ಜನ್ರು ಈ ಕಾಲದಲ್ಲಿ ತಮ್ಮನ್ನು ತಾವು ಯಂಗ್ ಅಂಡ್ ಎನರ್ಜೆಟಿಕ್, ಫಿಟ್ ಆಗಿ ತೋರಿಸ್ಕೋಳೋಕೇ ಅದೇನೇನೆಲ್ಲಾ ಸರ್ಕಸ್ ಮಾಡ್ತಾರೆ ಅಬ್ಬಬ್ಬಾ! ಒಂದೇ ಎರಡೇ… ದಪ್ಪಗಿದ್ದವರಿಗೆ ಸಣ್ಣಗಾಗೋ ಚಿಂತೆ, ಸಣ್ಣಗಿದ್ದೋರಿಗೆ ದಪ್ಪಗಾಗೋ ಚಿಂತೆ, ಕುಳ್ಳುಗಿದ್ದವ್ರಿಗೆ ಎತ್ತರಕ್ಕೇರೋ ಚಿಂತೆ, ಇನ್ನು ವಯಸ್ಸಾಗ್ತಾ ಆಗ್ತಾ ತಾನು ಇನ್ನೂ ಸುಂದರವಾಗಿಯೇ ಕಾಣಬೇಕು ಅನ್ನೋಚಿಂತೆ ಅಯ್ಯಯ್ಯೋ ..ಈ ಹಲವಾರು ಚಿಂತೆಗಳ ಪರಿಹಾರವನ್ನು ಜನ್ರು ಒಂದೋ ಮಾರುಕಟ್ಟೆಯಲ್ಲಿರೋ ಹಲವು ತರಹದ ರೆಡಿಮೇಡ್ ಔಷಧಿಗಳಿಂದ ಕಂಡುಕೊಳ್ತಾರೆ ಇಲ್ಲವಾದಲ್ಲಿ ಅನೇಕ ಫಿಟ್ ನೆಸ್ ಸೆಂಟರ್ ಮೊರೆ ಹೋಗ್ತಾರೆ. ಈ ನಾಟಕಗಳೆಲ್ಲಾ ಎಷ್ಟು ದಿನ.. ನೀವು ಅದೆಷ್ಟು ದಿನ ಮುಂದುವರಿಸ್ತೀರೋ ಅನ್ನೋದ್ರ ಮೇಲೆ ಅವಲಂಬಿಸಿದೆ, ಇನ್ನು ಇವೆಲ್ಲಾವುಗಳ ಸೋ ಕಾಲ್ಡ್ ಸೈಡ್ ಎಫೆಕ್ಟ್ಸ್ ಗಳಿಗೆ ನೀವು ರೆಡಿಯಾಗಿರ್ಬೇಕು. ಎಲ್ಲಾ ಟೆಂಪರರಿ ಪರಿಹಾರಗಳಷ್ಟೇ…ಆದ್ರೆ ನಿಮಗೆ ಶಾಶ್ವತ ಪರಿಹಾರ ದೊರಕಿಸಿಕೊಡೋ ಪ್ರಪಂಚದ ಏಕೈಕ ಸಂಜೀವಿನಿಯೇ ಈ ಯೋಗ…ಯೋಗ ಎಂದರೇನು? ಸರಳ ಸುಂದರ ಪ್ರಶ್ನೆ..ಆದ್ರೆ ಉತ್ತರ ಹುಡುಕ ಹೊರಟರೆ ನಿಮ್ಮ ಹುಡುಕಾಟ ನಿರಂತರ,ಅನವರತ..ಈ ಹುಡುಕಾಟದ ನಡುವೆ ನಿಮಗೆ ಸಿಗೋ ಲಾಭಗಳು ಹಲವು.ಯೋಗ ಅಂದರೆ ಯುಜ್ ಎಂದು ಅರ್ಥ ಅಂದರೆ ಜೋಡಿಸುವುದು ಅಥವಾ ಐಕ್ಯತೆ ಸಾಧಿಸುವುದು..ಅಂದಲ್ಲಿ ನಮ್ಮ ದೇಹ,ಮನಸ್ಸು,ಬುದ್ದಿಯನ್ನು ಆತ್ಮದ ಜೊತೆಗೆ ಜೋಡಿಸುವುದೇ ಈ ಯೋಗ. ಇದರ ಸಾಧಕರಾಗುವತ್ತ ನಿಮ್ಮ ಮೊದಲ ಹೆಜ್ಜೆ ಇಟ್ಟು ನೋಡಿ..ಆಗ ಹೇಳಿ ನಿಮ್ಮ ಅನುಭವ ನಮ್ಮ ಜೊತೆ.
1.ಚಕ್ರಾಸನ(ಸೇತುವೆ)

