ಕಾಳು ಮೆಣಸು ನಿಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯಾಗಿದೆ ಗೊತ್ತಾ?
ಕರಿಮೆಣಸು ಪ್ರತಿಯೊಂದು ಭಾರತೀಯ ಅಡುಗೆಮನೆಯಲ್ಲಿ ಬಳಸುವ ಮಸಾಲೆ ಪದಾರ್ಥವಾಗಿದೆ. ಮೆಣಸಿನಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ. ಅವುಗಳನ್ನು ಅಡುಗೆಯಲ್ಲಿ ಬಳಸುವುದರಿಂದ ಆಹಾರದ ರುಚಿ ಹೆಚ್ಚುತ್ತದೆ. ಕೆಲವರು ಕಾಳುಮೆಣಸನ್ನು ಆಯುರ್ವೇದ ಔಷಧವಾಗಿಯೂ ಬಳಸುತ್ತಾರೆ. ಕರಿಮೆಣಸಿನ್ನು ಅಡುಗೆಯಲ್ಲಿ ಬಳಸುವುದರಿಂದ ಆಹಾರದ ರುಚಿ ಹೆಚ್ಚುತ್ತದೆ. ಕೆಲವರು ಕಾಳುಮೆಣಸನ್ನು ಆಯುರ್ವೇದ ಔಷಧವಾಗಿಯೂ ಬಳಸುತ್ತಾರೆ. ಸಹಜವಾಗಿ ಮೆಣಸು ಕಷಾಯವನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಶೀತ, ಕೆಮ್ಮು, ಶೀತ ಮತ್ತು ಎಲ್ಲಾ ರೀತಿಯ ವೈರಲ್ ರೋಗಗಳನ್ನು ತಡೆಯುತ್ತದೆ.
ಕಾಳು ಮೆಣಸು ಆರೋಗ್ಯ ಸಮಸ್ಯೆಗಳಿಗೆ ದಿವ್ಯ ಔಷಧಿ:
1. ಕಾಳು ಮೆಣಸನ್ನು ಜಜ್ಜಿ, ಅದರ ರಸವನ್ನು ನುಂಗುತ್ತಿದ್ದರೆ ನೆಗಡಿ ಸಮಸ್ಯೆಯು ದೂರವಾಗುತ್ತದೆ.
2. ಕಾಳು ಮೆಣಸಿನ ಪುಡಿ ಮತ್ತು ಬೆಲ್ಲವನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ, ಈ ಕಷಾಯವನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.
3. ಅರ್ಧ ಚಮಚದಷ್ಟು ಕಾಳುಮೆಣಸಿನ ಚೂರ್ಣಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿದರೆ ಗಂಟಲು ನೋವು ಶಮನವಾಗುತ್ತದೆ.
4. ಕಾಳು ಮೆಣಸು ಹಾಗೂ ಚಿಟಿಕೆ ಉಪ್ಪನ್ನು ಬಾಯಿಗೆ ಹಾಕಿಕೊಂಡು ಜಗಿದು ರಸ ಕುಡಿಯುವುದರಿಂದ ಗಂಟಲುನೋವು ನಿವಾರಣೆಯಾಗುತ್ತದೆ.
5. ಹಾಲಿಗೆ ಒಂದು ಚಿಟಿಕೆ ಅರಶಿನದ ಪುಡಿ, ಕಾಳು ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ, ರಾತ್ರಿ ಊಟ ಮಾಡಿದ ಮೇಲೆ ಕುಡಿದರೆ ನೆಗಡಿ ಹಾಗೂ ಕೆಮ್ಮಿನ ಸಮಸ್ಯೆಯೂ ದೂರವಾಗುತ್ತದೆ.
6. ಒಂದು ಚಮಚದಷ್ಟು ಕಾಳಮೆಣಸಿನ ಚೂರ್ಣವನ್ನು ಅರ್ಧ ಬಟ್ಟಲು ಎಣ್ಣೆಯಲ್ಲಿ ಸೇರಿಸಿ ಕುದಿಸಿ, ಆ ಎಣ್ಣೆಯನ್ನು ಸಂಧಿವಾತ, ಗಂಟು ನೋವು ಇದ್ದಲ್ಲಿ ಹಚ್ಚಿದರೆ ಗುಣಮುಖವಾಗುತ್ತದೆ.
7. ನಾಲ್ಕು ಚಮಚ ಈರುಳ್ಳಿ ರಸಕ್ಕೆ ಅರ್ಧ ಚಮಚದಷ್ಟು ಕಾಳುಮೆಣಸು ಪುಡಿ ಸೇರಿಸಿ ಸೇವಿಸುವುದರಿಂದ ವಾಕರಿಕೆ ಮತ್ತು ವಾಂತಿಯಾಗುವ ಸಮಸ್ಯೆಯು ದೂರವಾಗುತ್ತದೆ.
8. ಕಾಳು ಮೆಣಸನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚಿಕೊಂಡರೆ ಹಲ್ಲುನೋವು ಕಡಿಮೆಯಾಗುತ್ತದೆ.
9. ಒಂದು ವೀಳ್ಯದೆಲೆಗೆ ನಾಲ್ಕು ಕಾಳುಮೆಣಸು, ಉಪ್ಪು ಹಾಕಿ ಚೆನ್ನಾಗಿ ಜಗಿದು ತಿನ್ನುವುದರಿಂದ ಕಫದ ಸಮಸ್ಯೆಯೂ ನಿವಾರಣೆಯಾಗುತ್ತದೆ.
10. ಕಾಳು ಮೆಣಸನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುವುದರಿಂದ ಪರಿಣಾಮಕಾರಿ ಔಷಧಿಯಾಗಿದೆ.