ಕೇಂದ್ರ ಸರ್ಕಾರ ಒಂದಾದ ನಂತರ ಒಂದರಂತೆ ಪೆಟ್ರೋಲಿಯಂ ವ್ಯವಹಾರಗಳಲ್ಲಿ ತೀವ್ರ ತರವಾದ ಬದಲಾವಣೆಗಳನ್ನು ತರುತ್ತಿದ್ದು ಇನ್ನು ಕೆಲವೇ ವರ್ಷದಲ್ಲಿ ಭಾರತವನ್ನು ಪೆಟ್ರೋಲಿಯಂ ಆಮದು ಮುಕ್ತ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಬುಧವಾರ ಈ ಕುರಿತು ಮಾತನಾಡಿದ ಅವರು ಭಾರತದಲ್ಲೇ ಲಭ್ಯವಾಗುವಾಗುವಂತಹ ಪರ್ಯಾಯ ಇಂಧನಗಳಾದ ಎಥನಾಲ್, ಮೆಥನಾಲ್, ಬಯೋ ಸಿಎನ್‍ಜಿ, ಮುಂತಾದ ಬಯೋ ಉತ್ಪನ್ನಗಳನ್ನು ಅಭಿವೃದ್ದಿ ಪಡಿಸಿ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತರುವ ಪೆಟ್ರೋಲಿಯಂ ಉತ್ಪನ್ನಗಳನ್ನು ನಿಲ್ಲಿಸುವ ಮೂಲಕ ಗ್ರಾಮೀಣ ಹಾಗೂ ರೈತರಿಗೆ ವಿಫುಲ ಪ್ರಮಾಣದಲ್ಲಿ ಉದ್ಯೋಗ ನೀಡುವ ಭರವಸೆ ಇದೆ ಎಂದು ತಿಳಿಸಿದ್ದಾರೆ
ವಿಶ್ವದಲ್ಲೇ ಅತೀ ವೇಗವಾಗಿ ಮುಂದುವರೆಯುತ್ತಿರುವ ರಾಷ್ಟ್ರದಲ್ಲಿ ಭಾರತವೂ ಒಂದಾಗಿದ್ದು, ನಮ್ಮಲ್ಲಿ ಕೃಷಿ ಉತ್ಪನ್ನಗಳು, ಕಲ್ಲಿದ್ದಲು ಹಾಗೂ ವಿದ್ಯುತ್ ಉತ್ಪಾದನೆ ವಿಫುಲ ಪ್ರಮಾಣದಲ್ಲಿದೆ ಎಂದಿದ್ದಾರೆ.
ಆದರೆ ಕೃಷಿ ವಲಯದಲ್ಲಿ ರೈತರಿಗೆ ಸರಿಯಾದ ಮಾರುಕಟ್ಟೆ ಸಿಗದೇ ನಿರ್ಗತಿಕರಾಗಿರುವ ಪರಿಸ್ಥಿತಿಯನ್ನು ನಾವು ನೋಡಿದ್ದೇವೆ, ಕೃಷಿ ವಲಯಗಳಲ್ಲಿ ಹಲವು ರೀತಿಯಲ್ಲಿ ಸಮಸ್ಯೆಗಳು ಉಲ್ಭಣಗೊಂಡಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ಅವನ್ನೆಲ್ಲಾ ಹೋಗಲಾಡಿಸುವ ಉದ್ದೇಶದಿಂದ ಗ್ರಾಮೀಣ ಭಾಗದ ಕೃಷಿ ಕಾರ್ಮಿಕರ ಅಭಿವೃದ್ದಿಗಾಗಿ ಕೃಷಿ ಉತ್ಪನ್ನಗಳಾದ ಹತ್ತಿ, ಗೋಧಿ, ಭತ್ತದ ಕಚ್ಚಾ ವಸ್ತುಗಳಿಂದ ಎಥನಾಲ್ ಇಂಧನವನ್ನು ತಯಾರಿಸಲಾಗುವುದು ಎಂದರು. ಈ ಕಚ್ಚಾ ಉತ್ಪನ್ನಗಳನ್ನು ಬಳಸಿಕೊಂಡು ನಾವು ಬಯೋ ಇಂಧನಗಳನ್ನಾಗಿ ಬಳಸಿಕೊಂಡರೆ ನಮ್ಮ ರಾಷ್ಟ್ರಕ್ಕೆ ವಾರ್ಷಿಕ 5 ಲಕ್ಷ ಕೋಟಿ ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಯೂರೋಪ್ ರಾಷ್ಟ್ರಗಳಲ್ಲಿ ಈ ಭಯೋ ಇಂಧನಗಳನ್ನು ಉತ್ಪನ್ನವನ್ನು ಬಳಕೆ ಮಾಡುತ್ತಿದ್ದು ಅಲ್ಲಿ ಒಂದು ಟನ್ ಭತ್ತದ ಕಚ್ಚಾ ಪದಾರ್ಥದಿಂದ 400 ಲೀಟರ್ ಎಥನಾಲ್ ಉತ್ಪಾದನೆ ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಉತ್ತರ ಮತ್ತು ಪಶ್ಚಿಮ ಪ್ರಾಂತ್ಯಗಳಲ್ಲೂ ಬಿದಿರಿನಿಂದ ಎಥನಾಲ್ ಉತ್ಪಾದನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಅದೇ ರೀತಿಯಲ್ಲಿ ನಮ್ಮ ರಾಷ್ಟ್ರದಲ್ಲಿ ವ್ಯರ್ಥವಾಗುತ್ತಿರುವ ಕಚ್ಚಾ ವಸ್ತುಗಳಿಂದ ಬಯೋ ಇಂಧನ ತಯಾರಿಕೆ ಮಾಡುವ ಕುರಿತು ಮುಂದಿನ ದಿನಗಳಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ನಿತೀತ್ ಗಡ್ಕರಿ ತಿಳಿಸಿದ್ದಾರೆ.
POPULAR STORIES :
ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!
ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!
ಸೆಪ್ಟೆಂಬರ್ 9ಕ್ಕೆ ಕರ್ನಾಟಕ ಬಂದ್‍ಗೆ ಕರೆ
ಮುಸ್ಲೀಂ ಮಕ್ಕಳಿಗೆ ಕುರಾನ್ ಹೇಳಿ ಕೊಡ್ತಾಳೆ ಈ ಹಿಂದು ಯುವತಿ..!