ಕಾವೇರಿ ನೀರು ಹಂಚಿಕೆ ವಿವಾದ : ಇಂದು ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ

Date:

ತಮಿಳು ನಾಡಿಗೆ ಕರ್ನಾಟಕ ಸರ್ಕಾರ ಕಾವೇರಿ ನೀರು ಬಿಡುತ್ತಿಲ್ಲ ಎಂದು ಆರೋಪಿಸಿ ತಮಿಳು ನಾಡು ಸರ್ಕಾರ ಸುಪ್ರೀಂ ಕೋರ್ಟ್‍ಗೆ ಮನವಿ ಅರ್ಜಿ ಸಲ್ಲಿಸಿರುವ ಹಿನ್ನಲೆಯಲ್ಲಿ ಇಂದು ಸುಪ್ರೀಂ ಕೋರ್ಟ್ ಪೀಠದ ಮುಂದೆ ವಿಚಾರಣೆ ಮುಂದುವರೆಯಲಿದ್ದು, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‍ನಲ್ಲಿ ಕಾವೇರಿ ನದಿ ನೀರಿನ ಇಂದಿನ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಳ್ಳಲು ಪೂರ್ವ ತಯಾರಿ ನಡೆಸಿಕೊಂಡಿದೆ.
ಕಳೆದ ಶುಕ್ರವಾರದಂದು ಈ ಕುರಿತು ಮೊದಲ ವಿಚಾರಣೆ ನಡೆÀದಿದ್ದು, ಸುಪ್ರಿಂ ಕೋರ್ಟ್‍ನ ನ್ಯಾಯಾ ಪೀಠ ಉಭಯ ರಾಜ್ಯಗಳ ವಾದವನ್ನು ಆಲಿಸಿತ್ತು. ಈ ವೇಳೆ ನ್ಯಾಯಾಮೂರ್ತಿಗಳು ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಲಾಗಿತ್ತು.
ಸುಪ್ರೀಂ ಕೋರ್ಟ್ ನ್ಯಾಯ ಪೀಠದ ಅಭಿಪ್ರಾಯದಂತೆ ತಮಿಳು ನಾಡಿಗೆ ಕಾವೇರಿ ನದಿ ನೀರನ್ನು ಸ್ವಲ್ಪ ಪ್ರಮಾಣದಲ್ಲಿ ಬಿಡುವುದು ಅನಿವಾರ್ಯತೆ ಇದೆ ಎಂದು ತಿಳಿಯಲಾಗಿದೆ. ಈ ಸಂಬಂಧ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟಿಲ್ ಅವರೊಂದಿಗೆ ದಿಲ್ಲಿಯಲ್ಲಿ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಕಾವೇರಿ ನದಿ ನೀರಿನ ಪರ ವಾದ ನಡೆಸುತ್ತಿರುವ ಎಸ್. ನಾರಿಮನ್ ಅವರನ್ನು ಭೇಟಿ ನಡೆಸಿ ಸುಧೀರ್ಘ ಚರ್ಚೆ ನಡೆಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ತಮಿಳು ನಾಡಿಗೆ ನೀರು ಹರಿಸಬೇಕೆಂದು ಹೇಳಿದರೆ ನೀರು ಬಿಡುವ ಅನಿವಾರ್ಯತೆಯನ್ನು ರಾಜ್ಯ ಸರ್ಕಾರ ಎದುರಿಸಲು ಸಿದ್ದರಾಗಬೇಕಿದೆ. ಆದರೆ ರಾಜ್ಯದ ಕೆಆರ್‍ಎಸ್ ನೀರಿನ ಇಂದಿನ ಮಟ್ಟ ತೀರಾ ಹದಗೆಟ್ಟಿದ್ದು ಪ್ರಸ್ತುತದಲ್ಲಿ 90 ಅಡಿಯಷ್ಟೇ ನೀರಿನ ಪ್ರಮಾಣವಿದೆ. ಈ ಕುರಿತು ಸುಪ್ರೀಂ ಕೋರ್ಟ್‍ಗೆ ವಾದ ಮಂಡಿಸಲು ರಾಜ್ಯ ಪರ ವಕೀಲರ ತಂಡ ಸಿದ್ದವಾಗಿದೆ.

POPULAR  STORIES :

ದೇಹದಲ್ಲಿರೋ ವಿಟಮಿನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ..??

ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!

ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?

ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!

ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!

ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!

ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.

18 ವರ್ಷ ತುಂಬುದ್ರೆ 37 ಸಾವಿರ ಆಫರ್…!

Share post:

Subscribe

spot_imgspot_img

Popular

More like this
Related

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ!

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ! ಕನ್ನಡದ ಪ್ರಸಿದ್ಧ ರಿಯಾಲಿಟಿ...

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...