ಬಾಳೆಹಣ್ಣನ್ನು ಸಾಧಾರಣ ಅನ್ಕೋಬೇಡಿ, ನಿಮ್ಮ ಚರ್ಮದ ಕಾಂತಿಗೆ ಇದು ಬೆಸ್ಟ್!

Date:

ಬಾಳೆಹಣ್ಣನ್ನು ಸಾಧಾರಣ ಅನ್ಕೋಬೇಡಿ, ನಿಮ್ಮ ಚರ್ಮದ ಕಾಂತಿಗೆ ಇದು ಬೆಸ್ಟ್!

ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಬಾಳೆಹಣ್ಣು ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುವುದಲ್ಲದೆ ಕೂದಲಿನ ಸೌಂದರ್ಯವನ್ನೂ ಹೆಚ್ಚಿಸಬಲ್ಲದು. ಇದನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಕಲೆಗಳು, ಸುಕ್ಕುಗಳು ಮತ್ತು ಮೊಡವೆಗಳು ಕಡಿಮೆ ಮಾಡಿ, ಚರ್ಮವನ್ನು ಮೃದುವಾಗಿಸುವುದಲ್ಲದೆ, ಕಾಂತಿಯುತವಾಗಿಸುತ್ತದೆ.

ಬಾಳೆಹಣ್ಣಿನ ಪ್ರಯೋಜನಗಳನ್ನು ಈ ಕೆಳಗೆ ತಿಳಿಸಲಾಗಿದೆ ನೋಡಿ.

ಹೆಣ್ಣು ಮಕ್ಕಳು ಸೌಂದರ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಹೀಗಾಗಿ ತ್ವಚೆಯ ಅಂದವನ್ನು ಹೆಚ್ಚಿಸಲು ಒಂದಲ್ಲ ಒಂದು ಉತ್ಪನ್ನಗಳನ್ನು ಬಳಸುತ್ತಿರುತ್ತಾರೆ. ಬಾಳೆ ಹಣ್ಣಿನಿಂದ ತಯಾರಿಸಿದ ಫೇಸ್ ಪ್ಯಾಕ್‌ಗಳು ಚರ್ಮಕ್ಕೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿರುವ ಕಾರಣ ವಾರಕ್ಕೊಮ್ಮೆಯಾದರು ಇದನ್ನು ಟ್ರೈ ಮಾಡಬಹುದು.

ತ್ವಚೆಯ ಅಂದ ಹೆಚ್ಚಿಸುವ ಫೇಸ್ ಪ್ಯಾಕ್ ಗಳು
* ಬಾಳೆಹಣ್ಣು ಹಾಗೂ ಜೇನು ಫೇಸ್ ಪ್ಯಾಕ್ : ಬಾಳೆಹಣ್ಣಿನ ತಿರುಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಚರ್ಮಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ತಣ್ಣನೆಯ ನೀರಿನಿಂದ ಮುಖ ತೊಳೆಯಬೇಕು.ಇದು ತ್ವಚೆಗೆ ನೈಸರ್ಗಿಕ ಹೊಳಪನ್ನು ತಂದು ಕೊಡುವುದಲ್ಲದೇ ಚರ್ಮವನ್ನು ತೇವಾಂಶವಾಗಿರಿಸುತ್ತದೆ.

ಬಾಳೆಹಣ್ಣು ಹಾಗೂ ಮೊಸರಿನ ಫೇಸ್ ಪ್ಯಾಕ್ : ಬಾಳೆಹಣ್ಣು ಹಾಗೂ ಮೊಸರಿನ ಫೇಸ್ ಪ್ಯಾಕನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ಕಾಲ ಬಿಟ್ಟು ತೊಳೆಯಬೇಕು. ಈ ಫೇಸ್ ಪ್ಯಾಕ್ ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮುಖದಲ್ಲಿರುವ ಎಣ್ಣೆ ಮತ್ತು ಕಲೆಗಳು ಕಡಿಮೆ ಮಾಡಿ ಇದು ವಯಸ್ಸಾಗುವವುದನ್ನು ತಪ್ಪಿಸುತ್ತದೆ. ಚರ್ಮವನ್ನು ಮೃದುವಾಗಿಸುತ್ತದೆ.

ಬಾಳೆಹಣ್ಣು ಹಾಗೂ ನಿಂಬೆ ರಸದ ಫೇಸ್ ಪ್ಯಾಕ್ : ತ್ವಚೆಯನ್ನು ಆರೋಗ್ಯವಾಗಿಡಲು ನಿಂಬೆ ಸಹಾಯ ಮಾಡುತ್ತದೆ. ಹೀಗಾಗಿ ಬಾಳೆಹಣ್ಣಿನ ತಿರುಳಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಪ್ಯಾಕ್ ಅನ್ನು ಮುಖದ ಮೇಲೆಲ್ಲಾ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ..ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ತ್ವಚೆಯ ಮೇಲಿನ ಕಲೆಯೂ ಕಡಿಮೆಯಾಗಿ ಹೊಳಪು ಹೆಚ್ಚಾಗುತ್ತದೆ.

ಬಾಳೆಹಣ್ಣು ಮತ್ತು ಆವಕಾಡೊ ಫೇಸ್ ಪ್ಯಾಕ್ : ಬಾಳೆಹಣ್ಣು ಮತ್ತು ಅವಕಾಡೊವನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ, 20 ನಿಮಿಷಗಳ ಕಾಲ ಬಿಡಿ. ನಂತರ ಮುಖವನ್ನು ತಣ್ಣನೆಯ ನೀರಿನಿಂದ ತೊಳೆಯಬೇಕು. ಈ ಬಾಳೆಹಣ್ಣು ಮತ್ತು ಆವಕಾಡೊ ತ್ವಚೆಯನ್ನು ತೇವಾಂಶವಾಗಿರಿಸಲು ಸಹಾಯ ಮಾಡುತ್ತದೆ.

Share post:

Subscribe

spot_imgspot_img

Popular

More like this
Related

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...

TNIT South Indian Media Award ಯಶಸ್ವಿ

TNIT South Indian Media Award ಯಶಸ್ವಿಯಾಗಿ ಮೂಡಿಬಂದಿದೆ. ಈ ಯಶಸ್ಸಿಗೆ...

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...