ದೇಹದಲ್ಲಿರೋ ವಿಟಮಿನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ..??

Date:

ನಾವು ಒಳ್ಳೆ ಹೆಲ್ತೀ ಫುಡ್ ನ್ನೇ ಸೇವಿಸುತ್ತೇವೆ,ಆದ್ರೂ ಯಾಕೆ ನಮಗೆ ಈ ತೊಂದ್ರೆ ಅಂತ ನಾವು ಅನೇಕ ಬಾರಿ ಅಂದುಕೊಳ್ತೇವೆ,ಆದ್ರೆ ಕೆಲವೊಮ್ಮೆ ನಾವು ಸೇವಿಸುವ ಆಹಾರ ಆರೋಗ್ಯಕರ ವಾಗಿಯೇನೋ ಇರುತ್ತೆ ಆದ್ರೆ ಕೆಲ್ವೊಂದು ಆವಶ್ಯಕತೆಯನ್ನು ಪೂರೈಸಲು ಇವುಗಳು ವಿಫಲವಾಗಬಹುದು,ಹಾಗಾಗಿ ನಮಗೆ,ನಮ್ಮ ದೇಹಕ್ಕೆ ಬೇಕಾಗೋ ವಿಟಾಮಿನ್ ಹಾಗೂ ಮಿನರಲ್ಸ್ ಗಳ ಪೂರೈಕೆ ಸಮರ್ಪಕವಾದ ರೀತಿಯಲ್ಲಿ ಆಗ್ದ ಕಾರಣದಿಂದ ಇವುಗಳ ಬಗ್ಗೆ, ನಮ್ಮ ದೇಹವು ನಮಗೆ ಕೆಲವೊಂದು ವಿಧದಲ್ಲಿ ಸಂಖೇತವನ್ನು ನೀಡುತ್ತದೆ.ಈ ಕೆಲವು ಸಂಖೇತಗಳ ಮೂಲಕ ನಾವು ನಮ್ಮ ಶರೀರಕ್ಕೆ ಯಾವ ವಿಟಾಮಿನ್ ಕಡಿಮೆ ಇದೆ ಎಂದು ತಿಳಿಯಬಹುದು;ಅಷ್ಟೇ ಅಲ್ಲ ಅದಕ್ಕೆ ಬೇಕಾದ ರೀತಿಯಲ್ಲಿ ನಮ್ಮ ಆಹಾರ ಕ್ರಮದಲ್ಲೂ ಬದಲಾವಣೆ ಮಾಡಬಹುದು.
1.ತುಟಿ ಒಡೆಯುವಿಕೆ
ಐರನ್,ಝಿಂಕ್ ಹಾಗೂ B12 ಕೊರತೆಯಿಂದಾಗಿ ಈ ತರಹದ ತೊಂದರೆ ಉಂಟಾಗುತ್ತದೆ.
ಪರಿಹಾರ
ನಿಮ್ಮ ಆಹಾರದಲ್ಲಿ ಮೊಟ್ಟೆ,ದೊಡ್ಡ ಮೆಣಸಿನಕಾಯಿ(ಕ್ಯಾಪ್ಸಿಕಂ),ಕ್ಯಾಬೀಜ್,ನೆಲಗಡಲೆ ಹಾಗೂ ಬೇಳೆ ಕಾಳುಗಳನ್ನು ಸೇರಿಸಬೇಕು.
2.ಮುಖದಲ್ಲಿನ ಸಣ್ಣ ಸಣ್ಣ ಗುಳ್ಳೆಗಳು
ವಿಟಾಮಿನ್ A ಹಾಗೂ ವಿಟಾಮಿನ್ C ಯ ಕೊರತೆಯಿಂದ ಈ ತೊಂದರೆಗಳುಂಟಾಗುತ್ತದೆ.
ಪರಿಹಾರ
ಬೇಯಿಸಿದ ಮೊಟ್ಟೆ,ಕ್ಯಾಬೀಜ್,ನಟ್ಸ್ ಹಾಗೂ ಬಾಳೆ ಹಣ್ಣುಗಳನ್ನು ಸೇವಿಸಿದಲ್ಲಿ ಪರಿಹಾರ.
3.ಕೂದಲುದುರುವಿಕೆ
B7,ಝಿಂಕ್ ಹಾಗೂ ಪ್ರೋಟೀನ್ ಗಳ ಕೊರತೆಯಿಂದ ಈ ಕೂದಲುದುರುವಿಕೆಯುಂಟಾಗುತ್ತದೆ; ಹಾಗೂ ಇವುಗಳ ಹೊಳಪು ಕಡಿಮೆಯಾಗುತ್ತದೆ.
ಪರಿಹಾರ
ಮೊಟ್ಟೆ,ಬೇಳೆ,ಬಾದಾಮ್,ನಟ್ಸ್ ಹಾಗೂ ಚೀನಿಕಾಯಿಯ ಬೀಜಗಳು ಈ ವಿಟಾಮಿನ್ ಗಳ ಕೊರತೆಯನ್ನು ನೀಗಿಸುತ್ತವೆ.
4.ತೂಕ ಕಡಿಮೆಯಾಗುವಿಕೆ
ಯಾವುದೇ ಕಾರಣವಿಲ್ಲದೆ ನಿಮ್ಮ ದೇಹದ ತೂಕ ಕಡಿಮೆಯಾಗುತ್ತಿದೆಯೆಂದಾದಲ್ಲಿ ನಿಮ್ಮ ದೇಹದಲ್ಲಿ ವಿಟಾಮಿನ್ D ಅಂಶ ಕಡಿಮೆ ಇದೆ ಎಂದರ್ಥ.
ಪರಿಹಾರ
ಮೀನುಗಳು,ಚೀಸ್,ಮೊಟ್ಟೆ ಹಾಗೂ ಮಶ್ರೂಮ್ ವಿಟಾಮಿನ್ D ಗಳ ಒಂದು ಉತ್ತಮ ಖಜಾನೆ.
5.ಕೈ,ಕಾಲುಗಳು ಬಲಹೀನವಾಗುವಿಕೆ(ಜೋಮು ಹಿಡಿದಂತಹ ಅನುಭವ)
ವಿಟಾಮಿನ್ B,B6,B9,B12 ಗಳ ಕೊರತೆಯಿಂದ ನರಗಳ ಮೇಲೆ ಪ್ರಭಾವ ಬೀರಿ ಕೈಕಾಲುಗಳು ಹೆಚ್ಚಾಗಿ ಜೋಮು ಹಿಡಿದಂತಹ ಅನುಭವ ತರುತ್ತದೆ
ಪರಿಹಾರ
ಪಾಲಕ್,ಮೊಟ್ಟೆ,ಬೀನ್ಸ್,ಬೀಟ್ ರೋಟ್,ಚಿಕನ್ಸ್ ಇತ್ಯಾದಿಗಳಿಂದ ಪರಿಹಾರ.
6.ಪದೇ ಪದೇ ಕಾಲಿನ ಮಾಂಸ ಪೇಶಿಗಳ ಎಳೆಯುವಿಕೆ
ಪೊಟ್ಯಾಷಿಯಂ ಹಾಗೂ ಕ್ಯಾಲ್ಷಿಯಂ ಗಳ ಕೊರತೆಯಿಂದ ಮಾಂಸ ಪೇಶಿಗಳು ಎಳೆಯಲ್ಪಡುತ್ತವೆ.
ಪರಿಹಾರ
ಬಾಳೆಹಣ್ಣು,ಬಾದಾಮ್,ಚೀನಿಕಾಯಿ,ಸೇಬು ಹಾಗೂ ಹಸಿರುತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
7.ತಲೆನೋವು ಮತ್ತು ಸುಸ್ತು
ಮೆಗ್ನೇಶಿಯಂ ಕೊರತೆಯಿಂದ ತಲೆನೋವು ಹಾಗೂ ಸುಸ್ತು ಉಂಟಾಗುತ್ತದೆ ಹಾಗೂ ಹಸಿವು ಕಡಿಮೆಯಾಗುತ್ತದೆ.
ಪರಿಹಾರ
ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಹೇರಳವಾಗಿದೆ,ಇದಲ್ಲದೆ,ಪಾಲಕ್,ಬಾದಾಮ್,ಬೀನ್ಸ್ ಗಳನ್ನು ಸೇವಿಸಿರಿ.
8.ಉಗುರುಗಳು ಗಡುಸಾಗುವುದು ಹಾಗೂ ತಲೆ ಹೊಟ್ಟು
ಒಮೇಗಾ- 3 ಹಾಗೂ 6 ವಿಟಾಮಿನ್ ಕೊರತೆಯಿಂದ ಉಗುರುಗಳು ಗಟ್ಟಿಯಾಗಿ ಬಲುಬೇಗನೆ ತುಂಡಾಗುತ್ತದೆ,ಜೊತೆಗೆ ಡ್ಯಾಂಡ್ರಫ್ ಸಮಸ್ಯೆಯೂ ಉಂಟಾಗುತ್ತದೆ.
ಪರಿಹಾರ
ಮೀನು ಹಾಗೂ ಆಕ್ರೋಟ್ (ಡ್ರೈ ಫ಼್ರುಟ್) ಸೇವನೆ ಉತ್ತಮ.
9.ಗಂಟುಗಳ ನೋವು
ವಿಟಾಮಿನ್ ಆ ಯಿಂದಾಗಿ ಮೂಳೆಗಳು ಬಲಹೀನವಾಗಿ ಗಂಟು ನೋವು ಶುರುವಾಗುತ್ತದೆ.
ಪರಿಹಾರ
ಹಾಲು,ಆರೆಂಜ್ ಜ್ಯೂಸ್ ಹಾಗೂ ಮೀನುಗಳು ಇವಕ್ಕೆ ಉತ್ತಮ ರಾಮಬಾಣ.ಜೊತೆಗೆ ಸೂರ್ಯನ ಬಿಸಿಲಿನಿಂದಲೂ ವಿಟಾಮಿನ್ ಆ ಲಭ್ಯ.
10.ಕೈಗಳು,ಕಾಲುಗಳು ಹಾಗೂ ಕೆನ್ನೆಗಳಲ್ಲಿ ಸಣ್ಣನೆಯ ಮೊಡವೆ ತರನಾದ ಬೊಕ್ಕೆಗಳೇಳುತ್ತವೆ.
ಫ್ಯಾಟಿ ಆಸಿಡ್ಸ್,ವಿಟಾಮಿನ್ A ಹಾಗೂ D ಯ ಕೊರತೆಯಿಂದ ಇವುಗಳುಂಟಾಗುತ್ತವೆ.
ಪರಿಹಾರ
ಹೆಲ್ದೇ ಫ್ಯಾಟ್ಸ್ ಗಳಿಗಾಗಿ ಆಕ್ರೋಟ್,ಬಾದಾಮ್,ಮೀನು ಹಾಗೂ ಅಗಸೆ ಬೀಜಗಳನ್ನು ಸೇವಿಸಿ.ಇನ್ನು ವಿಟಾಮಿನ್ಸ್ ಗಳಿಗಾಗಿ ಕ್ಯಾರೆಟ್,ಹಸಿರು ತರಕಾರಿ ಹಾಗೂ ದೊಡ್ಡ ಮೆಣಸು ಉಪಯೋಗಿಸಿರಿ.

  • ಸ್ವರ್ಣಲತ ಭಟ್

POPULAR  STORIES :

ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!

ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?

ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!

ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!

ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!

ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.

18 ವರ್ಷ ತುಂಬುದ್ರೆ 37 ಸಾವಿರ ಆಫರ್…!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...