ಅತಿಯಾಗಿ ಸೇವಿಸಿದ್ರೆ ಶುಂಠಿಯೂ ಅಪಾಯ.! ಅಡ್ಡಪರಿಣಾಮಗಳೆಷ್ಟು ನೋಡಿ

Date:

ಶುಂಠಿ ಪ್ರತಿಯೊಬ್ಬರ ಮನೆಯಲ್ಲೂ ಇರುವ ವಸ್ತು. ಅನೇಕರಿಗೆ, ಶುಂಠಿ ಚಹಾವಿಲ್ಲದೆ ಬೆಳಗ್ಗೆ ಪೂರ್ಣವಾಗುವುದಿಲ್ಲ. ಶುಂಠಿಯನ್ನು ಮಸಾಲೆಯಾಗಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಎಲ್ಲಾ ಮಾಂಸಾಹಾರಿ ಆಹಾರಗಳಿಗೆ ವಿಶೇಷವಾಗಿ ಶುಂಠಿಯನ್ನು ಸೇರಿಸಬೇಕು.
ಇದು ಆಹಾರಕ್ಕೆ ಪರಿಮಳವನ್ನು ಸೇರಿಸುವುದು ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಶುಂಠಿಯು ಅಸಂಖ್ಯಾತ ಪೋಷಕಾಂಶಗಳನ್ನು ಹೊಂದಿದ್ದರೂ, ಇದನ್ನು ಆಹಾರಕ್ಕೆ ಸೇರಿಸಿದಾಗ ಅದು ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ.
ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಶುಂಠಿ ಅದ್ಭುತವಾಗಿ ಕೆಲಸ ಮಾಡುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಸೇವಿಸಲು ಹೋದರೆ, ಬೇರೆ ಬಗೆಯ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಆದರೆ ಎಲ್ಲರಿಗೂ ಶುಂಠಿಯಿಂದ ಅಡ್ಡ ಪರಿಣಾಮ ಇರುತ್ತದೆ ಎಂಬುದು ತಪ್ಪು. ಕೆಲವರಿಗೆ ಮಾತ್ರ ಈ ರೀತಿ ಆಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅವುಗಳೆಂದರೆ..
ಹೊಟ್ಟೆಕೆಟ್ಟುಹೋಗುತ್ತದೆ
ಹೆಚ್ಚಿನ ಪ್ರಮಾಣದಲ್ಲಿ ಶುಂಠಿಯನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಪಟ್ಟಂತೆ ಸಮಸ್ಯೆಗಳು ಕಾಣಿಸುತ್ತವೆ. ಶುಂಠಿ ನಮ್ಮ ದೇಹದಲ್ಲಿ ಬೈಲ್ ಜ್ಯೂಸ್ ಉತ್ಪತ್ತಿ ಮಾಡಲು ನೆರವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಶುಂಠಿಯನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ಜ್ಯೂಸ್ ಉತ್ಪತ್ತಿಯಾಗುತ್ತದೆ ಮತ್ತು ಇದು ಹೆಚ್ಚಾಗಿ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ಕೆಟ್ಟು ಹೋಗುತ್ತದೆ.
ಬೇಧಿ
ಹೆಚ್ಚಿನ ಪ್ರಮಾಣದಲ್ಲಿ ಶುಂಠಿಯನ್ನು ಸೇವಿಸುವುದರಿಂದ ಕೆಲವರಿಗೆ ಬೇಧಿ ಅಥವಾ ಆಮಶಂಕೆ ಶುರುವಾಗುತ್ತದೆ. ಇನ್ನು ಕೆಲವರಿಗೆ ಜೊತೆಗೆ ವಾಕರಿಕೆ ಮತ್ತು ವಾಂತಿ ಕೂಡ ಶುರುವಾಗುತ್ತದೆ. ಅತಿಯಾದ ಶುಂಠಿ, ಎದೆಯುರಿ, ವಾಕರಿಕೆ, ವಾಂತಿ, ಸಾಧಾರಣ ಹೊಟ್ಟೆಯ ಅಸ್ವಸ್ಥತೆ ಇತ್ಯಾದಿಗಳನ್ನು ಸಹ ತಂದು ಕೊಡುತ್ತದೆ.
ಚರ್ಮ ಹಾಗೂ ಕಣ್ಣುಗಳ ಅಲರ್ಜಿ