ಮಾಡೋ ವಿಧಾನ – ನೇರವಾಗಿ ಮಲಗಿ ನಿಮ್ಮ ಕಾಲುಗಳನ್ನು ಮೇಲಕ್ಕೆ ಎಳೆದುಕೊಂಡು ಗಂಟಿನ ಬಳಿ ಮಡಚಿಕೊಳ್ಳಿ, ನಿಮ್ಮ ಪಾದ ಗಳನ್ನು ನೇರವಾಗಿ ನೆಲದ ಮೇಲಿಡಿ. ಈಗ ನಿಮ್ಮ ಮೊಣಕಾಲನ್ನು ಹಿಡಿದುಕೊಂಡು ನಿಮ್ಮ ದೇಹವನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿ ನಿಮ್ಮ ತಲೆಯನ್ನು ಮೇಲೆತ್ತ ಬಾರದು
ಪ್ರಯೋಜನ- ನಿಮ್ಮ ಸೊಂಟ,ಬೆನ್ನುನೋವು ಹಾಗೂ ಹೊಟ್ಟೆನೋವು ಕಡಿಮೆಯಾಗುತ್ತದೆ.ಕೈಗಳು ಹಾಗೂ ಕಾಲಿನ ಭಾಗಕ್ಕೆ ಹೆಚ್ಚಿನ ಪ್ರಯೋಜನಕಾರಿ.
2.ಅರ್ಧಕಟಿ ಚಕ್ರಾಸನ(ಅರ್ಧ ಚಕ್ರ)

ಮೊದಲಿಗೆ ನೇರವಾಗಿ ನಿಂತು ನಿಮ್ಮ ಅಂಗೈಯ ಸಹಾಯದಿಂದ ಒಂದು ಬದಿಗೆ ಬಗ್ಗಲು ಪ್ರಯತ್ನ ಪಡಿ, ನಿಮ್ಮ ಇನ್ನೊಂದು ಕೈ ಹಾಗೂ ಕಾಲನ್ನು ಮೇಲ್ಮುಖವಾಗಿ ಬಾಗಿಸಿ. ಕಟಿ ಅಂದರೆ ಸೊಂಟ. ಇದು ನಿಮ್ಮ ಸೊಂಟದ ಭಾಗದಲ್ಲಿರುವ ಕೊಬ್ಬನ್ನು ನಿವಾರಿಸುತ್ತದೆ
ನಿಮ್ಮ ದೇಹದ ಎಲ್ಲಾ ಅಂಗಗಳೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಮಾಂಸ ಖಂಡಗಳು ಸದೃಢವಾಗುತ್ತದೆ.
3.ವೀರಭದ್ರಾಸನ

ನಿಮ್ಮಎರಡು ಕಾಲುಗಳ ನಡುವೆ ಅಂತರವಿಟ್ಟು ,ನಿಮ್ಮ ಗಂಟನ್ನು ಬದಿಗೆ ಬಾಗಿಸಿ, ಒಂದು ಬದಿಗೆ ಮುಖ ಮಾಡಿ, ನಿಮ್ಮ ಅಂಗೈಯನ್ನು ನಿಮ್ಮ ಮುಖದ ಕಡೆಗೆ ಮೇಲ್ಮುಖವಾಗಿರಿಸಿ.
ಕಾಲುಗಳಿಗೆ,ಸೊಂಟದ ಭಾಗಕ್ಕೆ,ಕೈಗಳಿಗೆ ಹಾಗೂ ಕುತ್ತಿಗೆಯ ಭಾಗಕ್ಕೆ ಹೆಚ್ಚಿನ ಪ್ರಯೋಜನಕಾರಿ
4.ಉತ್ಕಟಾಸನ(ಕುರ್ಛಿ)

