ಎಂದಿನಂತೆ ಮನೆಗೆ ಬಂದ ಗೆಳತಿ ಪೂಜಾಳಿಗೆ ಕಾಫಿಯ ಆಹ್ವಾನವಿತ್ತಾಗ,ಆಕೆ ಇಂದೇಕೋ ನೇರವಾಗಿ ತಿರಸ್ಕರಿಸಿದ್ದಲ್ಲದೆ,ಹಾಃ ಆಜ್ ಕಲ್ ಗ್ರೀನ್ ಟೀ ಹೀ ಪೀತೇ ಹೈ ಅಂದು ಬಿಡಬೇಕೇ?? ಆಕೆಯ ಮಾತಿಗೆ ಕ್ಷಣ ವಿಚಲಿತಳಾದರೂ ತೋರ್ಪಡಿಸಿಕೊಳ್ಳದೆ, ನಕ್ಕು ಸುಮ್ಮನಾದೆ. ನಿತ್ಯ ನನ್ನ ಕೈ ಫಿಲ್ಟರ್ ಕಾಫಿ ಹೀರದೇ ವಿನಃ ಇಲ್ಲಿಂದ ಕದಲದ ಪೂಜಾಳ ಇಂದಿನ ಗ್ರೀನ್ ಟೀ ವಿಚಾರದ ಬಗ್ಗೆ ಕೇಳಿ ಸ್ವಲ್ಪ ಆಶ್ಚರ್ಯವಾದದ್ದಂತೂ ನಿಜ. ನಾನೇನೋ ಜಂಭ ಕೊಚ್ಚ್ಕೋತಿದೀನಿ ಅಂದ್ಕೋಬೇಡಿ ಕಣ್ರಿ…….ಮಹಾರಾಷ್ಟ್ರಿಯನ್ಸ್ ಸಾಧಾರಣವಾಗಿ ಕಾಫಿ ಗೀಫಿ ಕುಡ್ಯೋದು ತೀರಾ ಕಡಿಮೆ.ಆದ್ರೆ ಇವ್ರುಗಳು ನಮ್ಮ ಕರ್ನಾಟಕದ
ಕಾಫಿ ಬಗ್ಗೆ ಹೊಗಳಿ ಹೊಗಳಿ ಬಾಯಿ ಚಪ್ಪರಿಸ್ತಾರೆಂದ್ರೆ ಅದೇನೋ ಒಂಥರಾ ಒಳಗೊಳಗೇ ಖುಷಿ ಕಣ್ರಿ! ಆದ್ರೆ ನನ್ನ ಕಾಫಿ ಜಾಗವನ್ನಾಕ್ರಮಿಸಿದ್ದ ಗ್ರೀನ್ ಟೀ ಬಗ್ಗೆ ಸ್ವಲ್ಪ ಕೋಪ ಬಂದಿದ್ದಂತೂ ನಿಜ…ಈ ಗ್ರೀನ್ ಟೀ ಈಗ ಅನೇಕ ಮನೆಗಳ ಮಾತಾಗಿದೆ.
ಯಾರನ್ನೇ ಕೇಳಿ …ಗ್ರೀನ್ ಟೀ ದೇ ಜಮಾನ ಅಂತಾಡ್ತಾರೆ ಈಗ. ಇದ್ರಲ್ಲಿರೋ ಆಂಟಿ ಓಕ್ಸಿಡೆಂಟ್ಸ್ ಆರೋಗ್ಯಕ್ಕೆ ಲಾಭದಾಯಕ ಹಾಗೂ ದೇಹದಲ್ಲಿರೋ ಕೊಬ್ಬು ನಿವಾರಕ ಎಂದಷ್ಟನ್ನು ಎಲ್ಲೋ ಕೇಳಿದ್ದೆ.ಯಾಕೋ ನನಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಬೇಕನ್ನಿಸಿತು.ಆ ನಿಟ್ಟಿನಲ್ಲಿ ಹುಡುಕ ಹೊರಟಾಗ ಈ ಕೆಲವೊಂದು ಮಾಹಿತಿಗಳು ಲಭ್ಯವಾಯಿತು.ಅದನ್ನು ನಿಮ್ಮ ಜೊತೆ ಶೇರ್ ಮಾಡೋಣ ಅನ್ನಿಸಿತು.
1.ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯದಿರಿ.ಇದರಿಂದಾಗಿ ಅಸಿಡಿಟಿಯ ತೊಂದರೆಯುಂಟಾಗುತ್ತದೆ.
2.ದೇಹದ ತೂಕ ನಿಯಂತ್ರಿಸಲು ಬಿಸಿ ಬಿಸಿ ಗ್ರೀನ್ ಟೀ ಕುಡಿಯುವುದು ಹೆಚ್ಚಿನ ಲಾಭದಾಯಕವಂತೆ.
3.ದಿನಕ್ಕೆ 3-4 ಕಪ್ ಗಿಂತ ಅಧಿಕ ಗ್ರೀನ್ ಟೀ ಸೇವಿಸಿದಲ್ಲಿ ತಲೆನೋವು, ಡಯಾರಿಯಾ, ಡಿಪ್ರೆಷನ್ ಹಾಗೂ ವಾಂತಿ ಪಿತ್ತದಂತಹ ತೊಂದರೆಗಳು ನಮ್ಮನ್ನು ಆವರಿಸುತ್ತದೆ.
