ಇಂದಿನಿಂದ ನಾಗಸಂದ್ರ-ಮಾದಾವರ ಮೆಟ್ರೋ ಓಡಾಟ ಆರಂಭ: ಸಿಟಿ ಮಂದಿ ಫುಲ್ ಖುಷ್!
ಬೆಂಗಳೂರು:- ಬೆಂಗಳೂರಿಗರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ನಾಗಸಂದ್ರ-ಮಾದಾವರ ಮೆಟ್ರೋ ಓಡಾಟ ಇಂದಿನಿಂದ ಆರಂಭವಾಗಲಿದೆ.
ರಾಜಧಾನಿ ಬೆಂಗಳೂರು ಜನರ ಬಹುನಿರೀಕ್ಷಿತ ನಾಗಸಂದ್ರದಿಂದ ಮಾದಾವರ ವರೆಗಿನ 3.14-ಕಿಮೀ. ವಿಸ್ತರಿತ ಮಾರ್ಗದಲ್ಲಿ ನಮ್ಮ ಮೆಟ್ರೋ ಗ್ರೀನ್ ಲೈನ್ ಸಂಚಾರಕ್ಕೆ ಸಿದ್ಧವಾಗಿದೆ. ಆ ಮೂಲಕ ನೆಲಮಂಗಲ, ತುಮಕೂರು, ಮಾಕಳಿ ಮಾರ್ಗದ ಜನರ ಹಲವು ವರ್ಷಗಳ ಕನಸು ನನಸಾಗಿದೆ.
ಇನ್ನೂ ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಬೆಂಗಳೂರಿನ ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಯಶವಂತಪುರದಿಂದ ಮಾದಾವರದವರೆಗೆ ಪ್ರಾಯೋಗಿಕ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು.
ಮಾದಾವರದಿಂದ ಇಂದು ಬೆಳಗ್ಗೆ 5 ಗಂಟೆಗೆ ಮೊದಲ ಮೆಟ್ರೋ ಸೇವೆ ಆರಂಭವಾದರೆ ರಾತ್ರಿ 11 ಗಂಟೆ ಕೊನೆಯ ಮೆಟ್ರೋ ರೈಲು ಹೊರಡಲಿದೆ. 10 ನಿಮಿಷಕ್ಕೊಮ್ಮೆ ಮಾದಾವರ ಟು ನಾಗಸಂದ್ರ ನಡುವೆ ಮೆಟ್ರೋ ರೈಲು ಸಂಚಾರ ಮಾಡಲಿದೆ.
. 6 ಬೋಗಿಗಳನ್ನು ಒಳಗೊಂಡಿರುವ ಹಸಿರು ಮೆಟ್ರೋ ಟ್ರೈನ್, 10 ನಿಮಿಷಕ್ಕೆ ಒಂದರಂತೆ ಈ ಮಾರ್ಗದಲ್ಲಿ ಪ್ರಯಾಣಿಸುತ್ತವೆ. ಒಂದು ಬಾರಿಗೆ 800 ರಿಂದ 1000 ಜನ ಸಂಚಾರ ಮಾಡಬಹುದು. 2017ರಲ್ಲಿ ಮಾದಾವರ ಮೆಟ್ರೋ ಕಾಮಗಾರಿ ಆರಂಭವಾಗಿತ್ತು. 298 ಕೋಟಿ ರೂಪಾಯಿ ವೆಚ್ಚದಲ್ಲಿ ಎಲಿವೇಟೆಡ್ ಮೆಟ್ರೋ ಮಾರ್ಗ ನಿರ್ಮಾಣ ಆಗಿದೆ