ಮನೆಯಲ್ಲಿ ಜೇಡಗಳು, ಜಿರಳೆಗಳು ಮತ್ತು ಹಲ್ಲಿಗಳನ್ನು ಓಡಿಸುವುದು ಯಾರಿಗಾದರೂ ದೊಡ್ಡ ಸವಾಲಾಗಿರಬಹುದು. ಜಿರಳೆ, ಹಲ್ಲಿಗಳ ಬಗ್ಗೆಯೂ ಹಲವರು ಭಯ ಪಡುತ್ತಾರೆ. ಅವುಗಳನ್ನು ಮನೆಯಿಂದ ಓಡಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹಲ್ಲಿಗಳನ್ನು ನೈಸರ್ಗಿಕವಾಗಿ ಮನೆಯಿಂದ ಓಡಿಸಲು ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಕೆಲವು ಸರಳ ತಂತ್ರಗಳು ಇಲ್ಲಿವೆ.
ಹಲ್ಲಿಗಳನ್ನು ಓಡಿಸಲು ಸುಲಭ ಮನೆ ಮದ್ದುಗಳಿವು
* ಹಲ್ಲಿಗಳಿರುವ ಸ್ಥಳಗಳಲ್ಲಿ ಮೊಟ್ಟೆಯ ಚಿಪ್ಪನ್ನು ನೇತು ಹಾಕುವುದು ಒಳ್ಳೆಯದು. ಈ ಚಿಪ್ಪಿನ ವಾಸನೆಗೆ ಹಲ್ಲಿಗಳು ಅಲ್ಲಿಂದ ಓಡಿ ಹೋಗುತ್ತವೆ.
* ಮನೆಯಲ್ಲಿ ಹಲ್ಲಿಗಳ ಹಿಂಡೆಯಿದ್ದರೆ ಐಸ್ ನೀರನ್ನು ಬಳಸಬಹುದು. ಹಲ್ಲಿಗಳ ಮೇಲೆ ತಣ್ಣನೆಯ ನೀರನ್ನು ಎರಚಿದರೆ, ಅವುಗಳಿಗೆ ಬೇಗನೆ ಓಡಲು ಆಗುವುದಿಲ್ಲ. ಆ ತಕ್ಷಣವೇ ಅದನ್ನು ಗುಡಿಸಿ ಹೊರಗೆ ಹಾಕಬಹುದು.
* ಹೊಗೆ ಸೊಪ್ಪಿನ ರಸವನ್ನು ಮನೆಯ ಮೂಲೆಗೆ ಸ್ಪ್ರ್ರೇ ಮಾಡಿದರೆ, ಅದರ ವಾಸನೆಗೆ ಹಲ್ಲಿಗಳು ನಿಲ್ಲುವುದೇ ಇಲ್ಲ.
* ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳನ್ನು ಮನೆಯ ಮೂಲೆಯಲ್ಲಿ ಇಟ್ಟರೆ, ಅದರ ವಾಸನೆಗೆ ಹಲ್ಲಿಗಳು ಬರುವುದೇ ಇಲ್ಲ.
* ಕಾಫಿ ಹುಡಿಗೆ ತಂಬಾಕು ಸೇರಿಸಿ, ಅದನ್ನು ಉಂಡೆ ಕಟ್ಟಿ ಮನೆಯ ಮೂಲೆ ಮೂಲೆಯಲ್ಲಿ ಇಡುವುದರಿಂದ ಹಲ್ಲಿಗಳ ಕಾಟದಿಂದ ಮುಕ್ತಿ ಹೊಂದಬಹುದು.
* ಮನೆಯ ಮೂಲೆ ಮೂಲೆಯಲ್ಲಿ ನ್ಯಾಫ್ತಲೀನ್ ಇಟ್ಟರೆ, ಇದರ ವಾಸನೆಗೆ ಹಲ್ಲಿ ಮತ್ತೆ ಆ ಕಡೆ ಸುಳಿಯುವುದೇ ಇಲ್ಲ.
* ಹಲ್ಲಿಗಳು ಇರುವ ಸ್ಥಳಗಳಲ್ಲಿ ಕರ್ಪೂರವನ್ನು ಇಟ್ಟರೆ, ಕರ್ಪೂರದ ಪರಿಮಳಕ್ಕೆ ಹಲ್ಲಿಗಳು ಅಲ್ಲಿಂದ ದೂರ ಹೋಗುತ್ತವೆ.
* ಕಾಳುಮೆಣಸಿನ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಹಲ್ಲಿಗಳು ಇದ್ದಲ್ಲಿ ಸ್ಪ್ರೇ ಮಾಡುವುದರಿಂದ ಹಲ್ಲಿಗಳು ಅಲ್ಲಿಂದ ಓಡಿಹೋಗುತ್ತವೆ.
* ಸೀಮೆಎಣ್ಣೆಯನ್ನು ಸ್ಪ್ರೇ ಮಾಡುವುದರಿಂದ ಹಲ್ಲಿಗಳ ಕಾಟದಿಂದ ಸುಲಭವಾಗಿ ಮುಕ್ತಿ ಹೊಂದಬಹುದು.
ಮನೆಯಲ್ಲಿ ಹಲ್ಲಿಗಳ ಕಾಟ ಹೆಚ್ಚಾಗಿದ್ಯಾ? ಹೀಗೆ ಮಾಡಿ, ಒಂದೂ ಇರಲ್ಲ..!
Date: