಸಿನಿಮಾ ಕತೆ ಏನ್ ಗುರೂ..ಅಂತ ಜಗಳಕ್ಕೆ ಬಂದ್ ಬಿಟ್ರು..!
ಕ್ಷಮಿಸಿ..ಯಾವ್ ಫಿಲ್ಮ್, ಏನ್ ಕತೆ ..? ಸುಮ್ನೆ ತಲೆ ತಿನ್ತಿದ್ದಾನೆಂದು ಬೈಕೋ ಬೇಡಿ..!
ಇಷ್ಟೊತ್ತಿಗಾಗ್ಲೇ ನಿಮಗೆ ಗೊತ್ತಾಗಿರೋ ಹಾಗೆ ತಿಲಕ್ ಶೇಖರ್, ರಘು ಭಟ್ ನಾಯಕ ನಟರುಗಳಾಗಿ ನಟಿಸಿರುವ ಚಿತ್ರದ ಕತೆ ಇದು..! ಸಿನಿಮಾದ ಹೆಸರು ‘ಅನ್ವೇಷಿ’ ..
ಈ ಸಿನಿಮಾದಲ್ಲಿ ಜರ್ನಲಿಸ್ಟ್ ನ ನೋಡಿದಾಕ್ಷಣ ರೋಗಿ ಏಕೆ ಹೆಂಗೆಂಗೋ ಮಾತಾಡೋಕೆ ಶುರುಮಾಡ್ದಾ? ಆ ಪತ್ರಕರ್ತ ತಿಲಕ್ ಶೇಖರ್ರಾ? ಅಥವಾ ರಘು ಭಟ್ ಅವ್ರಾ? ಇವರಿಬ್ರೂ ಅಲ್ದೆ ಇನ್ಯಾರೋ ಸೂಪರ್ ಸ್ಟಾರ್ ಒಬ್ರು ಗೆಸ್ಟ್ ರೋಲ್ ಮಾಡಿ ಹೋಗಿದ್ದಾರಾ? ಅನ್ನೋದನ್ನು ತಿಳಿಯೋಕೆ ಅಕ್ಟೋಬರ್ ಮೊದಲವಾರದ ತನಕ ಕಾಯಲೇ ಬೇಕು..!
ಹೌದು, ವೆಮುಗಲ್ ಜಗನ್ನಾಥ್ ಅವರು ಕತೆ , ಚಿತ್ರಕತೆ ಬರೆದು ನಿರ್ದೇಶಿಸಿರುವ ಸಿನಿಮಾ ಅನ್ವೇಷಿ.
ಸೆಪ್ಟೆಂಬರ್ ಮೊದಲವಾರದಲ್ಲಿ ಆಡಿಯೋ ಲಾಂಚ್ ಆಗ್ತಿದೆ..ಅಕ್ಟೋಬರ್ ಮೊದಲವಾರದಲ್ಲಿ ತೆರೆಮೇಲೆ ಬರಲಿದೆ.
ನಾಯಕಿಯಾಗಿ ದಿಶಾಪೂವಯ್ಯ, ನಾಯಕನ ಗೆಳೆಯನಾಗಿ ವಿಕ್ರಂಸೂರ್ಯ ಕಾಣಿಸಿಕೊಂಡಿದ್ದಾರೆ.
ಅವಿನಾಶ್, ರಮೇಶ್ ಭಟ್, ಬ್ಯಾಂಕ್ ಜನಾರ್ದನ್, ಶ್ರದ್ದಾಶರ್ಮಾ, ಅನು ಅಗರ್ವಾಲ್ ಸೇರಿದಂತೆ ಹಲವು ಹೆಸರಾಂತ ಕಲಾವಿದರು ಅನ್ವೇಷಿಗಾಗಿ ಬಣ್ಣ ಹಚ್ಚಿದ್ದಾರೆ.
ಜಯರಾಂ ಅವರ ನಿರ್ಮಾಣದ ಈ ಚಿತ್ರಕ್ಕೆ ಯುವ ಸಂಗೀತ ನಿರ್ದೇಶಕ ಹೇಮಂತ್ ಸಂಗೀತ ಸಂಯೋಜಿಸಿದ್ದಾರೆ.
ಹಾರರ್ ಥ್ರಿಲ್ಲರ್ ಸಿನಿಮಾ ಅನ್ವೇಷಿ ಸಿನಿರಸಿಕರ ಮನಗೆಲ್ಲುತ್ತೆ, ಬಾಕ್ಸ್ ಆಫೀಸಲ್ಲೂ ಸದ್ದು ಮಾಡುತ್ತೆ ಅನ್ನುವುದು ನಿರ್ದೇಶಕ, ನಿರ್ಮಾಪಕ ಸೇರಿದಂತೆ ಇಡೀ ಚಿತ್ರತಂಡದ ನಿರೀಕ್ಷೆ.
POPULAR STORIES :
ನನ್ನ ಅಮ್ಮ ಹಾಗೂ ನನ್ನ ತಂದೆ ಆತ್ಮ ಸಂಗಾತಿಗಳು, ಜನುಮದ ಜೋಡಿ ಇದ್ದಹಾಗೆ….
ಓಣಂ ಹಬ್ಬಕ್ಕೆ ಆನ್‍ಲೈನ್‍ನಲ್ಲಿ ಮದ್ಯಪಾನ ಮಾರಾಟ..!
ಸಾವಿನ ಮನೆಗೆ ಬಾರ್ ಗರ್ಲ್ಸ್ ರನ್ನು ಕರುಸ್ಕೊಳ್ತಾರೆ…!
ಇಂದು ವಿಶ್ವ ಫೋಟೋಗ್ರಫಿ ದಿನ… ನೀವು ನೋಡಿ ಕೆಲವು ಅದ್ಭುತ ಚಿತ್ರಗಳು..!
ಆಸ್ಪತ್ರೆಯಲ್ಲಿ ಜನ ಕ್ಯೂ ನಲ್ಲಿ ನಿಂತಿದ್ದರೂ ಸರ್ಕಾರಿ ನೌಕರ ಏನ್ ಮಾಡ್ತಾ ಇದ್ದ..? ಈ ವಿಡಿಯೋ ನೋಡಿ.
ವಿಶ್ವದ ಅತೀ ಹಿರಿಯ ವ್ಯಾಘ್ರ – ಮಚ್ಲಿ ದಿ ಕ್ವೀನ್ ಆಫ್ ಟೈಗರ್ಸ್ ಇನ್ನಿಲ್ಲ..!
ಜೋಗ ಜಲಪಾತದ ಅಭಿವೃದ್ಧಿ ಹೊಣೆ ಬಿ.ಆರ್.ಶೆಟ್ಟಿ ಒಡೆತನದ ಬಿ.ಆರ್.ಎಸ್.ವೆಂಚರ್ಸ್‍ಗೆ