4.ಅನೀಮಿಯಾ(ರಕ್ತದ ಕೊರತೆ)ಇದ್ದವರು ಗ್ರೀನ್ ಟೀ ಸೇವಿಸಬಾರದು,ಯಾಕಂದರೆ ಇದು ನಮ್ಮ ದೇಹದಿಂದ ಕಬ್ಬಿಣದ ಅಂಶವನ್ನು ಹೀರಿಕೊಂಡು ತೊಂದರೆಯುಂಟುಮಾಡುತ್ತದೆ.
5.ರಾತ್ರಿಯಲ್ಲಿ ಗ್ರೀನ್ ಟೀ ಕುಡಿಯಲೇಬಾರದು,ನಿದ್ದೆಗೆ ಹಾನಿಯುಂಟುಮಾಡಬಹುದು.
6.ನೀರಿನಲ್ಲಿ ಚಹಾದ ಎಲೆಗಳನ್ನು ಕುದಿಸಿ ಕುಡಿಯುವ ಬದಲು ಬಿಸಿ ನೀರಿಗೆ ಹಾಕಿ ಕುಡಿಯುವುದು ನಿಜಕ್ಕೂ ಲಾಭದಾಯಕವಾಗಿರುವುದು.
7.ತಿಂಡಿ ,ಊಟ ತಿಂದ ತಕ್ಷಣ ಗ್ರೀನ್ ಟೀ ಸೇವಿಸುವುದರಿಂದ ಜೀರ್ಣ ಕ್ರಿಯೆಗೆ ಹಾನಿಯುಂಟಾಗಬಹುದು.
8.ಗ್ರೀನ್ ಟೀ ಯಲ್ಲಿರೋ ಪಾಲಿಫಿನಾಲ್ಸ್ ನಿಂದ ಕೇವಲ ಹೊಟ್ಟೆಯ ಆಸುಪಾಸಿನ ಕೊಬ್ಬು ಮಾತ್ರ ಕರಗುವುದು.
9.6 ತಿಂಗಳು ಹಳೆಯದಾದ ಟೀಪೌಡರ್ ಸೇವಿಸುವುದು ಉತ್ತಮವಲ್ಲ,ಇದ್ರಲ್ಲಿರೋ ಆಂಟಿ ಓಕ್ಸಿಡೆಂಟ್ಸ್ ನಷ್ಟವಾಗಿರುತ್ತದೆ.
10.ಗರ್ಭಿಣಿ ಸ್ತ್ರೀಯರು ಗ್ರೀನ್ ಟೀ ಸೇವಿಸಬಾರದು
ಇದಿಷ್ಟು ಅಂಶವನ್ನು ಗಮನದಲಿಟ್ಟು ಗ್ರೀನ್ ಟೀ ಸೇವಿಸಿದಲ್ಲಿ,ಇದು ಶರೀರಕ್ಕೊಂದು ಉತ್ತಮ ಲಾಭ ನೀಡುತ್ತದೆ.ದೇಹದಲ್ಲಿರೋ ಕೊಲೆಸ್ಟ್ರಾಲ್,ಅಧಿಕ ಬಿ.ಪಿ,ಡಯಾಬಿಟೀಸ್,ಕ್ಯಾನ್ಸರ್ ಮೊದಲಾದವುಗಳನ್ನು ನಿಯಂತ್ರಿಸುವತ್ತ ಉತ್ತಮ ಪಾತ್ರ ವಹಿಸುತ್ತದೆ.
ಫ್ರೆಂಡ್ಸ್! ನೀವೇನೇ ಹೇಳಿ! ಮಳೆ ಛಳಿಯೆನ್ನದೆ,ದಿನದಲ್ಲಿ ಒಂದು ಬಾರಿ ಆದ್ರೂ,ಬಾಲ್ಕನಿಯಲ್ಲಿ ಕೂತು, ಮಾರ್ನಿಂಗ್ ಒಂದು ಕಪ್ ಬಿಸಿ ಬಿಸಿ ಕಾಫಿ ಸವಿಯೋದ್ರಲ್ಲಿರೋ ಸುಖ ಈ ಗ್ರೀನ್ ಟೀ ಯಿಂದ ಸಿಗಲು ಸಾಧ್ಯವೇ??????
- ಸ್ವರ್ಣಲತ ಭಟ್
POPULAR STORIES :
ಸರ್ಕಾರ ಬಿದ್ದರೂ 20ರ ನಂತರ ನೀರು ಬಿಡೆನು: ಸಿಎಂ ಸಿದ್ದರಾಮಯ್ಯ ಗುಡುಗು..!
ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!
ತಿಂಗಳಲ್ಲಿ ಎರಡನೇ ಬಾರಿ ಪೆಟ್ರೊಲ್ ದರ ಏರಿಕೆ…!
ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?
ಪತಂಜಲಿಯ ಸಿ.ಇ.ಒ ಆಚಾರ್ಯ ಬಾಲಕೃಷ್ಣ , ಈಗ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು..!
ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.