ಪ್ರಯಾಣಿಕರಿಗೆ ಗುಡ್ ನ್ಯೂಸ್: ದಸರಾ ಹಬ್ಬಕ್ಕೆ 34 ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಜೋಡಣೆ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ಇದಕ್ಕಾಗಿ ಅರಮನೆ ಆಡಳಿತ ಮಂಡಳಿ ಭರದಿಂದ ಸಿದ್ದತೆ ಮಾಡಿಕೊಳ್ಳುತ್ತಿದೆ. ಇಡೀ ಅರಮನೆಯನ್ನ ಒಂದು ಲಕ್ಷ ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿದೆ. ಸದ್ಯ ದಸರಾ ವೀಕ್ಷಿಸಲು ಮೈಸೂರಿಗೆ ತೆರಳುವವರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, 34 ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ ಮಾಡಲಾಗಿದೆ. ಪ್ರಯಾಣಿಕರ ನಿರೀಕ್ಷಿತ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ನೈಋತ್ಯ ರೈಲ್ವೆ ವಲಯವು 34 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿಗಳ ಜೋಡಣೆ ಮಾಡಲಿದೆ.
ಹೆಚ್ಚು ಬೋಗಿಗಳನ್ನ ಜೋಡಿಸುವ ರೈಲುಗಳ ವಿವರ
9 ರೈಲುಗಳಿಗೆ ತಲಾ ಒಂದು ಸ್ಲೀಪರ್ ಕ್ಲಾಸ್
ಅಕ್ಟೋಬರ್ 4 ರಿಂದ 15 ರವರೆಗೆ ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಎಕ್ಸ್ಪ್ರೆಸ್
ಅಕ್ಟೋಬರ್ 1 ರಿಂದ 12ರವರೆಗೆ ರೈಲು ಸಂಖ್ಯೆ 17302 ಬೆಳಗಾವಿ-ಮೈಸೂರು ಎಕ್ಸಪ್ರೆಸ್
ಅಕ್ಟೋಬರ್ 2 ರಿಂದ 13ರವರೆಗೆ ರೈಲು ಸಂಖ್ಯೆ 06233/06234 ಮೈಸೂರು-ಚಾಮರಾಜನಗರ-ಮೈಸೂರು ಎಕ್ಸ್ಪ್ರೆಸ್
ಅಕ್ಟೋಬರ್ 2 ರಿಂದ 13ರವರೆಗೆ ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಬಸವ ಎಕ್ಸ್ಪ್ರೆಸ್
ಅಕ್ಟೋಬರ್ 3 ರಿಂದ 14ರವರೆಗೆ ರೈಲು ಸಂಖ್ಯೆ 17308 ಬಾಗಲಕೋಟೆ-ಮೈಸೂರು ಬಸವ ಎಕ್ಸಪ್ರೆಸ್
ಅಕ್ಟೋಬರ್ 1 ರಿಂದ 12 ರವರೆಗೆ ರೈಲು ಸಂಖ್ಯೆ 16591 ಎಸ್ಎಸ್ಎಸ್ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸಪ್ರೆಸ್.
ಅಕ್ಟೋಬರ್ 4 ರಿಂದ 15 ರವರೆಗೆ ರೈಲು ಸಂಖ್ಯೆ 16592 ಮೈಸೂರು-ಎಸ್ಎಸ್ಎಸ್ ಹುಬ್ಬಳ್ಳಿ ಹಂಪಿ ಎಕ್ಸಪ್ರೆಸ್
ಅಕ್ಟೋಬರ್ 2 ರಿಂದ 13 ರವರೆಗೆ ರೈಲು ಸಂಖ್ಯೆ 16535 ಮೈಸೂರು-ಪಂಢರಪುರ ಗೋಲಗುಂಬಜ್ ಎಕ್ಸಪ್ರೆಸ್
ಅಕ್ಟೋಬರ್ 3 ರಿಂದ 14 ರವರೆಗೆ ರೈಲು ಸಂಖ್ಯೆ 16536 ಪಂಢರಪುರ ಗೋಲಗುಂಬಜ್ ಎಕ್ಸಪ್ರೆಸ್
2 ರೈಲಿಗೆ ತಲಾ ಎರಡು ಸ್ಲೀಪರ್ ಕ್ಲಾಸ್
ಅಕ್ಟೋಬರ್ 3 ರಿಂದ 12ರವರೆಗೆ ರೈಲು ಸಂಖ್ಯೆ 16227 ಮೈಸೂರು-ತಾಳಗುಪ್ಪ ಎಕ್ಸ್ಪ್ರೆಸ್
ಅಕ್ಟೋಬರ್ 4 ರಿಂದ 13ರವರೆಗೆ ರೈಲು ಸಂಖ್ಯೆ 16228 ತಾಳಗುಪ್ಪ-ಮೈಸೂರು ಎಕ್ಸ್ಪ್ರೆಸ್