ಈ ಹಿಂದೆ ಇರಾಕ್ ಮತ್ತು ಸಿರಿಯಾಗಳಲ್ಲಿ ಬುರ್ಖಾ ಧರಿಸದ ಹೆಣ್ಣು ಮಕ್ಕಳನ್ನು ಹಾಡ ಹಗಲೇ ರಸ್ತೆಯಲ್ಲಿ ನಿರ್ಧಾಕ್ಷಿಣ್ಯವಾಗಿ ಹತ್ಯೆ ಮಾಡುತ್ತಿದ್ದ ಐಸಿಸ್, ಇದೀಗ ಹೆಣ್ಣು ಮಕ್ಕಳು ಬರ್ಖಾ ಹಾಕುವುದನ್ನೇ ನಿಷೇಧಿಸಿದೆ. ಸಿರಿಯಾ ದೇಶದಲ್ಲಿ ತಮ್ಮ ಮೂಲಭೂತವಾದಿಗಳಿಂದಲೇ ಕುಖ್ಯಾತಿ ಪಡೆದಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಅದರ ವಾದಗಳೇ ಇದೀಗ ತಿರುಗು ಬಾಣಗಳಾಗಿ ಪರಿಣಮಿಸಿದೆ. ಈ ಹಿಂದೆ ಬುರ್ಖಾ ಧರಿಸದವರನ್ನು ಅಮಾನವೀಯವಾಗಿ ಹತ್ಯೆ ಮಾಡುತ್ತಿದ್ದ ಈ ಸಂಘಟನೆ ಈಗ ಹೆಣ್ಣು ಮಕ್ಕಳು ಬುರ್ಖಾ ಧರಿಸಬಾರದು ಎಂದು ಆದೇಶ ನೀಡಿದೆ. ಇರಾಕ್‍ನ ಮೊಸುಲ್ ಪಟ್ಟಣದ ಐಸಿಸ್ ಭದ್ರತಾ ಕೇಂದ್ರಗಳಿಗೆ ಆಗಮಿಸುವ ಹೆಣ್ಣು ಮಕ್ಕಳು ಬುರ್ಖಾ ಧರಿಸಕೂಡದು ಎಂದು ಉಗ್ರರು ಆದೇಶ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬುರ್ಖಾ ಧರಿಸಿಕೊಂಡು ಐಸಿಸ್ ಉಗ್ರರನ್ನು ಸದೆ ಬಡಿಯುತ್ತಿರುವ ಹಿನ್ನಲೆಯಲ್ಲಿ ಉಗ್ರರು ಈ ಕ್ರಮಕ್ಕೆ ಮುಂದಾಗಿದ್ದಾರೆ. ತಮ್ಮ ಪ್ರಾಣಕ್ಕೆ ಧಕ್ಕೆಯಾಗಬಾರದೆಂಬ ಕಾರಣದಿಂದ ಮೊಸುಲ್ ನಗರದ ಐಸಿಸ್ ತಾಣ ಪ್ರದೇಶದಲ್ಲಿ ಬುರ್ಖಾ ಧರಿಸಬಾರದು ಎಂದು ಜಿಹಾದಿ ಪಡೆ ಎಚ್ಚರಿಕೆ ನೀಡಿದ್ದಾರೆ.
POPULAR STORIES :
ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!
ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!
ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!