ರಿಲೀಸ್ ಆಯ್ತು ‘ಜಾಂಟಿ S/o ಜಯರಾಜ್’ ಸಿನಿಮಾದ ಟೀಸರ್.!
ಸ್ಯಾಂಡಲ್ ವುಡ್ ನಲ್ಲಿ ಭೂಗತ ಪಾತಕ ಲೋಕದ ಮೇಲೆ ಬೆಳಕು ಚೆಲ್ಲುವ ಸಾಕಷ್ಟು ಚಿತ್ರಗಳು ಮೂಡಿಬಂದಿವೆ. ಎಪ್ಪತ್ತು, ಎಂಬತ್ತರ ದಶಕದಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದ ಡಾನ್ ಜಯರಾಜ್ ಕುರಿತ ಚಿತ್ರಗಳೂ ಸಹ ಈಗಾಗಲೇ ತೆರೆ ಕಂಡಿವೆ. ಆದಾಗ್ಯೂ ಜಯರಾಜ್ ಪುತ್ರ ನಾಯಕನಾಗಿ ನಟಿಸುತ್ತಿರುವ ‘ಜಾಂಟಿ S/o ಜಯರಾಜ್’ ಕೂಡ ಜಯರಾಜ್ ಕಥೆ ಹಾಗೂ ಕಾಲ್ಪನಿಕ ಕಥೆಗಳ ಸಮ್ಮಿಶ್ರವಾಗಿದ್ದು, ಆನಂದ್ ರಾಜ್ ನಿರ್ದೇಶನವಿದೆ.

ಇನ್ನೂ ಆನಂದ್ ರಾಜ್ ನಿರ್ದೇಶನದ ಅಜಿತ್ ಜೈರಾಜ್ ಅಭಿನಯದ ಬಹುನಿರೀಕ್ಷಿತ ‘ಜಾಂಟಿ s/o ಜಯರಾಜ್’ ಚಿತ್ರದ ಟೀಸರ್ ರಿಲೀಸ್ ಆಗಿದೆ. ವಿನೋದ್ ಪ್ರಭಾಕರ್ ಸೇರಿದಂತೆ ಶ್ರೀನಗರ ಕಿಟ್ಟಿ ಮತ್ತು ವಿನಯ್ ಗೌಡ ಅತಿಥಿಯಾಗಿ ಆಗಮಿಸಿದ್ದರು. ಈ ಚಿತ್ರವನ್ನು ಶುಗರ್ ಸಿನಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಶುಗರ್ ಕುಮಾರ್ ನಿರ್ಮಾಣ ಮಾಡಿದ್ದು,
ಅಜಿತ್ ಜೈ ರಾಜ್ ಸೇರಿದಂತೆ ಶರತ್ ಲೋಹಿತಾಶ್ವ, ಮೈಕೋ ನಾಗರಾಜ್, ಪೆಟ್ರೋಲ್ ಪ್ರಸನ್ನ ಕಿಶನ್ ಬಿಳಗಲಿ, ಸಚಿನ್ ಪುರೋಹಿತ್, ಅರುಣಾ ಬಾಲರಾಜ್, ಸಿಲ್ಲಿ ಲಲ್ಲು ಆನಂದ್, ಮಂಡ್ಯ ಸೂರ್ಯ ತೆರೆ ಹಂಚಿಕೊಂಡಿದ್ದಾರೆ. ಸಂತೋಷ್ ಸಂಕಲನ, ಅರ್ಜುನ್ ಅಕೋಟ್ ಛಾಯಾಗ್ರಹಣ, ಆನಂದ್ ರಾಜ್ ಸಂಭಾಷಣೆ, ಹಾಗೂ ಅರ್ಜುನ ರಾಜ್ ಮತ್ತು ಚಂದ್ರು ಅವರ ಸಾಹಸ ನಿರ್ದೇಶನವಿದೆ.







