ನೀವು ಇತ್ತೀಚೆಗೆ ಡೆಬಿಟ್ ಕಾರ್ಡ್‍ನ್ನು ಬ್ಯಾಂಕ್‍ನಿಂದ ಪಡೆದಿದ್ದೇ ಆದಲ್ಲಿ ಈ ಕೂಡಲೇ ನಿಮ್ಮ ಡೆಬಿಟ್ ಕಾರ್ಡ್ ಪಿನ್ ಕೋಡ್‍ನ್ನು ಮೊದಲು ಬದಲಾಯಿಸಿಕೊಳ್ಳಿ.. ಯಾಕಂದ್ರೆ ಖಾಸಗೀ ಎಟಿಎಂಗಳ ಡೆಟಾ ಸೋರಿಕೆಯಾಗಿದೆ.
ಕಳೆದೊಂದು ವಾರಗಳಿಂದ ಖಾಸಗಿ ಬ್ಯಾಂಕ್‍ಗಳು ತಮ್ಮ ಗ್ರಾಹಕರಿಗೆ ಎಟಿಎಂ ಪಿನ್ ಬದಲಾಯಿಸುವಂತೆ ಸಂದೇಶಗಳನ್ನು ಕಳುಹಿಸಲಾಗುತ್ತಿದ್ದು ಆದಷ್ಟು ಬೇಗ ಎಲ್ಲಾ ಗ್ರಾಹಕರೂ ಕೂಡ ಡೆಬಿಟ್ ಕಾರ್ಡ್ ಪಿನ್ ಕೋಡನ್ನು ಬದಲಾಯಿಸಿಕೊಳ್ಳಿ ಎಂದು ಬ್ಯಾಂಕ್‍ಗಳು ಸೂಚನೆ ನೀಡಿವೆ. ಒಂದು ವೇಳೆ ಪಿನ್ ಕೋಡ್ ಬದಲಾಯಿಸುವಂತೆ ಸಂದೇಶಗಳು ಬರದೇ ಹೋದರೂ ಕೂಡ ನೀವು ನಿಮ್ಮ ಡೆಬಿಟ್ ಕಾರ್ಡ್ ಪಿನ್ನನ್ನು ಬದಲಾಯಿಸಲೇ ಬೇಕಾಗುತ್ತದೆ.
ದೇಶದಲ್ಲಿನ ಸುಮಾರು ಶೇ.70ಕ್ಕೂ ಅಧಿಕ ಎಟಿಎಂಗಳು ಔಟ್‍ಡೆಟೆಡ್ ಅಪರೇಟಿಂಗ್ ಸಿಸ್ಟಮ್ ಹೊಂದಿದ್ದು, ಇದರ ಸದುಪಯೋಗ ಪಡೆದುಕೊಂಡಿರುವ ಕೆಲವು ವಂಚಕರು ಎಟಿಎಂ ಡೇಟಾಗಳನ್ನು ದುರ್ಭಳಕೆ ಮಾಡಿಕೊಂಡಿರುವ ಸಂಭವ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಗ್ರಾಹಕರು ಬ್ಯಾಂಕ್‍ನಿಂದ ಬಂದ ಸಂದೇಶವನ್ನು ನಿರ್ಲಕ್ಷಿಸದೇ ಆದಷ್ಟು ಬೇಗ ತಮ್ಮ ಡೆಬಿಟ್ ಕಾರ್ಡ್ ಪಿನ್‍ನ್ನು ಬದಲಾಯಿಸಬೇಕು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಯಸ್ ಬ್ಯಾಂಕ್, ಎಚ್‍ಡಿಎಫ್‍ಸಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಡಿಬಿಎಸ್ ಮುಂತಾದ ಖಾಸಗಿ ಬ್ಯಾಂಕ್‍ಗಳು ಈ ಕುರಿತು ಈಗಾಗಲೆ ತಮ್ಮ ಗ್ರಾಹಕರಿಗೆ ಸಂದೇಶ ರವಾನಿಸಿದ್ದಾರೆ. ವೀಸಾ ಮತ್ತು ಮಾಸ್ಟರ್ ಕಾರ್ಡ್ ಕಂಪನಿಗಳು ಹಾರ್ಡ್‍ವೇರ್ ಸೆಕ್ಯೂರಿಟಿ ಮಾದರಿಗಳಲ್ಲಿ ತಾಂತ್ರಿಕ ದೋಷದ ಪರಿಣಾಮ ರಾರಾಜಿಸುತ್ತಿದ್ದು, ಇದರಿಂದ ಆಯಾ ಬ್ಯಾಂಕ್‍ನ ಗ್ರಾಹಕರ ಪಿನ್‍ಕೋಡ್‍ಗಳು ಸೋರಿಕೆಯಾಗಿರುವ ಅನುಮಾನಗಳು ವ್ಯಕ್ತವಾಗಿದೆ. ಇತರ ಬ್ಯಾಂಕ್‍ಗಳ ಗ್ರಾಹಕರೂ ಬಳಸಿದರೆ ಅವರ ಪಿನ್ ನಂಬರ್ ಸಹ ಸೋರಿಕೆಯಾಗುವ ಅನುಮಾನವಿದೆ ಎಂದು ಪಿಡಬ್ಲ್ಯೂಸಿ ಇಂಡಿಯನ್ ಸೈಬರ್ ಸೆಕ್ಯೂರಿಟಿ ಸರ್ವಿಸಸ್‍ನ ಮುಖ್ಯಸ್ಥರಾದ ಶಿವರಾಮ ಕೃಷ್ಣನ್ ಹೇಳಿದ್ದಾರೆ.
ಗ್ರಾಹಕರಿಗಿರುವ ಪರಿಹಾರ..?
ತಮ್ಮ ಡೆಬಿಟ್ ಕಾರ್ಡ್‍ನಿಂದ ವಂಚನೆಯಾಗಬಾರದು ಎಂದರೆ ಗ್ರಾಹಕರು ತಮ್ಮ ಡೆಬಿಟ್ ಕಾರ್ಡ್ ಸಂಖ್ಯೆಯನ್ನು 6 ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಬದಾಯಿಸಿಕೊಳ್ಳುವುದು ಒಳ್ಳೆಯದು. ಇನ್ನು ನಿಮ್ಮ ಪಿನ್ ಸಂಖ್ಯೆಯನ್ನು ಹಲವಾರು ಕಡೆಗಳಲ್ಲಿ ಬಳಸಿಕೊಳ್ಳದಿರುವದು ಸೂಕ್ತ. ಉದಾ: ನಿಮ್ಮ ಡೆಬಿಟ್ ಕಾರ್ಡ್‍ನ ಪಿನ್ ಸಂಖ್ಯೆಯನ್ನೇ ಕ್ರೆಡಿಟ್ ಕಾರ್ಡ್, ಮೊಬೈಲ್ ಬ್ಯಾಂಕಿಂಗ್ ಇತ್ಯಾದಿ ಕಡೆಗಳಲ್ಲಿ ಬಳಸುವುದನ್ನು ಮೊದಲು ಬಿಡಬೇಕು. ಇನ್ನು ನಿಮಗೇ ಗೊತ್ತಿಲ್ಲದಂತೆ ನಿಮ್ಮ ಖಾತೆಯಿಂದ ಹಣ ವಿತ್ ಡ್ರಾ ಆದ ಪಕ್ಷದಲ್ಲಿ ಕೂಡಲೇ ನಿಮ್ಮ ಬ್ಯಾಂಕ್‍ಗೆ ತಿಳಿಸಿ ಬ್ಲಾಕ್ ಮಾಡಲು ತಿಳಿಸಿ.
ದೇಶದಲ್ಲಿ ಅಳವಡಿಲಾಗಿರುವ ಶೇ.70ಕ್ಕೂ ಅಧಿಕ ಎಟಿಎಂಗಳಲ್ಲಿ ಇಂದಿಗೂ ಸಾಫ್ಟ್ ವೇರ್ ತಂತ್ರಜ್ಞಾನ ಪರಿಷ್ಕರಣೆಯಾಗದಿರುವ ಕಾರಣದಿಂದ ಜನ ಬಹಳ ಹೆಚ್ಚಾಗಿ ಬಳಸೋ ಎಟಿಎಂಗಳಲ್ಲೂ ಕೂಡ ನಿಮಗೆ ಮೋಸವಾಗುವ ಸಂಭವವಿದೆ ಎನ್ನಲಾಗ್ತಾ ಇದೆ. ಆದ್ದರಿಂದ ಕೂಡಲೇ ನಿಮ್ಮ ನಿಮ್ಮ ಡೆಬಿಟ್ ಕಾರ್ಡ್ ಪಿನ್ ಸಂಖ್ಯೆಯನ್ನು ಬದಲಾಯಿಸೋದು ಒಳ್ಳೆಯದು ಎನ್ನುತ್ತಿದ್ದಾರೆ ತಜ್ಞರು.
Like us on Facebook The New India Times
POPULAR STORIES :
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!
ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?