ವ್ಯವಹಾರ ನಿಮಿತ್ತ ಮೂವರು ಗೆಳೆಯರೊಂದಿಗೆ ಮುಂಬೈಗೆ ಆಗಮಿಸಿದ್ದ ಬರೋಡಾದ ಅಜಯ್ ಉಪಧ್ಯಾಯ ಎಂಬಾತ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಫ್ಲಾಟ್‍ಫಾರ್ಮ್ ಅಡಿಗೆ ಸಿಕ್ಕು ಕೂದಲೆಳೆಯ ಅಂಚಿನಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಮುಂಬೈ ರೈಲು ನಿಲ್ದಾಣದಲ್ಲಿ ಸಂಭವಿಸಿದೆ.
50 ವರ್ಷ ವಯಸ್ಸಿನ ಈತ ತಮ್ಮ ಊರಿಗೆ ವಾಪಾಸ್ಸು ತೆರಳಲು ಶನಿವಾರ ಸಂಜೆ ರಾಜಧಾನಿ ಎಕ್ಸಪ್ರೆಸ್ ರೈಲನ್ನು ಹತ್ತುವ ವೇಳೆ ಈ ದುರ್ಘಟನೆ ನಡೆದಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಜವರಾಯನನ್ನು ಗೆದ್ದಿದ್ದಾರೆ. ಆಯ ತಪ್ಪಿ ಕೆಳಗೆ ಬಿದ್ದ ಸ್ನೇಹಿತನನ್ನು ರಕ್ಷಿಸಲು ಕೂಡಲೇ ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದಾರೆ. ಅಜಯ್ ಕೆಳಗೆ ಬಿದ್ದ ರಭಸಕ್ಕೆ ದೇಹದ ನಾನಾ ಭಾಗಗಳಲ್ಲಿ ತೆರಚಿ ಹೋಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಹೀಗೆಲ್ಲಾ ಪ್ರಯಾಣಿಕರು ಗಡಿ ಬಿಡಿಯಲ್ಲಿ ರೈಲು ಹತ್ತುವ ಸಂದರ್ಭದಲ್ಲಿ ಏನಾದರೊಂದು ಅನಾಹುತಗಳನ್ನು ಮಾಡಿಕೊಳ್ಳುತ್ತಲೇ ಇರುತ್ತಾರೆ. ರೈಲು ಹತ್ತುವಾಗ ಪ್ರಯಾಣಿಕರು ಎಚ್ಚರ ವಹಿಸಬೇಕು ಎಂದು ರೈಲ್ವೇ ಇಲಾಖೆ ಮನವಿ ಮಾಡಿಕೊಂಡಿದೆ.
POPULAR STORIES :
ದೇಹದಲ್ಲಿರೋ ವಿಟಮಿನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ..??
ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?
ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!
ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!
ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!