ಹಲವರಿಗೆ ಶುಂಠಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಚರ್ಮದ ಅಲರ್ಜಿ ಉಂಟಾಗುತ್ತದೆ. ಅಂದರೆ ಚರ್ಮದ ಮೇಲೆ ದದ್ದುಗಳು, ಕಣ್ಣುಗಳು ಕೆಂಪಾಗುವುದು, ಚರ್ಮದ ಕೆರೆತ, ತುಟಿಗಳು ಊದಿಕೊಳ್ಳು ವುದು, ಕಣ್ಣುಗಳ ಕೆರೆತ ಇತ್ಯಾದಿ ಸಮಸ್ಯೆಗಳು ಶುಂಠಿಯಿಂದ ಶುರುವಾಗುತ್ತವೆ.
ಹೃದಯದ ಕಾಯಿಲೆ
ಹೆಚ್ಚಿನ ಪ್ರಮಾಣದಲ್ಲಿ ಪ್ರತಿದಿನ ಶುಂಠಿಯನ್ನು ತಿನ್ನುತ್ತಾ ಹೋದರೆ ಅದು ಹೃದಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.ಹೃದಯ ಬಡಿತ ಏರುಪೇರು ಆಗುತ್ತದೆ. ಜೊತೆಗೆ ಕಣ್ಣುಗಳ ಸಮಸ್ಯೆ ಹಾಗೂ ಇನ್ಸೋಮ್ನಿಯ ಕೂಡ ಶುರುವಾಗುತ್ತದೆ. ರಕ್ತದ ಒತ್ತಡ ಕಡಿಮೆ ಯಾಗುವಂತೆ ಕೂಡ ಹೆಚ್ಚಿನ ಪ್ರಮಾಣದ ಶುಂಠಿ ಮಾಡುತ್ತದೆ. ಇದರಿಂದ ಹೃದಯಘಾತ ಸಮಸ್ಯೆ ಶುರುವಾಗುತ್ತದೆ.
ಗರ್ಭಿಣಿ ಮಹಿಳೆಯರಿಗೆ ತೊಂದರೆ
ಗರ್ಭಾಶಯದ ಹಿಗ್ಗುವಿಕೆ ಹಾಗೂ ತಗ್ಗುವಿಕೆಯಲ್ಲಿ ಸಹಾಯ ಮಾಡುವ ಶುಂಠಿಯನ್ನು ಸಾಧ್ಯವಾದಷ್ಟು ಗರ್ಭಾವಸ್ಥೆಯ ಅವಧಿಗಳಲ್ಲಿ ಸೇವಿಸದೆ ಇರುವುದು ಒಳ್ಳೆಯದು. ಏಕೆಂದರೆ ಹೆಚ್ಚಿನ ಪ್ರಮಾಣದ ಶುಂಠಿ ಸೇವನೆ ಎದೆಯುರಿ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗಿ ಗರ್ಭವಸ್ಥೆಯ ಸಮಯದಲ್ಲಿ ಆರೋಗ್ಯದ ತೊಂದರೆಗೆ ಕಾರಣವಾಗುತ್ತದೆ.
ಸಕ್ಕರೆಕಾಯಿಲೆಇರುವವರಿಗೆ
ನಿಮಗೆ ಈಗಾಗಲೇ ಒಂದು ವೇಳೆ ಮಧುಮೇಹ ಇದ್ದು, ಶುಂಠಿ ಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನಲು ಹೋದರೆ ಅದರಿಂದ ಸಕ್ಕರೆ ಕಾಯಿಲೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದು ರಕ್ತದ ಒತ್ತಡವನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ. ಇದರಿಂದ ತಲೆ ಸುತ್ತು ಮತ್ತು ವಾಕರಿಕೆ ಬರುತ್ತದೆ. ಸಕ್ಕರೆ ಕಾಯಿಲೆ ಯಿಂದ ಬಳಲುತ್ತಿರುವ ಸಂದರ್ಭದಲ್ಲಿ ಒಂದು ವೇಳೆ ಶುಂಠಿ ಯನ್ನು ಸೇವಿಸಲು ಬಯಸಿದರೆ, ಒಮ್ಮೆ ನಿಮ್ಮ ಆರೋಗ್ಯ ತಜ್ಞರನ್ನು ಭೇಟಿಯಾಗಿ ಅವರಿಂದ ಮಾಹಿತಿ ಪಡೆದುಕೊಳ್ಳಿ.

Share post:

Subscribe

spot_imgspot_img

Popular

More like this
Related

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...

TNIT South Indian Media Award ಯಶಸ್ವಿ

TNIT South Indian Media Award ಯಶಸ್ವಿಯಾಗಿ ಮೂಡಿಬಂದಿದೆ. ಈ ಯಶಸ್ಸಿಗೆ...

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...