ನಿಮಗೆ ಗೊತ್ತಿದೆಯೋ ಇಲ್ವೋ..? ಇಂಗ್ಲೆಂಡ್ ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಟೆಸ್ಟ್ ಕ್ರಿಕೆಟ್ ಆರಂಭಕ್ಕೂ ಮುನ್ನ ಗಂಟೆ ಬಾರಿಸಿ ಚಾಲನೆ ನೀಡೋದು ಬಹು ವರ್ಷದ ವಾಡಿಕೆ. ಕ್ರಿಕೆಟ್ ದಿಗ್ಗಜರಿಂದ ಅಥವಾ ನಿವೃತ್ತ ಆಟಗಾರರಿಂದ ಈ ಗಂಟೆ ಬಾರಿಸೋ ಮೂಲಕ ಅಲ್ಲಿ ಟೆಸ್ಟ್ ಕ್ರಿಕೆಟ್‍ಗೆ ಚಾಲನೆ ದೊರೆಯುತ್ತೆ..! ಇಂತಹ ವಿಶಿಷ್ಟ ಸಂಪ್ರದಾಯ ಲಾರ್ಡ್ಸ್ ಕ್ರೀಡಾಂಗಣ ಹೊರತುಪಡಿಸಿದರೆ ವಿಶ್ವ ದರ್ಜೆಯ ಮತ್ಯಾವ ಕ್ರೀಡಾಂಗಣದಲ್ಲೂ ನಡೆಯೊಲ್ಲ.
ಆದರೆ ಇನ್ಮುಂದೆ ಭಾರತದ ಸುಪ್ರಸಿದ್ದ ಕ್ರೀಡಾಂಗಣವೊಂದರಲ್ಲಿ ಈ ಗಂಟೆ ಸದ್ದು ಮೊಳಗಲಿದೆ ನೋಡಿ… ವಿಶ್ವ ಕ್ರಿಕೆಟ್‍ನ ಐತಿಹಾಸಿಕ ತಾಣ ಎನಿಸಿಕೊಂಡಿರುವ ಕೊಲ್ಕತ್ತಾದ ಈಡನ್ ಗಾರ್ಡನ್‍ನಲ್ಲಿ ಇಂಥಹ ಗಂಟೆಯೊಂದನ್ನು ಮೊಳಗಿಸುವ ಕುರಿತಂತೆ ತೀರ್ಮಾನ ಕೈಗೊಳ್ಳಲಾಗಿದೆ.
ಸೆ. 30ರಿಂದ ಆರಂಭವಾಗಲಿರುವ ಭಾರತ- ನ್ಯೂಜಿಲ್ಯಾಂಡ್ ನಡುವಿನ ದ್ವಿತೀಯ ಟೆಸ್ಟ್ ಸರಣಿಯ ವೇಳೆ ಈ ಗಂಟೆ ಸದ್ದು ಅಲ್ಲಿ ಕೇಳಲಿದೆ ಎಂದು ಕ್ಯಾಬ್ ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ತಂಡದ ನಿವೃತ್ತ ಮಾಜಿ ನಾಯಕ ಸೌರವ್ ಗಂಗೂಲಿ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.
ಲಾರ್ಡ್ಸ್ ನಲ್ಲಿ ಈ ಗಂಟೆಯನ್ನು ಪೆವಿಲಿಯನ್ ಬಾರ್ ಬಳಿಯಲ್ಲಿ ಅಳವಡಿಸಲಾಗಿದ್ದು, 2014ರ ಲಾರ್ಡ್ಸ್ ಟೆಸ್ಟ್ ಪಂದ್ಯದ ಐದನೇ ದಿನದ ಬೆಳಿಗ್ಗೆ ಸೌರವ್ ಗಂಗೂಲಿ ಅವರಿಗೆ ಈ ಗಂಟೆ ಬಾರಿಸುವ ಅವಕಾಶ ಒದಗಿ ಬಂದಿತ್ತು.
Like us on Facebook The New India Times
POPULAR STORIES :
ಕಾವೇರಿಗಾಗಿ ಮಣ್ಣು ತಿಂದು ವಿನೂತನ ಪ್ರತಿಭಟನೆ..!
ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!
ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!
ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!