ಬೆಂಗಳೂರು: ಕಿಯೋನಿಕ್ಸ್ ಹಗರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಅವರೇ ಹೇಳಬೇಕು. 3% ಆಡಿಟ್ʼನಲ್ಲಿ 430 ಕೋಟಿ ಅಕ್ರಮ ಆಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಿಯೋನಿಕ್ಸ್ನಲ್ಲಿ ಪೇಮೆಂಟ್ ಆಗ್ತಾ ಇಲ್ಲ. ದಾಖಲೆ ಕೊಟ್ರು ಹಣ ಕೊಡ್ತಾ ಇಲ್ಲ. ದಾಖಲೆಗಳನ್ನು ಇಲಾಖೆಯವರು ಸಂಗ್ರಹ ಮಾಡ್ತಾ ಇದ್ದಾರೆ ಅಂತಾ ಕೆಲವರು ಬಂದು ಹೇಳಿದ್ದರು. ಬಿಜೆಪಿ ನಾಯಕರು ಇದಕ್ಕೆ ಉತ್ತರ ನೀಡಬೇಕು. ಎಲ್ಲವೂ ಬಿಜೆಪಿ ಸರ್ಕಾರದಲ್ಲೆ ಆಗಿರುವುದು.
ಕಳೆದ ನಾಲ್ಕು ವರೆ ವರ್ಷದಲ್ಲಿ ಆದಂತಹ ಪ್ರೊಕ್ಯೂರ್ಮೆಂಟ್ ಬಗ್ಗೆ ನಾವು ಅದನ್ನು ಮುಂದಿಟ್ಟುಕೊಂಡು ಆಡಿಟ್ ಮಾಡಿಸಿದಾಗ ಮೇಲ್ನೋಟಕ್ಕೆ 400 ಕೋಟಿಗಳಿಗಿಂದ ಹೆಚ್ಚು ದುಡ್ಡಿನ ಅವ್ಯವಹಾರ ಕಂಡುಬಂದಿದೆ. ಇದರ ಸಮಗ್ರ ತನಿಖೆಯಾಗಬೇಕು, ಇದರ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ಅಧಿಕಾರಿಗಳಿರಬಹುದು ರಾಜಕಾರಣಿಗಳಿರಬಹುದು ಅದೆಲ್ಲವನ್ನು ಕೂಡ ಇಂದು ನಿವೃತ್ತ ಐಎಎಸ್ ಅಧಿಕಾರಿಗಳಿಂದ ಆಡಿಟ್ ಮಾಡಿಸಿ ತನಿಖೆಯನ್ನು ಮಾಡಿಸಲು ತೀರ್ಮಾನಿಸಿದ್ದೇವೆ ಎಂದರು.
3% ಆಡಿಟ್ʼನಲ್ಲಿ 430 ಕೋಟಿ ಅಕ್ರಮ ಆಗಿದೆ ಎಂದ ಪ್ರಿಯಾಂಕ್ ಖರ್ಗೆ !
Date: