ರಾಮನಗರ: ಆ ಮಗುವಿನ ಆಗಮನದಿಂದ ಇಡೀ ಮನೆಯಲ್ಲಿ ಸಂತೋಷದ ವಾತವರಣ ಇತ್ತು… ಹೊಸ ಅತಿಥಿಗೆ ಇಡೀ ಮನೆ ಸದಸ್ಯರು ಸಂಭ್ರಮ ಸಡಗರದಿಂದ ಹೆಸರಿಟ್ಟು ಕೆಲವೇ ತಾಸುಗಳು ಕಳೆದಿದ್ವು, ಆದರೆ ಲಸಿಕೆ ಹಾಕಿಸಿಕೊಂಡ ಕೆಲವೇ ಹೊತ್ತಿನಲ್ಲಿ ಮಗು ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದೆ.. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಗ್ರಾಮದಲ್ಲಿ ನಡೆದ ಘಟನೆ ಇಡೀ ಊರಿನ ಪೋಷಕರಿಗೆ ಆತಂಕ ತಂದಿದೆ.

ಕಾರಣ ವ್ಯಾಕ್ಸಿನೇಷನ್ ಪಡೆದ ಕೆಲವೇ ಹೊತ್ತಿನಲ್ಲಿ ಒಂದು ವರೆ ತಿಂಗಳ ಮಗು ಸಾತ್ವಿಕ್ ಕೊನೆಯುಸಿರೆಳೆದಿದ್ದು, ತಂದೆ ತಾಯಿಗೆ ದಿಕ್ಕೇ ತೋಚದಂತಾಗಿದೆ. ಬೈರಾಪಟ್ಟಣ ಗ್ರಾಮದ ಮೋಹನ್ ಹಾಗು ಸ್ಪೂರ್ತಿ ದಂಪತಿಯ ಮಗು ಸಾತ್ವಿಕ್ ಪೇಂಟಾ ವ್ಯಾಕ್ಸಿನೇಷನ್ ಬಳಿಕ ಅಸ್ವಸ್ಥವಾಗಿದ್ದು ಕಲವೇ ಹೊತ್ತಿನಲ್ಲಿ ಅಸುನೀಗಿದೆ.ಇದಕ್ಕೆ ಕಾರಣ ವೈದ್ಯರ ನಿರ್ಲಕ್ಷ್ಯ ಅಂತ ಪೋಷಕರು ಆರೋಪ ಮಾಡಿದ್ದಾರೆ..






