ಲೋಧಾ ಶಿಫಾರಸ್ಸುಗಳನ್ನು ಉಲ್ಲಂಘಿಸಲು ಹೊರಟಿರುವ ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ(ಬಿಸಿಸಿಐ)ಗೆ ಲೋಧಾ ಸಮಿತಿ ಗಾಯದ ಮೇಲೆ ಬರೆ ಎಳೆಯಲು ಮುಂದಾಗಿದೆ. ಲೋಧಾ ಶೀಫಾರಸ್ಸುಗಳನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿರುವ ಬಿಸಿಸಿಐ ಸಲಹಾ ಸಮಿತಿಗೆ ಲೋಧಾ ಫುಲ್ ಶಾಕ್ ನೀಡುತ್ತಾ ಬಂದಿದೆ. ಈಗಾಗ್ಲೆ ಭಾರತದಲ್ಲಿನ ಎಲ್ಲಾ ಬ್ಯಾಂಕುಗಳು ಕ್ರಿಕೆಟ್ ಮಂಡಳಿಯ ಎಲ್ಲಾ ವ್ಯಾಪಾರ ವಹಿವಾಟನ್ನು ಕೂಡಲೇ ಸ್ಥಗಿತಗೊಳಿಸಬೇಕು, ಯಾವೊಂದು ಬ್ಯಾಂಕುಗಳೂ ಕೂಡ ಬಿಸಿಸಿಐ ವಹಿವಾಟಿನಲ್ಲಿ ಸಹಕಾರ ನೀಡಬಾರದು ಎಂದು ಖಡಕ್ ಎಚ್ಚರ ನೀಡಿರುವುದರಿಂದ ಮೂರನೇ ಟೆಸ್ಟ್ ಗೆ ಬಿಸಿಸಿಐ ಆರ್ಥಿಕ ಸಮಸ್ಯೆಯಿಂದ ಬಳಲುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಹಾಗೇನಾದರೂ ಮುಂದೆ ನಡೆಯುವ ಆಕ್ಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯ ನಿಂತಿದ್ದೇ ಆದರೆ ಭಾರತ ನಿಯಂತ್ರಣ ಮಂಡಳಿ ಭಾರೀ ಮುಖಭಂಗ ಅನುವಿಸೋದು ಅನುಮಾನವೇ ಇಲ್ಲ..!
ಕಳೆದ ಸೆ. 30ರಂದು ನಡೆದ ಬಿಸಿಸಿಐ ತುರ್ತು ಕಾರ್ಯಕಾರಿ ಸಭೆಯಲ್ಲಿ ವಿವಿಧ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳಿಗೆ ಅನುದಾನ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು ಆದರೆ ಲೋಧಾ ಸಮಿತಿ ಶಿಫಾರಸ್ಸಿನ ಮೇರೆಗೆ ಸಂಸ್ಥೆಯ ಜೊತೆ ಯಾವೊಂದು ಬ್ಯಾಂಕ್‍ಗಳೂ ಕೂಡ ವ್ಯಾಪಾರ ವಹಿವಾಟು ನಡೆಸದಿರುವ ಕುರಿತಾಗಿ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಮುಂದೆ ಏನಾಗಬಹುದೆಂಬ ಆತಂಕದಲ್ಲಿ ಬಿಸಿಸಿಐ ಇದೆ.
ಲೋಧಾ ಸಮಿತಿಯು ನೀಡಲಾಗಿರುವ ಶಿಫಾರಸ್ಸುಗಳಲ್ಲಿ ಅಸಮಂಜಸವಲ್ಲದ ಶಿಫಾರಸ್ಸುಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ, ಇನ್ನುಳಿದವುಗಳನ್ನು ಆಡಳಿತ ಮಂಡಳಿ ಸ್ವೀಕರಿಸಲು ಸಿದ್ಧರಿದ್ದೇವೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇದು ನಮ್ಮ ಆಡಳಿತ ಮಂಡಳಿಯಲ್ಲಿ ತೆಗೆದುಕೊಂಡ ನಿರ್ಧಾರ ಎಂದು ಅಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮಾಧ್ಯಗಳ ಎದುರು ಬಹಿರಂಗ ಹೇಳಿಕೆಯನ್ನು ನೀಡಿದ್ದರು. ಆದರೆ ಈಗ ಕ್ರಿಕೇಟ್ ಮಂಡಳಿಗೆ ನೀಡಿದ್ದ ಗಡುವು ಮುಗಿದಿದ್ದು. ಲೋಧಾ ಸಮಿತಿಯ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಬಿಸಿಸಿಐ ಸಂಪೂರ್ಣ ವಿಫಲತೆ ಹೊಂದಿರುವ ಕಾರಣದಿಂದ ಬಿಸಿಸಿಐ ಬ್ಯಾಂಕ್ ವಹಿವಾಟುಗಳಲ್ಲೆಲ್ಲಾ ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ ಎಂದು ಸಮಿತಿ ತಾಕೀತು ಮಾಡಿವೆ, ಅಷ್ಟೇ ಅಲ್ಲದೇ ಎಲ್ಲಾ ಬ್ಯಾಂಕ್‍ಗಳಿಗೂ ನಿರ್ದೇಶನ ಹೊರಡಿಸಲಾಗಿದೆ ಎಂದು ಕೂಡ ಹೇಳಿಕೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಮುಂಬರುವ ಭಾರತ-ನ್ಯೂಜಿಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯವನ್ನು ಹಣಕಾಸಿನ ತೊಂದರೆಯಿಂದ ಸ್ಥಗಿತಗೊಳ್ಳುವ ಸಂಭವ ಹೆಚ್ಚಿದೆ. ಈಗಾಗಲೇ ಮೂರು ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ಸರಣಿ ತಮ್ಮದಾಗಿಕೊಂಡಿರುವ ಭಾರತಕ್ಕೆ ಮುಂಬರುವ ಪಂದ್ಯ ನಡೆಯದೇ ಹೋದರೆ ಸರಣಿ ಗೆದ್ದರೂ ಕೂಡ ತೀರ್ವ ಅವಮಾನಕ್ಕೀಡಾಗುವ ಎಲ್ಲಾ ಲಕ್ಷಣಳಿವೆ ಎಂದು ಹೇಳಲಾಗ್ತಾ ಇದೆ.
Like us on Facebook The New India Times
POPULAR STORIES :
ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?
ಸಲ್ಮಾನ್, ಶಾರುಖ್, ಅಮೀರ್ ಖಾನ್ ಪಾಕಿಸ್ತಾನಕ್ಕೆ ಹೋಗಲಿ : ಸಾದ್ವಿ ಪ್ರಾಚಿ
ಮಹಾಜನಗಳೇ.. ದಸರಾಗೆ ಹೋಗಿ ‘ಆಕಾಶ ಅಂಬಾರಿ’ಯಲ್ಲಿ..!
ವ್ಯಕ್ತಿಯೋರ್ವನ ನಸೀಬು ಬದಲಾಯಿಸಿದ ವಾಂತಿ..!
ಈ ಕ್ರೂರ ಮುಖದ ಶಿಕ್ಷಕನ ಶಿಕ್ಷೆ ನೋಡುದ್ರೆ ನೀವೇ ದಂಗಾಗಿ ಹೋಗ್ತೀರಾ..!