ನೇರವಾಗಿ ನಿಂತು ನಿಮ್ಮ ಎರಡು ಕಾಲುಗಳ ನಡುವೆ ತುಸು ಅಂತರವಿಟ್ಟು, ಕುರ್ಛಿಯಲ್ಲಿ ಕುಳಿತಂತೆ ಭಂಗಿ ಮಾಡಿ, ಕೈಯನ್ನು ಬ್ಯಾಲೆನ್ಸ್ ಗೋಸ್ಕರ ಮುಂದಕ್ಕೆ ಚಾಚಿ.
ಬೆನ್ನು ಸೊಂಟ ಹೊಟ್ಟೆನೋವು ಹಾಗೂ ಕತ್ತಿನ ನೋವಿಗೂ ಉತ್ತಮ.ಬೊಜ್ಜು ಕರಗಿಸಿ ಮಲಬದ್ದತೆ ನೀಗಿಸುತ್ತದೆ.
5.ವೃಕ್ಷಾಸನ(ಮರ)

ಮೊದಲಿಗೆ ಒಂದು ಕಾಲನ್ನು ನೇರವಾಗಿಟ್ಟು, ಇನ್ನೊಂದು ಕಾಲನ್ನು ತೊಡೆಯ ಪಕ್ಕದಲ್ಲಿಟ್ಟು ಮಡಚಬೇಕು. ಕೈಗಳೆರಡೂ ಮೇಲಕ್ಕೆತ್ತಿ ನಮಸ್ಕಾರ ಭಂಗಿಯನ್ನು ಸೂಚಿಸಬೇಕು.
ಕಾಲಿನ ಶಕ್ತಿ ಹೆಚ್ಚಿಸುತ್ತದೆ, ಶ್ವಾಸ ಕೋಶಗಳ ತೊಂದರೆ ನಿವಾರಣೆ, ನೇರವಾಗಿ ನಿಲ್ಲಲು ಅಭ್ಯಾಸವಾಗುವಂತೆ ಮಾಡುತ್ತದೆ.
6.ಅರ್ಧಮತ್ಸ್ಯೇಂದ್ರಾಸನ

ಚಿತ್ರದಲ್ಲಿ ತೋರಿಸಿದಂತೆ ನಿಮ್ಮ ಕಾಲು ಗಳನ್ನು ಮುಂದಕ್ಕೆ ಚಾಚುತ್ತಾ, ಒಂದು ಕಾಲನ್ನು ಮೇಲೆತ್ತಿ, ನಿಮ್ಮ ಪಾದವನ್ನು ಮುಂದಕ್ಕೆ ಚಾಚಿರುವ ನಿಮ್ಮಕಾಲ ಗಂಟಿನ ಕೆಳಗೆ ಬರುವಂತಿಡಿ. ನಿಮ್ಮಕಾಲ ವಿರುದ್ದದ ಕೈಯನ್ನು, ನಿಮ್ಮ ಗಂಟಿನ ಕೆಳಗೆ ಬರುವಂತಿಡಿ ಹಾಗೂ ಇನ್ನೊಂದು ಕೈಯನ್ನು ಬ್ಯಾಲನ್ಸ್ ಗಾಗಿ ನೆಲದ ಮೇಲಿಡಿ.
ನಿಮ್ಮ ಬೆನ್ನನ್ನು ಸುದೃಢವಾಗಿಟ್ಟು, ಹೊಟ್ಟೆಯಲ್ಲಿರೋ ಅಧಿಕ ಕೊಬ್ಬನ್ನು ಕರಗಿಸುತ್ತದೆ.
7.ತ್ರಿಕೋನಾಸನ

ಎಷ್ಟಾಗತ್ತೋ ಅಷ್ಟು ಕಾಲುಗಳನ್ನು ಅಗಲವಾಗಿಸಿ ಹಾಗೂ ನೇರವಾಗಿರಿಸಿ, ನಿಮ್ಮ ಅಂಗೈಯನ್ನು ನೇರವಾಗಿ ನೆಲದ ಮೇಲಿಡಿ, ಒಂದು ಬದಿಗೆ ಬಾಗಿ ಇನ್ನೊಂದು ಕೈಯನ್ನು ಮೇಲ್ಮುಖವಾಗಿ ನೇರವಾಗಿಡಿ.
ಕಾಲುಗಳ ನ್ಯೂನತೆಯನ್ನು ಸರಿಪಡಿಸಿ,ಸೊಂಟ,ಕುತ್ತಿಗೆ ಬೆನ್ನುನೋವು ನಿವಾರಣೆಯಾಗುತ್ತದೆ.
8.ಪೂರ್ವೋತ್ತಾಸನ

