ಚಳಿಗಾಲದಲ್ಲಿ ಮಕ್ಕಳನ್ನು ಕಾಡುವ ಶೀತ-ಕೆಮ್ಮಿಗೆ ಈ ಮನೆಮದ್ದು ಸಾಕ
ಮಳೆಗಾಲದಲ್ಲಿ ಚಿಕ್ಕ ಮಕ್ಕಳಲ್ಲಿ ಸೋಂಕುಗಳು, ನೆಗಡಿ-ಕೆಮ್ಮು ಹೆಚ್ಚುವುದಕ್ಕೆ ಹಲವು ಕಾರಣಗಳು ಇರಬಹುದು. ವಾತಾವರಣದಲ್ಲಿ ತೇವ ಹೆಚ್ಚಿದ್ದಾಗ ಕಣ್ಣಿಗೆ ಕಾಣದ ಶಿಲೀಂಧ್ರಗಳು ಬೆಳೆಯುವುದು ಬೇಗ. ಇವು ಬಿಡುಗಡೆ ಮಾಡುವ ಸೂಕ್ಷ್ಮ ಕಣಗಳು ಎಳೆಯರ ಶ್ವಾಸನಾಳವನ್ನು ಉಸಿರಾಟದ ಮೂಲಕ ಸೇರುತ್ತವೆ. ಅಲ್ಲಿ ಅಲರ್ಜಿ ಉಂಟುಮಾಡುತ್ತವೆ. ಅದರಲ್ಲೂ ಅಲರ್ಜಿಗಳಿಗೆ ಹೆಚ್ಚು ತುತ್ತಾಗುವ ಮಕ್ಕಳಿಗೆ ಮೋಡ ಮತ್ತು ಮಬ್ಬಿನ ವಾತಾವರಣವು ಇನ್ನಷ್ಟು ತೊಂದರೆಗಳನ್ನು ತರುತ್ತದೆ.
ಯಾವುದೇ ಸಣ್ಣ-ದೊಡ್ಡ ಸೋಂಕು ಬಂದ ಮೇಲೆ ನೆಗಡಿ, ಕೆಮ್ಮು ಬಾಲದಂತೆ ಹಿಂದೆಯೇ ಬರುತ್ತವೆ. ಹೀಗೆ ಪ್ರತಿರೋಧಕ ಶಕ್ತಿ ಚೇತರಿಸಿಕೊಳ್ಳುವ ಮುನ್ನವೇ ಮತ್ತೆ ಸೊಂಕುಗಳು ಬರುತ್ತಿದ್ದರೆ ಮಕ್ಕಳು ಸೊರಗುವುದು ಸಹಜ. ವೈದ್ಯರು ಹೇಳಿದ ಔಷಧಿಗಳ ಜೊತೆಗೆ ಕೆಲವು ಸರಳ ಮನೆಮದ್ದುಗಳು ಸಹ ಮಕ್ಕಳ ಶೀಘ್ರ ಚೇತರಿಕೆಗೆ ಸಹಾಯ ಮಾಡುತ್ತವೆ.
ಸ್ಟೀಮ್
ಸಣ್ಣ ಮಕ್ಕಳಲ್ಲಿ ಶೀತದ ಸಮಸ್ಯೆಯಿದ್ದರೆ ಮತ್ತು ಉಸಿರಾಡಲು ಮಗುವಿಗೆ ಸಮಸ್ಯೆ ಆಗುತ್ತಲಿದ್ದರೆ ಆಗ ನೀವು ಮಗುವಿಗೆ ಹಬೆ ನೀಡಬೇಕು. ಮಗು ಸ್ನಾನಗೃಹದಲ್ಲಿ ಹಾಗೆ ಬಿಸಿ ನೀರಿನ ಶಾವರ್ ಮುಂದೆ ನಿಂತುಕೊಳ್ಳಲಿ ಅಥವಾ ದೊಡ್ಡ ಪಾತ್ರೆಯಲ್ಲಿ ಬಿಸಿ ನೀರು ಇಡಿ ಮತ್ತು ಇದರ ಹಬೆಯನ್ನು ಮಗು ಉಸಿರಾಡುವಂತೆ ಮಾಡಿ. ಮಗುವಿನ ತಲೆಗೆ ಟವೆಲ್ ಮುಚ್ಚಿಕೊಳ್ಳಿ ಮತ್ತು 10-15 ನಿಮಿಷ ಕಾಲ ಹೀಗೆ ಮಾಡಲಿ. ನೀಲಗಿರಿ ಎಣ್ಣೆಯನ್ನು ಇದಕ್ಕೆ ಹಾಕಿದರೆ ಆಗ ಮಗುವಿಗೆ ಮತ್ತಷ್ಟು ಶಮನ ಸಿಗುವುದು.
