No menu items!
17 C
Munich
Monday, May 25, 2026

ಹೈಕೋರ್ಟ್ ನಲ್ಲಿ ಇಂದು “ಮುಡಾ” ವಿಚಾರಣೆ: ಸ್ನೇಹಮಯಿ ಕೃಷ್ಣ ಹೇಳಿದ್ದೇನು!?

Must read

ಹೈಕೋರ್ಟ್ ನಲ್ಲಿ ಇಂದು “ಮುಡಾ” ವಿಚಾರಣೆ: ಸ್ನೇಹಮಯಿ ಕೃಷ್ಣ ಹೇಳಿದ್ದೇನು!?

ಮೈಸೂರು:- ಹೈಕೋರ್ಟ್ ನಲ್ಲಿ ಇಂದು ನಡೆಯುವ ಮುಡಾ ವಿಚಾರಣೆ ತೀರ್ಪು ನಮ್ಮ ಪರವಾಗಿಯೇ ಇರಲಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಭರವಸೆ ವ್ಯಕ್ತಪಡಿಸಿದ್ದಾರೆ.

ಕೋರ್ಟ್​ನಲ್ಲಿ ನಮ್ಮ ಪರವಾಗಿ ತೀರ್ಪು ಬರುತ್ತದೆಂಬ ನಿರೀಕ್ಷೆ ಇದೆ ಎಂದಿದ್ದಾರೆ.

ಒಂದು ವೇಳೆ ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸುವವರೆಗೂ ಹೋರಾಟ ನಿಲ್ಲಿಸಲ್ಲ. ನ್ಯಾಯಾಲಯಕ್ಕೆ ಪೂರಕ ಸಾಕ್ಷಿ ಕೊಟ್ಟಿದ್ದೇವೆ‌. ನಮ್ಮ ಸಾಕ್ಷಿಗಳ ಜೊತೆ ಸಿಎಂ ಸಹ ಸಾಕಷ್ಟು ಸಾಕ್ಷಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲೇ ನಿವೇಶನ ಪಡೆದಿದ್ದಾರೆ. ಆರೋಪಿಗಳು ನಾವು ತಪ್ಪು ಮಾಡಿಲ್ಲ ಅಂತಾ ಹೇಳುವುದು ಸಹಜ.

ಆದೇಶದಲ್ಲೇ ಸ್ಪಷ್ಟವಾಗಿ 50:50 ಅನುಪಾತ ತಪ್ಪು ಅಂತಾ ಇದೆ. ಸಿಎಂ ಪತ್ನಿ ಸೈಟ್ ಪಡೆದಿರುವುದು ತಪ್ಪು ಎನ್ನುವುದು ಸ್ಪಷ್ಟವಾಗಿದೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

- Advertisement -spot_img

More articles

- Advertisement -spot_img

Latest article