No menu items!
23.4 C
Munich
Sunday, May 3, 2026

BMTC ಬಸ್​​ಗೆ ಕಾರು ಅಡ್ಡ ಹಾಕಿ ಡ್ರೈವರ್​ ದುರ್ವರ್ತನೆ!

Must read

ಬೆಂಗಳೂರು:- ಇಬ್ಬರು ಚಾಲಕರ ನಡುವೆ ನಡುರಸ್ತೆಯಲ್ಲೇ ಮಾರಾಮಾರಿ ನಡೆದ ಘಟನೆ ಇಂದು ಬೆಳ್ಳಂ ಬೆಳಗ್ಗೆ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.

ಬಿಎಂಟಿಸಿ ಬಸ್​​​ ಚಾಲಕ ಹಾಗೂ ಕಾರು ಡ್ರೈವರ್​ ಮಧ್ಯೆ ಬಾಗಮನೆ ಟೆಕ್​​ಪಾರ್ಕ್ ಬಳಿ ರಸ್ತೆಯಲ್ಲಿ ಈ ಫೈಟ್ ನಡೆದಿದೆ. ದಾರಿ ಬಿಡುವ ವಿಚಾರಕ್ಕೆ ಚಾಲಕರ ನಡುವೆ ಗಲಾಟೆ ನಡೆದಿದೆ.

ಆಗ ಚಲಿಸುತ್ತಿದ್ದ BMTC ಚಾಲಕ ಬಸ್​ ಅನ್ನು ರಸ್ತೆಯಲ್ಲೇ ನಿಲ್ಲಿಸಿ, ಕಾರಿಗೆ ಅಡ್ಡ ಹಾಕಿ ಈ ಗಲಾಟೆ ಮಾಡಿಕೊಂಡಿದ್ದಾನೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಚಾಲಕರು ಬಡಿದಾಡಿಕೊಂಡಿದ್ದಾರೆ. ನಡುರಸ್ತೆಯಲ್ಲೇ ಚಾಲಕರು ಕಾಲರ್ ಪಟ್ಟಿ ಹಿಡಿದುಕೊಂಡು ಹೊಡೆದಾಡಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

- Advertisement -spot_img

More articles

- Advertisement -spot_img

Latest article