ದಿನದಲ್ಲಿ ಐದಾರು ಎಸಳು ಪುದೀನಾ ಸೊಪ್ಪು ತಿಂದರೆ ಏನೇನೆಲ್ಲ ಆಗುತ್ತೆ ಗೊತ್ತಾ..?
ಮನೆ ಮದ್ದಿನಲ್ಲಿ ಪುದೀನ ಎಲೆಯನ್ನು ವಿಶೇಷವಾಗಿ ಬಳಸಲಾಗುವುದು. ಇದರಲ್ಲಿ ಇರುವ ಔಷಧೀಯ ಗುಣಗಳು ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ. ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಹೊಂದಿರುವುದು.. ಪುದೀನ ತಿನ್ನುವುದರ ಮೂಲಕ ಯಾವೆಲ್ಲಾ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು ಗೊತ್ತಾ?
ಪುದೀನಾವು ಉತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ. ಪುದೀನಾ ಹೊಟ್ಟೆಯಿಂದ ತುಂಬಿದ ಗ್ಯಾಸ್ ತೆಗೆದುಹಾಕುತ್ತದೆ.
ಪುದೀನಾವನ್ನು ಸ್ನಾಯು ಸೆಳೆತವನ್ನು ನಿವಾರಿಸಲು ಬಳಸಲಾಗುತ್ತದೆ. ಇದು ಮೂತ್ರವರ್ಧಕ ಚಟುವಟಿಕೆಯನ್ನು ಹೊಂದಿದೆ. ಅಂದರೆ, ಪುದೀನಾವನ್ನು ತಿಂದರೆ ಮೂತ್ರ ವಿಸರ್ಜನೆ ಹೆಚ್ಚಾಗಿ, ಕಿಡ್ನಿ ಕ್ಲೀನ್ ಆಗುತ್ತದೆ.
ಪುದೀನಾ ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ. ಇದು ಆಂಟಿಫಂಗಲ್ ಆಗಿದ್ದು, ಅತಿಸಾರವನ್ನು ಕೂಡ ಕಡಿಮೆ ಮಾಡುತ್ತದೆ.
ಪುದೀನಾ ಸೇವಿಸುವುದರಿಂದ ಅಸ್ತಮಾದ ಲಕ್ಷಣಗಳು ಕಡಿಮೆಯಾಗುತ್ತವೆ. ಇದು ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಶೀತ ಬಂದಾಗ ಪುದೀನಾವನ್ನು ಸೇವಿಸಿದರೆ ಬೇಗ ಗುಣವಾಗುತ್ತದೆ. ಅಲ್ಲದೆ, ನಿಮ್ಮ ತೂಕ ಇಳಿಸಿಕೊಳ್ಳಲು ಕೂಡ ಸಹಾಯ ಮಾಡುತ್ತದೆ.
ನಿಮ್ಮ ಜೀರ್ಣಕ್ರಿಯೆಯನ್ನು ಪುದೀನಾ ಸರಾಗಗೊಳಿಸುತ್ತದೆ. ಪುದಿನಾ ಕರುಳಿನಿಂದ ವಿಷವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.
ಪುದೀನಾವನ್ನು ಸುಲಭವಾಗಿ ಮನೆಯ ಹಿತ್ತಿಲಲ್ಲೋ, ಬಾಲ್ಕನಿಯಲ್ಲೋ ಬೆಳೆಸಬಹುದು. ಇದು ಎಲ್ಲಿ ಬೇಕಾದರೂ ಸೊಂಪಾಗಿ ಬೆಳೆಯುತ್ತದೆ.