ಕಾವೇರಿ ತೀರ್ಪು ವಿವಾದ: ಸಿಲಿಕಾನ್ ಸಿಟಿಯಲ್ಲಿ ಭಾರೀ ಬಿಗಿ ಬಂದೋಬಸ್ತ್..

0
160

ಕಾವೇರಿ ನದಿ ನೀರು ವಿವಾದ ಕುರಿತಂತೆ ಮತ್ತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದು, ಜನರ ಆಕ್ರೋಶ ಮತ್ತೆ ಭುಗಿಲೆದ್ದಿದೆ. ಆದರೆ ಜನರ ಪ್ರತಿಭಟನೆಯನ್ನು ನಿಯಂತ್ರಿಸುವ ದೃಷ್ಠಿಯಿಂದ ಬೆಂಗಳೂರು ನಗರದಲ್ಲಿ ಇಂದೆಂದೂ ಕಂಡರಿಯದ ಬಿಗಿ ಬಂದೋಬಸ್ತ್ ಮಾಡಲಾಗ್ತಾ ಇದೆ.. ಸುಮಾರು 16 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂಧಿಗಳಲ್ಲದೇ ಸಿಆರ್‍ಪಿಎಫ್, ಇಂಡೋ ಟಿಬೇಟಿಯನ್ ಬಾರ್ಡ್‍ರ್ ಫೋರ್ಸ್, ಸಿಐಎಸ್‍ಎಫ್‍ನ 16ಕ್ಕೂ ಹೆಚ್ಚು ತುಕಡಿಗಳನ್ನು ಬೆಂಗಳೂರು ನಗರದಾದ್ಯಂತ ನಿಯೋಜಿಸಲಾಗಿದೆ. ಅಲ್ಲದೆ ಕೇಂದ್ರದಿಂದ 15 ಭದ್ರತಾ ಸಿಬ್ಬಂಧಿಗಳ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ತಮಿಳು ಭಾಷಿಗರು ಹೆಚ್ಚಿರುವ ಪ್ರದೇಶ, ಸಚಿವರು, ಹಿರಿಯ ಅಧಿಕಾರಿಗಳಿರುವ ನಿವಾಸ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮೆಜೆಸ್ಟಿಕ್ ಸೇರಿದಂತೆ ಹಲವು ಜನ ನಿಭಿಡ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ತಿರುಗುತ್ತಿದೆ.
ಇನ್ನು ತೀರ್ಪು ತಮಿಳುನಾಡಿನ ಪರವಾಗಿದ್ದರಿಂದ ಅತ್ತಿಬೆಲೆ ಚಿಕ್ ಪೋಸ್ಟ್ ಬಂದ್ ಆಗಿದ್ದು, ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ವಾಹನಗಳನ್ನು ತಡೆ ಹಿಡಿಯಲಾಗುತ್ತಿದೆ. ಇತ್ತ ರಾಜ್ಯಗಳಿಂದ ತೆರಳುವ ವಾಹನಗಳೂ ಕೂಡ ಬಂದ್ ಆಗಿದೆ. ಸಿಲಿಕಾನ್ ಸಿಟಿಯಲ್ಲಿ ಈಗ ಶಾಂತಿಯ ವಾತಾವರಣ ನಿರ್ಮಾಣವಾಗಿದ್ದರೂ ಸಹ ಜನರಿಗೆ ಸ್ವಲ್ಪ ಮಟ್ಟಿನ ಆತಂಕವಿದೆ.

Like us on Facebook  The New India Times

POPULAR  STORIES :

ಕಾವೇರಿಗಾಗಿ ಮಣ್ಣು ತಿಂದು ವಿನೂತನ ಪ್ರತಿಭಟನೆ..!

ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!

ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

ಗ್ರೀನ್ ಟೀ ಹುಚ್ಚು ನಿಮಗೂ ಇದೆಯಾ?