ಬೆಂಗಳೂರು: . ಟಿಕೆಟ್ ಘೋಷಣೆ ಆದ ಬಳಿಕ ನಿಮ್ಮ ಅಸಮಾಧಾನದ ಹೇಳಿಕೆಗಳು ನಮ್ಮ ಗಮನಕ್ಕೆ ಬಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾಜಿ ಸಚಿವ ಮಾಧುಸ್ವಾಮಿ ಸೇರಿದಂತೆ ಪ್ರಮುಖರು ಗೈರಾಗಿದ್ದರು.
ಇದರಿಂದ ಆರಂಭದಲ್ಲೇ ಪಕ್ಷದ ಅಸಮಾಧಾನಿತ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ. ಟಿಕೆಟ್ ಘೋಷಣೆ ಆದ ಬಳಿಕ ನಿಮ್ಮ ಅಸಮಾಧಾನದ ಹೇಳಿಕೆಗಳು ನಮ್ಮ ಗಮನಕ್ಕೆ ಬಂದಿದೆ. ಎಲ್ಲರ ಹೇಳಿಕೆಗಳನ್ನೂ ಗಮನಿಸಿದ್ದು ಎಲ್ಲಾ ಮಾಹಿತಿ ನಮ್ಮ ಬಳಿ ಇದೆ. ಟಿಕೆಟ್ ಅನ್ನು ಸಂಸದೀಯ ಮಂಡಳಿ ಸಭೆ ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ.
ಪಕ್ಷದ ಅಸಮಾಧಾನಿತ ನಾಯಕರಿಗೆ ಬಿಸಿ ಮುಟ್ಟಿಸಿದ ಸಚಿವ ಅಮಿತ್ ಶಾ
Date: