ಟ್ರೇಲರ್ ನಲ್ಲಿ ‘ಆರಾಮ್ ಅರವಿಂದ್ ಸ್ವಾಮಿ’…ಕಾಮಿಡಿ ಜೊತೆಗೊಂದಿಷ್ಟು ಆಕ್ಷನ್..ಅನೀಶ್ ಫನ್ ರೈಡ್

Date:

 

ಭಾರೀ ನಿರೀಕ್ಷೆ ಹೆಚ್ಚಿಸಿದ್ದ ಅನೀಶ್ ತೇಜೇಶ್ವರ್ ನಟನೆಯ ಆರಾಮ್ ಅರವಿಂದ್ ಸ್ವಾಮಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಕಾಮಿಡಿ ಜೊತೆಗೆ ಎಮೋಷನ್, ಆಕ್ಷನ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. 2 ನಿಮಿಷ 14 ಸೆಕೆಂಡ್ ಇರುವ ಆರಾಮ್ ಅರವಿಂದ್ ಸ್ವಾಮಿ ಟ್ರೇಲರ್ ಫುಲ್ ಫನ್ ಆಗಿ ಕೂಡಿದೆ. ನೋಡೋಕ್ಕೆ ಫುಲ್ ಆರಾಮ್ ಆಗಿ ಇರುವ ಅರವಿಂದ್ ಸ್ವಾಮಿ ಲೈಫ್ ನಲ್ಲಿ ಬರೀ ಟೆನ್ಷನ್ ಗಳೇ ತುಂಬಿವೆ. ಪ್ರೀತಿ, ಮದುವೆ, ದುಡ್ಡ, ಫ್ಯಾಮಿಲಿ ಸುತ್ತ ಕಥೆ ಸಾಗುತ್ತಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಆರಾಮ್ ಅರವಿಂದ್ ಸ್ವಾಮಿ ಪಕ್ಕ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ..

ಆರಾಮ್ ಅರವಿಂದ್ ಸ್ವಾಮಿ ಝಲಕ್ ನೋಡ್ತಿದ್ರೆ ಅನೀಶ್ ಗೆ ಬ್ರೇಕ್ ನೀಡುವ ಎಲ್ಲಾ ಲಕ್ಷಣ ಕಾಣ್ತಿದೆ. ಮಿಲನಾ ನಾಗರಾಜ್, ಹೃತಿಕಾ ಶ್ರೀನಿವಾಸ್ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ವೈವಿಬಿ ಶಿವಸಾಗರ್ ಕ್ಯಾಮರಾವರ್ಕ್, ಉಮೇಶ್‌ ಆರ್‌.ಬಿ ಸಂಕಲನ ಮಾಡಿದ್ದಾರೆ. ಶ್ರೀಕಾಂತ್ ಪ್ರಸನ್ನ ಹಾಗೂ ಪ್ರಶಾಂತ್ ರೆಡ್ಡಿ ಚಿತ್ರಕ್ಕೆ ದುಡ್ಡುಹಾಕಿದ್ದಾರೆ. ‘ನಮ್‌ ಗಣಿ ಬಿಕಾಂ ಪಾಸ್‌’, ‘ಗಜಾನನ ಆಂಡ್‌ ಗ್ಯಾಂಗ್‌’ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಅಭಿಷೇಕ್‌ ಶೆಟ್ಟಿ ಆ್ಯಕ್ಷನ್‌ ಕಟ್‌ ಹೇಳಿರುವ ಮೂರನೇ ಚಿತ್ರ ಇದಾಗಿದ್ದು, ಇದೇ ತಿಂಗಳ 22ಕ್ಕೆ ಸಿನಿಮಾ ತೆರೆಗೆ ಬರ್ತಿದೆ.

*ಟಿಕೆಟ್ ಆಫರ್*
ಆರಾಮ್ ಅರವಿಂದ್ ಸ್ವಾಮಿ ಚಿತ್ರ ಇದೇ ತಿಂಗಳು 22 ರಂದು ರಿಲೀಸ್ ಆಗುತ್ತಿದೆ. ನವೆಂಬರ್ 22 ರಂದು ಎಲ್ಲೆಡೆ ಬರ್ತಿರೋ ಈ ಚಿತ್ರದ ಟಿಕೆಟ್ ಕೇವಲ 99 ರೂಪಾಯಿ ಆಗಿದೆ. ಆದರೆ ಈ ಒಂದು ಆಫರ್ ಸಿನಿಮಾ ಥಿಯೇಟರ್‌ನಲ್ಲಿರೋವರೆಗೂ ಇರೋದಿಲ್ಲ ಬಿಡಿ. ಆದರೆ, ಮೂರು ದಿನ ಇರೋದಂತೂ ಗ್ಯಾರಂಟಿ ನೋಡಿ. ಅಂದರೆ ಸಿನಿಮಾ ರಿಲೀಸ್ ಆದ ಮೂರು ದಿನ ಮಾತ್ರ ಈ ಒಂದು ಆಫರ್ ಇರುತ್ತದೆ. ಆ ಮೇಲೆ ಎಂದಿನಂತೆ ಟಿಕೆಟ್ ದರ ಇರಲಿದೆ.

Share post:

Subscribe

spot_imgspot_img

Popular

More like this
Related

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು: ಸಿಎಂ ಸಿದ್ದರಾಮಯ್ಯ

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ...

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ!

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ! ಬೆಂಗಳೂರು: ರಿಯಲ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ...