ಮುಖದ ಮೇಲಿನ ರಂಧ್ರ ಹೋಗಲಾಡಿಸಬೇಕಾ? ಈ ಸಿಂಪಲ್ ಸಲಹೆ ಫಾಲೋ ಮಾಡಿ!

Date:

ಮುಖದ ಮೇಲಿನ ರಂಧ್ರ ಹೋಗಲಾಡಿಸಬೇಕಾ? ಈ ಸಿಂಪಲ್ ಸಲಹೆ ಫಾಲೋ ಮಾಡಿ!

ಸಾಮಾನ್ಯವಾಗಿ ಮೊಡವೆಗಳ ಸಮಸ್ಯೆಯಿಂದ ಮುಖದಲ್ಲಿ ಸಣ್ಣ ಸಣ್ಣ ರಂಧ್ರಗಳು ಉಂಟಾಗುತ್ತವೆ. ಇದನ್ನ ಫೇಸ್ ಪೋರ್ಸ್ ಎಂದೂ ಕರೆಯಲಾಗುತ್ತದೆ. ಕೆಲವರು ನೋಡುವುದಕ್ಕೆ ಎಷ್ಟೇ ಅಂದವಾಗಿದ್ದರು ಈ ರಂಧ್ರಗಳು ಅವರ ಮುಖದ ಸೌಂದರ್ಯವನ್ನೆ ಹಾಳು ಮಾಡುತ್ತದೆ.

ಹೆಚ್ಚಿನವರು ಇದರಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ದೊರೆಯುವ ಕ್ರೀಮ್ ಅಥವಾ ಚಿಕಿತ್ಸೆಯ ಮೊರೆ ಹೋಗುತ್ತಾರೆ. ಅದಕ್ಕಿಂತ ಈ ತೊಂದರೆಯಿಂದ ಪಾರಾಗಲು ಕೆಲವೊಂದು ನೈಸರ್ಗಿಕ ಕ್ರಮ ಅನುಸರಿಸಿದರೆ ಸಾಕು ಎಂಬುದು ಅನೇಕರಿಗೆ ತಿಳಿದಿಲ್ಲ. ಅಂತಹ ಕೆಲವೊಂದು ಸಲಹೆಗಳು ಇಲ್ಲಿ ನೀಡಲಾಗಿದೆ.

ಎಣ್ಣೆ ಚರ್ಮ:-

ಸಾಮಾನ್ಯವಾಗಿ ಎಣ್ಣೆ ಚರ್ಮವನ್ನು ಹೊಂದಿದ್ದರೆ ರಂಧ್ರಗಳು ವಿಸ್ತರಿಸುತ್ತವೆ. ಆಗ ರಂಧ್ರಗಳಲ್ಲಿ ಹೆಚ್ಚು ಎಣ್ಣೆ, ಸತ್ತ ಚರ್ಮದ ಕೋಶಗಳು ಮತ್ತು ಕೊಳಕು ಸಂಗ್ರಹವಾಗಿ ಚರ್ಮವು ಉಬ್ಬುತ್ತದೆ ಮತ್ತು ರಂಧ್ರಗಳು ಸಾಮಾನ್ಯಕ್ಕಿಂತ ದೊಡ್ಡದಾಗಿ ಕಾಣುತ್ತವೆ.

ವಯಸ್ಸು:-

ವಯಸ್ಸಾದಂತೆ ಚರ್ಮವು ಅದರ ಸ್ಥಿತಿಸ್ಥಾಪಕತ್ವ ಗುಣಗಳನ್ನು ಕಳೆದುಕೊಳ್ಳುತ್ತದೆ. ಇದು ರಂಧ್ರಗಳನ್ನು ದೊಡ್ಡದಾಗಿ ಕಾಣುವಂತೆ ಮಾಡುತ್ತದೆ.

ಸೂರ್ಯನ ಹಾನಿ

ಮುಖವನ್ನು ಅತಿಯಾಗಿ ಸೂರ್ಯನಿಗೆ ಒಡ್ಡುವುದರಿಂದ ಮುಖದಲ್ಲಿ ದೊಡ್ಡ ರಂಧ್ರಗಳು ಎದ್ದು ಕಾಣುತ್ತವೆ. ಅಷ್ಟೇ ಅಲ್ಲ, ಚರ್ಮವನ್ನು ದಪ್ಪವಾಗಿಸುತ್ತದೆ. ಚರ್ಮದ ಕಾಲಜನ್, ಎಲಾಸ್ಟಿನ್ ಮತ್ತು ನೀರಿನ ಮಟ್ಟವನ್ನು ಕಡಿಮೆ ಮಾಡುತ್ತದೆ. ಚರ್ಮದ ಕೆಳಗೆ ಅಂಗಾಂಶವನ್ನು ಕುಗ್ಗಿಸುವುದರಿಂದ ಅದು ರಂಧ್ರಗಳ ಅಂಚುಗಳನ್ನು ವಿಸ್ತರಿಸುತ್ತದೆ.

ಜೈವಿಕವಾಗಿ ಪುರುಷರು ಸಾಮಾನ್ಯವಾಗಿ ಮಹಿಳೆಯರಿಗಿಂತ ದೊಡ್ಡ ರಂಧ್ರಗಳನ್ನು ಹೊಂದಿರುತ್ತಾರೆ. ಆದರೆ ಗರ್ಭಧಾರಣೆ, ಮುಟ್ಟು ಮತ್ತು ಪ್ರೌಢವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಯಾಗುವುದರಿಂದ ಮಹಿಳೆಯರಲ್ಲಿ ದೊಡ್ಡ ರಂಧ್ರಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ.

