ಸರ್ಕಾರಿ ಕಛೇರಿಯಲ್ಲಿ ಅಧಿಕಾರಿ ನನ್ನ ಬಳಿ ಐದು ಲಕ್ಷ ಲಂಚದ ಬೇಡಿಕೆ ಇಟ್ಟಿದ್ದು, ಪ್ರಧಾನಿಯವರೇ ಇದೇನಾ ನಿಮ್ಮ ಅಚ್ಚೇ ದಿನ್ ಎಂದು ಪ್ರಧಾನಿ ಮೋದಿ ಅವರಿಗೆ ಖ್ಯಾತ ಹಾಸ್ಯಗಾರ ಹಾಗೂ ಟಿವಿ ನಿರೂಪಕ ಕಪಿಲ್ ಶರ್ಮ ಟ್ವೀಟ್ ಮಾಡಿದ್ದಾರೆ. ತಮ್ಮ ವೈಯಕ್ತಿಕ ವಿಷಯಕ್ಕಾಗಿ ಕಪಿಲ್ ಶರ್ಮ ಮುಂಬೈನ ಮಹಾನಗರ ಪಾಲಿಕೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಯೊಬ್ಬರು ಐದು ಲಕ್ಷ ಬೇಡಿಕೆ ಇಟ್ಟುರುವುದಾಗಿ ಟ್ವಿಟರ್‍ನಲ್ಲಿ ಹೇಳಿಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ನಾನು ಸುಮಾರು 15 ಕೋಟಿ ಆದಾಯ ತೆರಿಗೆ ಪಾವತಿ ಮಾಡಿದ್ದೇನೆ.
ಆದರೂ ನನ್ನ ಕಛೇರಿಯನ್ನು ಸುಗಮವಾಗು ಕಾರ್ಯ ನಿರ್ವಹಿಸಬೇಕೆಂದರೆ ನೀವು ಐದು ಲಕ್ಷ ನೀಡಬೇಕು ಎಂದು ನಮ್ಮಲ್ಲಿ ತಾಕೀತು ಮಾಡಿದ್ದಾರೆ. ನನಗೀಗ ಅನ್ನುಸ್ತಾ ಇದೆ ಮೋದಿ ಅವರ ಅಚ್ಛೇ ದಿನ್ ಇದೇ ಅಂತ ಎಂದು ಸರಣಿ ಟ್ವೀಟ್ ಮಾಡಿದ್ದಾರೆ. ಶರ್ಮಾ ಮಾಡಿರುವ ಟ್ವೀಟ್‍ಗೆ ವ್ಯಾಪಕ ಮರು ಟ್ವೀಟ್ ಬಂದಿದ್ದು ಬಾರಿ ಚರ್ಚೆಗಳು ನಡೆಯುತ್ತಿದ್ದವು. ಇದೀಗ ಶರ್ಮಾರ ಅಸಮಾಧಾನದ ಟ್ವೀಟ್ ನೋಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಟ್ವೀಟ್ ಮಾಡಿ, ಶರ್ಮಾ ಅವರೆ ದಯವಿಟ್ಟು ನಿಮ್ಮಲ್ಲಿ ಲಂಚ ಕೇಳಿದ ಅಧಿಕಾರಿಯ ವಿವರವನ್ನು ನೀಡಿ ಅವರ ಮೇಲೆ ನಾವು ಸೂಕ್ತ ರೀತಿಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
POPULAR STORIES :
ಬಹು ನಿರೀಕ್ಷಿತ ಬಿಗ್ ಬಾಸ್-4 ಕಮಿಂಗ್ ಸೂನ್…!
ತಮಿಳುನಾಡಿಗೆ 61 ಟಿಎಂಸಿ ನೀರು ಬೇಕು, ಮೇಲುಸ್ತುವಾರಿ ಸಮಿತಿಗೆ ಜಯಾ ಪತ್ರ..!
ತಾಜಾ ತರಕಾರಿಗಳಿಗೆ ಮಾರು ಹೋಗುವ ಮುನ್ನ ಈ ವಿಡಿಯೋ ನೋಡಿ…!
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…
ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!