ಗಣೇಶ ವಿಸರ್ಜನೆ ವೇಳೆ ಅವಘಡ: ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು!
ಆಂಧ್ರಪ್ರದೇಶ:- ಆಂಧ್ರಪ್ರದೇಶದ ಕಡಪ ವೀರಪುನಾಯುನಿಪಲ್ಲೆಯಲ್ಲಿ ಗಣೇಶ ವಿಸರ್ಜನೆ ವೇಳೆ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.
ಮೃತರನ್ನು ವಂಶಿ ಮತ್ತು ರಾಜಾ ಮೃತರು ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಮೂರ್ತಿ ಮೆರವಣಿಗೆ ಮಾಡಿ ಬಳಿಕ ವಿಸರ್ಜನೆ ವೇಳೆ ಯುವಕರು ನೀರಿನಲ್ಲಿ ಮುಳುಗಿದ್ದು, ಯುವಕರಿಬ್ಬರಿಗಾಗಿ ಶೋಧ ಕಾರ್ಯ ನಡೆದಿತ್ತು. ಯುವಕನ ಶವ ಸಿಕ್ಕಿದ್ದು, ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವಂಶಿ ಮತ್ತು ರಾಜಾ ಮೃತರು ಎಂದು ಗುರುತಿಸಲಾಗಿದೆ.