ಜೇನುತುಪ್ಪ
ಜೇನುತುಪ್ಪದಲ್ಲಿ ನಿಮ್ಮ ಬೆರಳನ್ನು ಅದ್ದಿಕೊಳ್ಳಿ ಮತ್ತು ಇದನ್ನು ಮಗು ಹಾಗೆ ಚೀಪುವಂತೆ ಮಾಡಿ. ದಿನದಲ್ಲಿ ಮೂರು ಸಲ ಹೀಗೆ ಮಾಡಿ. ಮಗು ಐದು ವರ್ಷಕ್ಕಿಂತ ದೊಡ್ಡದಾಗಿದ್ದರೆ ಆಗ ನೀವು ಒಂದು ಚಮಚ ಜೇನುತುಪ್ಪಕ್ಕೆ ಸ್ವಲ್ಪ ದಾಲ್ಚಿನಿ ಹುಡಿ ಹಾಕಿ ಇದನ್ನು ಸೇವಿಸಲು ಕೊಡಿ.
ಓಮ ಕಾಳು
ಓಮ ಕಾಳು ಮತ್ತು ತುಳಸಿ ಎಲೆ ಹಾಕಿಕೊಂಡು ನೀರನ್ನು ಬೀಸಿಮಾಡಿ. ಇದು ಕೆಮ್ಮು ನಿವಾರಣೆ ಮಾಡುವುದು ಮತ್ತು ಎದೆಗಟ್ಟುವಿಕೆ ಶಮನ ಮಾಡುವುದು.
ಮಸಾಜ್
ಎರಡು ವರ್ಷ ಸಣ್ಣ ಮಕ್ಕಳಿಗೆ ಮಸಾಜ್ ಅದ್ಭುತವಾಗಿ ಕೆಲಸ ಮಾಡುವುದು. ಬೆಳ್ಳುಳ್ಳಿ ಜತೆಗೆ ಸಾಸಿವೆ ಎಣ್ಣೆ ಬಿಸಿ ಮಾಡಿ ಮತ್ತು ಅದನ್ನು ಮಗುವಿನ ಎದೆ, ಬೆನ್ನು ಮತ್ತು ಕುತ್ತಿಗೆಗೆ ಮಸಾಜ್ ಮಾಡಿ. ಮಗುವಿನ ಅಂಗೈ ಮತ್ತು ಪಾದದ ಅಡಿಗೆ ಕೂಡ ಎಣ್ಣೆ ಹಚ್ಚಿದರೆ ತಕ್ಷಣವೇ ಶಮನ ಸಿಗುವುದು.
ಸೂಪ್ ಅಥವಾ ತಾಜಾ ಹಣ್ಣಿನ ಜ್ಯೂಸ್
ಮಗು ಶೀನು ಮತ್ತು ಕೆಮ್ಮುತ್ತಿರುವ ವೇಳೆ ಆಕೆ/ಆತನಿಗೆ ಹೆಚ್ಚಿನ ದ್ರವಾಂಶ ನೀಡುವುದು ಅತೀ ಅಗತ್ಯವಾಗಿರುವುದು. ಬಿಸಿ ನೀರು ಪದೇ ಪದೇ ಕುಡಿಯುತ್ತಾ ಇದ್ದರೆ ಆಗ ಸಾಮಾನ್ಯ ಶೀತ ಕಡಿಮೆ ಆಗುವುದು ಮತ್ತು ಸೋಂಕನ್ನು ಹೊರಗೆ ಹಾಕುವ ಜತೆಗೆ ಗಂಟಲಿನ ಉರಿಯೂತವನ್ನು ಇದು ಕಡಿಮೆ ಮಾಡುವುದು. ಸೂಪ್ ಅಥವಾ ತಾಜಾ ಹಣ್ಣಿನ ಜ್ಯೂಸ್ ಕುಡಿದರೆ ಅದರಿಂದ ಮತ್ತಷ್ಟು ಶಕ್ತಿ ಬರುವುದು.
ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು
ಗಂಟಲು ನೋವು ನಿವಾರಣೆ ಮಾಡಲು ಒಂದು ಲೋಟ ಬಿಸಿ ನೀರಿಗೆ ಉಪ್ಪು ಹಾಕಿಕೊಂಡು ಬಾಯಿ ಮುಕ್ಕಳಿಸಿಕೊಳ್ಳಬೇಕು. ದಿನಕ್ಕೆ ಎರಡು ಸಲ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿಕೊಳ್ಳಲು ಮಗುವಿಗೆ ಹೇಳಿ. ಇದು ಗಂಟಲಿನ ನೋವನ್ನು ಕಡಿಮೆ ಮಾಡುವುದು.