ಬೆಂಗಳೂರಿನಲ್ಲಿ ಬಿಸಿಲ ಝಳಕ್ಕೆ ಜನ ತತ್ತರ: ಮಳೆಗಾಲದಲ್ಲಿ ಬೇಸಿಗೆಯ ಫೀಲ್!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಮಂದಿ ಬಿಸಿಲಿನ ಆರ್ಭಟಕ್ಕೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಬಿಸಿಲಿನ ಪ್ರಮಾಣ ಜಾಸ್ತಿಯಾಗಿದ್ದು, ಮಳೆಗಾಲದಲ್ಲಿ ಬೇಸಿಗೆಯ ಫೀಲ್ ಕೊಡುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಮಳೆಗಾಲದಲ್ಲೂ ಬೇಸಿಗೆ ಅನುಭವವಾಗುತ್ತಿದ್ದು, ನಗರದಲ್ಲಿ ಬಿಸಿಲಿನ ಗರಿಷ್ಠ ಉಷ್ಣಾಂಶ 32 ಡಿಗ್ರಿಯವರೆಗೂ ದಾಟಿದೆ. ಇನ್ನು ಬಿಸಿಲಿನ ಜೊತೆಗೆ ಬಿಸಿಗಾಳಿಯ ಅನುಭವವು ಆಗುತ್ತಿದ್ದು, ಈ ಬಿಸಿಲಿನಿಂದ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಲಿದೆ.
ಸಧ್ಯ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಬೆಳಗ್ಗಿನ ಜಾವದ ವೇಳೆ ಚಳಿಯ ಅನುಭವ, ಮಧ್ಯಾಹ್ನ ಬಿಸಿಲಿನ ಅನುಭವ ಸಂಜೆಯಾಗುತ್ತಿದ್ದಂತೆ ಮಳೆಯ ವಾತಾವರಣ ಕಂಡುಬರುತ್ತಿದೆ.ಇದೇ ವಾತಾವರಣ ಇನ್ನು ಒಂದು ವಾರ ಕಂಡುಬರಲಿದ್ದು, ಮಕ್ಕಳನ್ನ ಮಧ್ಯಾಹ್ನದ ವೇಳೆ ಬಿಸಿಲಿಗೆ ಬಿಡದಂತೆ ಎಚ್ಚರವಹಿಸಲು ಹವಾಮಾನ ಇಲಾಖೆ ತಜ್ಞರು ಹೇಳ್ತಿದ್ದಾರೆ.