ಭಾರತದ ಫ್ರೋ ಕಬಡ್ಡಿಯಿಂದ ಅಭಿಮಾನಿಗಳು ಸಖತ್ ಎಂಟಟೈನ್ಮೆಂಟ್ ಪಡೆದ ಬೆನ್ನಲ್ಲೇ ಇದೀಗ ಭಾರತ ವಿಶ್ವಕಪ್ ಕಬಡ್ಡಿ ಪಂದ್ಯಾವಳಿಯ ಆಥಿತ್ಯವನ್ನು ವಹಿಸಿಕೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಕಬಡ್ಡಿ ಹಬ್ಬ ಆರಂಭವಾಗಲಿದೆ. ಈಗಾಗಲೇ ಎಂಟನೇ ಆವೃತ್ತಿಯ ವಿಶ್ವಕಪ್ ಕಬಡ್ಡಿ ಪಂದ್ಯಾವಳಿಯ ವೇಳಾ ಪಟ್ಟಿ ಸಿದ್ಧಗೊಂಡಿದ್ದು, 7ನೇ ಆವೃತ್ತಿಯ ಚಾಂಪಿಯನ್ ಹಾಗೂ ಆತಿಥೇಯ ರಾಷ್ಟ್ರ ಭಾರತ ತಂಡ ಉದ್ಘಟನಾ ಪಂದ್ಯದಲ್ಲಿ ಎದುರಾಳಿ ದಕ್ಷಿಣ ಕೊರಿಯಾ ವಿರುದ್ದ ಸೆಣಸಾಡಲಿದೆ.
ಭಾರತದಲ್ಲಿ ಪ್ರೋ ಕಬಡ್ಡಿ ಯಶಸ್ವಿಯಾಗಿದ್ದು, ವಿಶ್ವ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ತವರು ನಾಡಿನಲ್ಲಿ ನಡೆಯುವ ಈ ವಿಶ್ವಕಪ್ ಕಬಡ್ಡಿ ಪಂದ್ಯಾವಳಿಯೂ ಕೂಡ ಜನಮನ್ನಣೆ ಪಡೆಯೋದ್ರಲ್ಲಿ ಸಂಶಯವೇ ಇಲ್ಲ. ಇನ್ನು ಈ ಕೂಟದಲ್ಲಿ ವಿವಿಧ ರಾಷ್ಟ್ರಗಳ ಒಟ್ಟು 12 ತಂಡಗಳು ಭಾಗವಹಿಸಲಿದ್ದು, ಹಾಲಿ ಚಾಂಪಿಯನ್ ಭಾರತವೇ ಈ ಬಾರಿಯ ನೆಚ್ಚಿನ ತಂಡ ಎಂದೆನಿಸಿಕೊಂಡಿದೆ. ಇನ್ನು ಪ್ರಬಲ ಪೈಪೋಟಿ ನೀಡುವ ನೆರೆಯ ರಾಷ್ಟ್ರ ಪಾಕಿಸ್ಥಾನ ಟೂರ್ನಿಯಲ್ಲಿ ಭಾಗವಹಿಸುವುದು ಅನುಮಾನವಾಗಿದೆ.
ಮುಂದಿನ ತಿಂಗಳ ಅಕ್ಟೋಬರ್ 7ರಿಂದ 22ರ ವರೆಗೆ ನಡೆಯುವ ಕಬಡ್ಡಿ ಉತ್ಸವಕ್ಕೆ ವಿಷೇಶ ಲಾಂಛನವನ್ನು ತಯಾರು ಮಾಡಲಾಗಿದ್ದು, ಸಿಂಹ ಘರ್ಜನೆಯ ಮುಖದ ಚಿಹ್ನೆಯನ್ನು ಹೊಂದಿದೆ. ಇನ್ನು ವಿಶ್ವಕಪ್ ಪಂದ್ಯಾವಳಿಯ ಈ ಬಾರಿಯ ಲೈವ್ ಟೆಲಿಕಾಸ್ಟ್‍ನ್ನು ಸ್ಟಾರ್ ಸ್ಪೋಟ್ಸ್ ಇಂಡಿಯಾ ವಹಿಸಿಕೊಳ್ಳಲಿದ್ದು, ಅಹಮದಾಬಾದ್ನ ಟ್ರಾನ್ಸ್‍ಸ್ಟೇಡಿಯ ಕ್ರೀಡಾಂಗಣದಲ್ಲಿ ಎಲ್ಲಾ ಪಂದ್ಯಗಳು ನಡೆಯಲಿದೆ.
ಗುಂಪು ಎ: ಭಾರತ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಇಂಗ್ಲೇಂಡ್ ಹಾಗೂ ಅರ್ಜೆಂಟೀನಾ.
ಗುಂಪು ಬಿ: ಇರಾನ್, ಥಾಯ್ಲೆಂಡ್, ಜಪಾನ್, ಅಮೇರಿಕಾ, ಪೋಲೆಂಡ್ ಮತ್ತು ಕೀನ್ಯಾ.
ಸೆಮಿಫೈನಲ್: ಅಕ್ಟೋಬರ್_ 21
ಫೈನಲ್ ಪಂದ್ಯ: ಅಕ್ಟೋಬರ್-22
POPULAR STORIES :
ಸರ್ಕಾರ ಬಿದ್ದರೂ 20ರ ನಂತರ ನೀರು ಬಿಡೆನು: ಸಿಎಂ ಸಿದ್ದರಾಮಯ್ಯ ಗುಡುಗು..!
ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!
ತಿಂಗಳಲ್ಲಿ ಎರಡನೇ ಬಾರಿ ಪೆಟ್ರೊಲ್ ದರ ಏರಿಕೆ…!
ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?
ಪತಂಜಲಿಯ ಸಿ.ಇ.ಒ ಆಚಾರ್ಯ ಬಾಲಕೃಷ್ಣ , ಈಗ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು..!
ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.