No menu items!
12.1 C
Munich
Wednesday, May 20, 2026

ದರ್ಶನ್ ಬಿಡುಗಡೆಗಾಗಿ ಅಸ್ಸಾಂನ ಕಾಮಾಕ್ಯ ದೇಗುಲಕ್ಕೆ ಪತ್ನಿ ವಿಜಯಲಕ್ಷ್ಮಿ ಭೇಟಿ!

Must read

ದರ್ಶನ್ ಬಿಡುಗಡೆಗಾಗಿ ಅಸ್ಸಾಂನ ಕಾಮಾಕ್ಯ ದೇಗುಲಕ್ಕೆ ಪತ್ನಿ ವಿಜಯಲಕ್ಷ್ಮಿ ಭೇಟಿ!

ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಹೆಸರು ಹೈಲೈಟ್ ಆಗುತ್ತಿದೆ. ನಟಿ ಪವಿತ್ರಾ ಗೌಡ ಈ ಪ್ರಕರಣದಲ್ಲಿ ಎ1 ಆರೋಪಿ ಆದರೂ ಅವರಿಗಿಂತ ಹೆಚ್ಚಾಗಿ ಚರ್ಚೆಯಲ್ಲಿ ಇರುವ ಹೆಸರು ದರ್ಶನ್ ಅವರದ್ದು. ಪವಿತ್ರಾ ಗೌಡ ಹಾಗೂ ದರ್ಶನ್ ಲಿವಿಂಗ್ ಟುಗೆದರ್ನಲ್ಲಿ ಇದ್ದರು ಎಂದು ಸಮತಾ ಹೇಳಿಕೆ ಕೊಟ್ಟಿದ್ದಾರೆ.
ಇದರ ಬೆನ್ನಲ್ಲೇ ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ. ಇದೀಗ ಅಸ್ಸಾಂನ ಗುವ್ಹಾಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ದರ್ಶನ್‌ ಪತ್ನಿ ಭೇಟಿ ನೀಡಿದ್ದಾರೆ. ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮಿ ಕಾನೂನು ಹೋರಾಟ ಮುಂದುವರೆಸಿದ್ದಾರೆ.
ಅದಕ್ಕೆ ಸಿದ್ಧತೆ ಮಾಡಿಕೊಂಡಿರೋ ಬೆನ್ನಲ್ಲೇ ದರ್ಶನ್ ಪತ್ನಿ 51 ಶಕ್ತಿಪೀಠಗಳಲ್ಲಿ ಒಂದಾಗಿರುವ ಕಾಮಾಕ್ಯ ದೇವಿಯ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭೇಟಿ ನೀಡಿರುವ ಫೋಟೋ ಶೇರ್ ಮಾಡಿ Prayer is Powerfull ಎಂದು ವಿಜಯಲಕ್ಷ್ಮಿ ಅಡಿಬರಹ ನೀಡಿದ್ದಾರೆ. ಆದರೆ ಎಲ್ಲೂ ದೇವಸ್ಥಾನ ಹೆಸರನ್ನು ಅವರು ಉಲ್ಲೇಖಿಸಿಲ್ಲ. ಅಂದಹಾಗೆ, ಕಳೆದ ವಾರ ಬಳ್ಳಾರಿ ಜೈಲಿಗೆ ತೆರಳಿ ದರ್ಶನ್‌ರನ್ನು ಪತ್ನಿ ಭೇಟಿಯಾಗಿದ್ದರು. ಕಾನೂನು ಸಮರದ ಕುರಿತು ಪತಿ ಜೊತೆ ಚರ್ಚಿಸಿ ಬಂದಿದ್ದರು.

- Advertisement -spot_img

More articles

- Advertisement -spot_img

Latest article