ಕಾಲುಗಳನ್ನು ಮುಂದಕ್ಕೆ ಚಾಚಿ, ಕೈಗಳನ್ನು ನಿಮ್ಮಬೆನ್ನಿನ ಹಿಂಬದಿ ಇಟ್ಟು, ನಿಮ್ಮ ದೇಹವನ್ನು ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆತ್ತಿ ಪ್ರಯತ್ನಿಸಿ.
ಕೈಗಳಿಗೆ ಶಕ್ತಿ ಲಭಿಸಿ,ನಿಮ್ಮ ದೇಹದ ಸಮತೋಲನವನ್ನು ಕಾಪಾಡುತ್ತದೆ.
9.ಮಂಡೂಕಾಸನ(ಕಪ್ಪೆ)

ಕೈಬೆರಳುಗಳನ್ನು ನೇರವಾಗಿ ಚಾಚಿ ಹೊಟ್ಟೆಯ ಮೇಲಿಟ್ಟು,ಒಲಗೆ ತಳ್ಳೂತ್ತಾ ಉಸಿರು ಬಿಡುತ್ತಾ ನಿಧಾನವಾಗಿ ಮುಂದೆ ಬಾಗಿ,ಕತ್ತು ಮೇಲಕ್ಕೆತ್ತಿ
ಡಯಾಬಿಟಿಸ್ ಹಾಗೂ ಮಲಬದ್ದತೆಗೆ ಉತ್ತಮ ಪರಿಹಾರ,ಎದೆ ಹಾಗೂ ಹೊಟ್ತೆಯ ಎಲ್ಲಾ ಅಂಗಗಳಿಗೆ ಬಲ ನೀಡುತ್ತದೆ.
10.ನೌಕಾಸನ(ಬೋಟ್)

ಚಿತ್ರದಲ್ಲಿರುವಂತೆ ನಿಮ್ಮ ಕಾಲುಗಳನ್ನು ಹಾಗೂ ಕೈಗಳನ್ನು ಮೇಲಕ್ಕೆತ್ತಿ.
ಜೀರ್ಣಾಂಗಕ್ಕೆ ತುಂಬಾ ಪ್ರಯೋಜನ.ನಿಮ್ಮ ಹೊಟ್ಟೆಯ ಮಾಂಸ ಪೇಶಿಹಾಗೂ ಕಾಲಿನ ಮಾಂಸ ಪೇಶಿಗಳಿಗೆ ಬಲ ನೀಡುತ್ತದೆ.
11.ವಸಿಷ್ಟಾಸನ(ಋಷಿ)

ಸ್ವಲ್ಪ ಕಠಿನಕರವಾದ ಆಸನ ಇದಾಗಿದ್ದು, ಒಂದು ಬದಿಗೆ ಬಾಗಿ ಮಾಡಿದಲ್ಲಿ ತೀರಾ ಪ್ರಯಾಸ ಪಡಬೇಕಾಗಿಲ್ಲ
ಹೊಟ್ಟೆಯ ಹಾಗೂ ಕಾಲಿಗೆ ಬಲ ನೀಡುತ್ತದೆ.
12.ಅಧೋಮುಖ ಶ್ವಾನಾಸನ

ಕಾಲುಗಳ ನಡುವೆ ಸಾಮಾನ್ಯ ಅಂತರವನ್ನಿಟ್ಟು ಮುಂದಕ್ಕೆ ಬಾಗಿ, ನಿಮ್ಮ ಅಂಗೈಗಳೆರಡೂ ನೇರವಾಗಿ ನೆಲದ ಮೇಲಿಡಿ. ಸಾಮಾನ್ಯ ಉಸಿರಾಟ.
ನಿಮ್ಮ ಹೊಟ್ಟೆ ಹಾಗೂ ಕಾಲಿಗೆ ಪ್ರಯೋಜನಕಾರಿ
13.ಅರ್ಧಚಂದ್ರಾಸನ

