ಮತದಾನ ಮಾಡಲು ಬಂದ ಮಹಿಳೆಗೆ ಹೃದಯ ಸ್ತಂಭನ: ಜೀವ ಉಳಿಸಿದ ಸ್ಥಳದಲ್ಲೇ ಇದ್ದ ವೈದ್ಯರು

Date:

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯಾದ್ಯಂತ ಮತದಾನ ಬಿರುಸಾಗಿ ನಡೆಯುತ್ತಿದೆ. ಇದರ ಮತದಾನ ಮಾಡಲು ಬಂದ ಮಹಿಳೆಗೆ ಹೃದಯ ಸ್ತಂಭನವಾಗಿರುವ ಘಟನೆ ಬೆಂಗಳೂರಿನ ಜೆ.ಪಿ.ನಗರ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ನಡೆದಿದೆ. ಮತಗಟ್ಟೆಗೆ ಬಂದಿದ್ದ ಮಹಿಳೆ ನೀರು ಕುಡಿಯಲು ಹೋದಾಗ ಕುಸಿದು ಬಿದ್ದಿದ್ದಾರೆ. ಹೃದಯ ಸ್ತಂಭನದಿಂದ ಕುಸಿದು ಬಿದ್ದ ಮಹಿಳೆಯ ಪ್ರಾಣವನ್ನು ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ.ಗಣೇಶ್ ಶ್ರೀನಿವಾಸ ಪ್ರಸಾದ್ ಅವರು ಉಳಿಸಿದ್ದಾರೆ.
ತಕ್ಷಣವೇ ಪರಿಶೀಲಿಸಿದ ವೈದ್ಯರಿಗೆ ಮಹಿಳೆಯ ನಾಡಿಮಿಡಿತ ಕಡಿಮೆಯಾಗಿರೋದು ಗೊತ್ತಾಗಿದೆ. ದೇಹ ಕೂಡ ಯಾವುದೇ ಪ್ರತಿಕ್ರಿಯೆಯನ್ನು ತೋರಿಸುತ್ತಿರಲಿಲ್ಲ. ತಕ್ಷಣ ಸ್ಥಳದಲ್ಲೇ CPR ಮಾಡಿದ ವೈದ್ಯರಿಂದ ಪರಿಸ್ಥಿತಿ ಸುಧಾರಿಸಿದೆ. ಚುನಾವಣಾ ಕರ್ತವ್ಯದಲ್ಲಿದ್ದವರು ಮಹಿಳೆಯ ನೆರವಿಗೆ ಡಾ.ಗಣೇಶ್ ಶ್ರೀನಿವಾಸ ಪ್ರಸಾದ್ ಅವರು ಧಾವಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಐದು ನಿಮಿಷದೊಳಗೆ ಆ್ಯಂಬುಲೆನ್ಸ್ ಸ್ಥಳಕ್ಕೆ ಬಂದಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Share post:

Subscribe

spot_imgspot_img

Popular

More like this
Related

ಇಂದು ಮುರುಘಾ ಮಠದ ಶರಣರ ವಿರುದ್ಧದ ಪೋಕ್ಸೋ ಕೇಸ್‌ ತೀರ್ಪು !

ಇಂದು ಮುರುಘಾ ಮಠದ ಶರಣರ ವಿರುದ್ಧದ ಪೋಕ್ಸೋ ಕೇಸ್‌ ತೀರ್ಪು ! ಚಿತ್ರದುರ್ಗ:...

ನಿಮಗೆ ಗೊತ್ತೆ..? ಮೂಳೆ ವೀಕ್ ಆಗುವುದಕ್ಕೆ ನಿಮ್ಮ ಈ 5 ಅಭ್ಯಾಸಗಳೇ ಕಾರಣ

ನಿಮಗೆ ಗೊತ್ತೆ..? ಮೂಳೆ ವೀಕ್ ಆಗುವುದಕ್ಕೆ ನಿಮ್ಮ ಈ 5 ಅಭ್ಯಾಸಗಳೇ...

ಕರ್ನಾಟಕದಲ್ಲಿ ಮಳೆ ಸ್ಥಗಿತ: ಇಂದು ರಾಜ್ಯದೆಲ್ಲೆಡೆ ಒಣಹವೆಯ ವಾತಾವರಣ

ಕರ್ನಾಟಕದಲ್ಲಿ ಮಳೆ ಸ್ಥಗಿತ: ಇಂದು ರಾಜ್ಯದೆಲ್ಲೆಡೆ ಒಣಹವೆಯ ವಾತಾವರಣ ಬೆಂಗಳೂರು: ಕಳೆದ ಕೆಲವು...

ನಾನು ಆತ್ಮಸಾಕ್ಷಿ ನಂಬಿದ್ದೇನೆ, ಆತ್ಮಸಾಕ್ಷಿಗೆ ತಕ್ಕಂತೆ ನಾವು ಕೆಲಸ ಮಾಡಬೇಕು: ಡಿ.ಕೆ. ಶಿವಕುಮಾರ್

ನಾನು ಆತ್ಮಸಾಕ್ಷಿ ನಂಬಿದ್ದೇನೆ, ಆತ್ಮಸಾಕ್ಷಿಗೆ ತಕ್ಕಂತೆ ನಾವು ಕೆಲಸ ಮಾಡಬೇಕು: ಡಿ.ಕೆ....