No menu items!
12.4 C
Munich
Wednesday, April 29, 2026

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾರಣ ಅಮಿತ್ ಶಾ ರವರಿಗೆ ತಿಳಿಸದ್ದೇನೆ !

Must read

ಶಿವಮೊಗ್ಗ: ಪಕ್ಷದ ಒಬ್ಬ ಹಿರಿಯ ನಾಯಕನಾಗಿರುವ ತಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರೋದು ಯಾಕೆ ಎಂದು ಅಮಿತ್ ಶಾ ಪ್ರಶ್ನಿಸಿದರು ಎಂದು ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಹೇಳಿದರು. ಕೇಂದ್ರ ಗೃಹ ಸಚಿವ ತಮಗೆ ಇಂದು ಬೆಳಗ್ಗೆ ಫೋನ್ ಮಾಡಿದ್ದರ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು, ಪಕ್ಷದ ಒಬ್ಬ ಹಿರಿಯ ನಾಯಕನಾಗಿರುವ ತಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರೋದು ಯಾಕೆ ಎಂದು ಪ್ರಶ್ನಿಸಿದರು ಅಂತ ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಒಂದೇ ಕುಟುಂಬದ ಹಿಡಿತದಿಂದ ತಪ್ಪಿಸಲು ಹೋರಾಟ ನಡೆಸಿದರು. ಹಾಗೆಯೇ ರಾಜ್ಯದಲ್ಲಿ ಬಿಜೆಪಿಯ ಎಲ್ಲ ವ್ಯವಹಾರಗಳು ಒಂದೇ ಕುಟುಂಬದ ಅಧೀನದಲ್ಲಿರುವುದರಿಂದ ಅದನ್ನು ತಪ್ಪಿಸಲು ಚುನಾವಣೆಯಲ್ಲಿ ಸ್ಪರ್ಧಿಸಿರುವುದಾಗಿ ಶಾ ಅವರಿಗೆ ಹೇಳಿರುವೆನೆಂದು ಈಶ್ವರಪ್ಪ ತಿಳಿಸಿದರು.
ರಾಜ್ಯ ಬಿಜೆಪಿ ಕಾರ್ಯಕರ್ತರು ಕುಟುಂಬ ರಾಜಕಾರಣದಿಂದ ನೊಂದಿದ್ದಾರೆ, ಬಿಜೆಪಿಯಲ್ಲೂ ಕಾಂಗ್ರೆಸ್ ಸಂಸ್ಕೃತಿ ಬೆಳೆಯುತ್ತಿರುವುದು ಅವರಿಂದ ಸಹಿಸಲಾಗುತ್ತಿಲ್ಲ, ಮತ್ತು ರಾಜ್ಯದಲ್ಲಿ ಹಿಂದೂತ್ವದ ಪರ ಧ್ವನಿಯೆತ್ತುವವರನ್ನು ಕಡೆಗಣಿಸಲಾಗುತ್ತಿರುವ ಅಂಶವೂ ತಾನು ಚುನಾವಣೆಯಲ್ಲಿ ಸ್ಪರ್ಧಿಸಲು ಕಾರಣ ಅಂತ ಶಾ ಅವರಿಗೆ ಹೇಳೀದ್ದೇನೆ ಅಂತ ಈಶ್ವರಪ್ಪ ಪತ್ರಕರ್ತರಿಗೆ ತಿಳಿಸಿದರು. ಹಿಂದುಳಿದ ವರ್ಗಗಳ ನಾಯಕರನ್ನು ಕಡೆಗಣಿಸುತ್ತಿರುವ ಬಗ್ಗೆಯೂ ಅವರ ಗಮನಕ್ಕೆ ತರಲಾಗಿದೆ ಎಂದು ಈಶ್ವರಪ್ಪ ಹೇಳಿದರು.

- Advertisement -spot_img

More articles

- Advertisement -spot_img

Latest article