ನಿಮ್ಮ ಕಾಲುಗಳನ್ನು ಹತ್ತಿರವಿಟ್ಟು,ಒಂದು ಬದಿಗೆ ಬಾಗಿ ಉಸಿರು ಒಳಗೆ ತೆಗೆದುಕೊಳ್ಳಿ,ಕೈ ಮೆಲಕ್ಕೆ ಬಾಗಿರಲಿ ಚಿತ್ರದಲ್ಲಿರುವಂತೆ.ಉಸಿರಾಟದ ಕಡೆಗೆ ಗಮನವಿರಲಿ.
14.ವಿಪರೀತಕರಣಿ

ಮೊದಲಿಗೆ ಚಿತ್ರದಲ್ಲಿರುವಂತೆ ಪ್ರಯತ್ನಿಸಿ,ಸಂಪೂರ್ಣ ಅಭ್ಯಾಸವಾದ ಬಳಿಕ ,ಗೋಡೆ ಇಲ್ಲದೆ ಪ್ರಯತ್ನಿಸಿ.
15.ಸೂರ್ಯನಮಸ್ಕಾರ

ಇದೊಂದು ಅತ್ಯಂತ ಪುರಾತನವಾದ, 13 ಮಂತ್ರಗಳನ್ನೊಳಗೊಂಡ ಹಾಗೂ ಎಲ್ಲರೂ ತಿಳಿದಿರಬಹುದಾದ ಆಸನವಾಗಿದೆ. ಸೂರ್ಯ ನಮಸ್ಕಾರದ ಪ್ರತಿಯೊಂದು ಸ್ಥಿತಿಯೂ ಒಂದು ಆಸನವಾಗಿದೆ. ಅಂದರೆ ಒಂದು ಪೂರ್ಣ ನಮಸ್ಕಾರ ಹಾಕಿದಾಗ ಹತ್ತು ಆಸನಗಳನ್ನು ಅಭ್ಯಸಿಸಿದಂತೆ.
ಈ ಆಸನಗಳನ್ನು ಮಾಡಿದ ವ್ಯಕ್ತಿಯ ದೇಹವು ಸದೃಢವಾಗುತ್ತದೆ, ರೋಗ ಮುಕ್ತವಾಗುತ್ತದೆ.
ಇವಿಷ್ಟು ಮಾಡಿ,ಇನ್ನು ಮುಂದೆ ಎಲ್ಲಾ ಬೊಜ್ಜುರೋಗಗಳಿಗೂ ಗುಡ್ ಬೈ ಹೇಳಿ….
- ಸ್ವರ್ಣಲತ ಭಟ್
Like us on Facebook The New India Times
POPULAR STORIES :
ಡಿಬೇಟ್ ವೇಳೆ ಮಹಿಳೆಗೆ ಅವಮಾನ ಮಾಡಿದ ಸಂಶೇರ್ ಪಠಾಣ್: ಸ್ಟುಡಿಯೋದಿಂದಲೇ ಹೊರ ಕಳುಹಿಸಿದ ಅರ್ನಬ್ ಗೋಸ್ವಾಮಿ..!
ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?
ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!
ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!
ಪ್ರಧಾನಿ ಅಂಗಳಕ್ಕೆ ತಲುಪಿದ ಜಗನ್-ಚಂದ್ರಬಾಬು ಬ್ಲಾಕ್‍ಮನಿ ಫೈಟ್..!
ಇನ್ನು ಕ್ರಿಕೆಟ್ ಮೈದಾನದಲ್ಲಿ 14 ಜನ ಫೀಲ್ಡರ್..!
ಪುಣೆಯಲ್ಲಿ ಭುಗಿಲೆದ್ದ ದಲಿತರು-ಮರಾಠರ ಸಂಘರ್ಷ..!
ವಿಷ ಕುಡಿದು ಆತ್ಮಹತ್ಯೆ ಯತ್ನಿಸುವ ನಾಟಕವಾಡಿದ ರೈತನ ವಿಡಿಯೋ ವೈರಲ್..!
ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್.. ಸ್ಪೀಡ್ ಕಳೆದುಕೊಳ್ಳುತ್ತಿದೆ ಜಿಯೋ ಸಿಮ್..!