ನಿಮ್ಮ ಮುಖದ ಮೇಲೆ ದೊಡ್ಡ ರಂಧ್ರಗಳಿದ್ದರೆ, ನಿಮ್ಮ ಕುಟುಂಬದಲ್ಲಿ ಸಹ ಬೇರೊಬ್ಬರು ಸಹ ಈ ದೊಡ್ಡ ರಂಧ್ರಗಳನ್ನು ಹೊಂದಿರಬಹುದು. ದಪ್ಪ ಅಥವಾ ಎಣ್ಣೆಯುಕ್ತ ಚರ್ಮವನ್ನು ಸಹ ಅನುವಂಶಿಕವಾಗಿ ಬರಬಹುದು, ಅದು ಮುಖದ ಮೇಲಿನ ರಂಧ್ರಗಳು ದೊಡ್ಡದಾಗಿ ಕಾಣಿಸಿಕೊಳ್ಳಲು ಕಾರಣವಾಗಬಹುದು

ಟೊಮ್ಯಾಟೊ:-

ಟೊಮೇಟೊ ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ ಎಂಬುದು ಗೊತ್ತಿರುವ ವಿಚಾರ. ಅಲ್ಲದೆ, ಟೊಮೆಟೊದಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಕೆ, ಪೊಟ್ಯಾಶಿಯಮ್, ಮೆಗ್ನೀಶಿಯಮ್ ಮತ್ತು ರಂಜಕಗಳಿವೆ. ಇದನ್ನು ಸರಿಯಾಗಿ ಬಳಸುವುದರಿಂದ ನಿಮ್ಮ ಚರ್ಮವು ಹೊಳೆಯುವುದಲ್ಲದೆ, ಯುವಕರಂತೆ ಕಾಣುತ್ತೀರಿ. ಟೊಮೇಟೊವನ್ನು ಪ್ರತಿದಿನ ಮುಖಕ್ಕೆ ಹಚ್ಚುವುದರಿಂದ ಚರ್ಮದ ಮೇಲೆ ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಬಳಸದೆ ಮೊಡವೆಗಳ ಸಮಸ್ಯೆಯನ್ನು ಎದುರಿಸಬಹುದು.

ಟೊಮೇಟೊವನ್ನು ಅದರ ಬೀಜಗಳ ಸಮೇತ ಚರ್ಮದ ಮೇಲೆ ವೃತ್ತಾಕಾರವಾಗಿ ಉಜ್ಜಿ ತಣ್ಣೀರಿನಿಂದ ತೊಳೆಯಿರಿ. ಇದು ಮುಖದ ಮೇಲಿರುವ ದೊಡ್ಡ ರಂಧ್ರಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಖದ ಚರ್ಮದ ಮೇಲೆ ಹೆಚ್ಚು ಎಣ್ಣೆ ಉಳಿಯದಂತೆ ನೋಡಿಕೊಳ್ಳುತ್ತದೆ. ಇದು ಗುಳ್ಳೆಗಳನ್ನು ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಬೇಸಿಗೆಯಲ್ಲಿ ಟೊಮೇಟೊ ಬಳಸುವುದು ಒಳ್ಳೆಯದು

ಮೊಸರು:-

ಹೊಟ್ಟೆಯ ಸಮಸ್ಯೆಗೆ ಮಾತ್ರವಲ್ಲ, ಚರ್ಮದ ಆರೋಗ್ಯಕ್ಕೂ ಮೊಸರು ಬಹಳ ಒಳ್ಳೆಯದು. ವಿಶೇಷವಾಗಿ ದೊಡ್ಡ ರಂಧ್ರಗಳ ವಿರುದ್ಧ ಹೋರಾಡುವವರು ಚರ್ಮದ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಮೊಸರು ಚರ್ಮವನ್ನು ತೇವಗೊಳಿಸುತ್ತದೆ. ಕೊರಿಯಾ ಗಣರಾಜ್ಯದ ಸ್ಕಿನ್ ಸೈನ್ಸ್ ಲ್ಯಾಬೊರೇಟರಿ ನಡೆಸಿದ ಸಂಶೋಧನೆಯ ಪ್ರಕಾರ ಮೊಸರಿನಿಂದ ತಯಾರಿಸಿದ ಫೇಸ್ ಮಾಸ್ಕ್’ಗಳಿಂದ ತೇವಾಂಶವನ್ನು ಉಳಿಸಿಕೊಳ್ಳಬಹುದು. ಚರ್ಮವು ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು ಮೊಸರು ಸಹಾಯ ಮಾಡುತ್ತದೆ.

ಮುಖದ ಮೇಲೆ ಮೊಸರು ಹಚ್ಚುವುದರಿಂದ ಚರ್ಮವನ್ನು ಮೊಯಿಶ್ಚರೈಸ್ ಮಾಡುತ್ತದೆ. ಅಲ್ಲದೆ, ಮೊಸರನ್ನು ಚರ್ಮದ ಮೇಲೆ ಉಜ್ಜುವುದರಿಂದ ಚರ್ಮದ ರಂಧ್ರಗಳನ್ನು ಬ್ಯಾಕ್ಟೀರಿಯಾದಿಂದ ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೆ, ಮೊಸರಿನಲ್ಲಿ ಕಂಡುಬರುವ ಲ್ಯಾಕ್ಟಿಕ್ ಆಮ್ಲವು ಸತ್ತ ಚರ್ಮವನ್ನು ತೆಗೆದುಹಾಕಲು ಮತ್ತು ಚರ್ಮದ ಮೇಲಿನ ರಂಧ್ರಗಳನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಮೊಡವೆ ಸಮಸ್ಯೆಯಿಂದ ಪರಿಹಾರ ಪಡೆಯಲು ಸಹ ಮೊಸರನ್ನು ಬಳಕೆ ಮಾಡುತ್ತಾರೆ.

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...