ನಿಮ್ಮ ಮುಖದಲ್ಲಿ ಸಣ್ಣ ಸಣ್ಣ ರಂಧ್ರಗಳಿವೆಯೇ.?  ಈ ಸಿಂಪಲ್ ಮನೆಮದ್ದು ಮಾಡಿ ನೋಡಿ ಮುಖದ ಅಂದ ಹೆಚ್ಚಿಸಿ…!

0
120

ಬ್ಲಾಕ್ ಹೆಡ್,ಮೊಡವೆಗಳು ಇವೆಲ್ಲಾವುಗಳಿಗಿಂತಲೂ ಹೆಚ್ಚಿನ ಸಮಸ್ಯೆ ಇರುವುದು ನಮ್ಮ ಕೆನ್ನೆ ಹಾಗೂ ಮುಖದ ಕೆಲವೊಂದು ಭಾಗಗಳಲ್ಲಿ ಹಬ್ಬಿರೋ ಸಣ್ಣ ಪುಟ್ಟ ರಂಧ್ರಗಳಿಂದ. ಅವುಗಳು ದಿನದಿಂದ ದಿನಕ್ಕೆ ಹೆಚ್ಚುತ್ತವೆಯೇ ಹೊರತು ಕಡಿಮೆಯಾಗಲಾರದು. ಅವುಗಳಲ್ಲಿ ವಾತಾವರಣದ ಧೂಳಿನ ಕಣಗಳೆಲ್ಲಾ ಸೇರಿ ನಮ್ಮ ಚರ್ಮದ ರೂಪವನ್ನು ಇನ್ನಷ್ಟು ಹದಗೆಟ್ಟಿಸುತ್ತದೆ, ಅದಕ್ಕಾಗಿ ಹಲವರು ಬ್ಲೀಚ್, ಫೇಷಿಯಲ್ ಗಳಿಗೆ ಮಾರು ಹೋಗುವುದುಂಟು ಆದರೆ ಇವುಗಳ ಬಳಿಕ ಈ ರಂಧ್ರಗಳು ಇನ್ನೂ ದೊಡ್ದದಾಗಿ ಕಾಣುತ್ತವೆ. ಅದಕ್ಕಾಗಿ ನೀವು ಯಾವ ಮಾರುಕಟ್ಟೆಯ ದುಬಾರಿ ಕ್ರೀಮ್ ಗಳಿಗೆ ದುಂದುವೆಚ್ಚ ಮಾಡದೆ, ಸಲೂನ್ ಟ್ರೀಟ್ ಮೆಂಟ್ ತಗೊಳ್ಳದೆನೆ ನಿಮ್ಮ ಅಡುಗೆ ಕೋಣೆಗೆ ಧಾವಿಸಿ ಅಲ್ಲಿರೋ ಕೆಲವೊಂದು ವಸ್ತುಗಳಿಗೆ ಮೊರೆ ಹೋದಲ್ಲಿ ಕೇವಲ ಒಂದು ವಾರದಲ್ಲಿ ಇದೆಲ್ಲಾ ನಿಮ್ಮ ಮುಖದಿಂದ ಮಾಯವಾಗಿ ಹೊಳೆಯುವ ಕಾಂತಿಪೂರ್ಣ ಚರ್ಮ ನಿಮ್ಮದಾಗುತ್ತದೆ.
1.ಮೊಟ್ಟೆಯ ಬಿಳಿ ಭಾಗ ಹಾಗೂ ಲಿಂಬೆ ಹಣ್ಣಿನ ರಸ

lemoneggmask
ಒಂದು ಕಪ್ ನಲ್ಲಿ ಲಿಂಬೆ ಹಣ್ಣಿನ ರಸ ತೆಗೆದು ಅದಕ್ಕೆ 2 ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ಸೇರಿಸಿ ದಪ್ಪನೆಯ ಪೇಸ್ಟ್ ಮಾಡಿಕೊಳ್ಳಿ, ಬಳಿಕ ನಿಮ್ಮ ಮುಖಕ್ಕೆ ಹಚ್ಚಿ, ವಿಶೇಷವಾಗಿ ಮುಖದ ರಂಧ್ರವಿರೋ ಭಾಗಗಳಿಗೆ ಹಚ್ಚಿ.15-20 ನಿಮಿಷದ ತನಕ ಬಿಟ್ಟು ಬಿಡಿ ಹಾಗೂ ತಣ್ಣನೆಯ ನೀರಿನಿಂದ ಮುಖ ತೊಳೆದು ಕೊಳ್ಳಿ, ಇದು ಮುಖದಲ್ಲಿರೋ ಸತ್ತ ಜೀವಕೋಶಗಳನ್ನು ಜೀವಂತವಾಗಿರುಸುವುದಲ್ಲದೆ, ನಿಮ್ಮ ಚರ್ಮವನ್ನು ಬಿಗಿಗೊಳಿಸುತ್ತದೆ.
2.ನೀರು ಹಾಗೂ ಬೇಕಿಂಗ್ ಸೋಡಾ

bakingsodamask
ಒಂದು ಕಪ್ ನಲ್ಲಿ 2 ಚಮಚ ನೀರಿನೊಂದಿಗೆ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15-20 ನಿಮಿಷ ಬಿಟ್ಟು ನೋಡಿ ತಣ್ಣನೆಯ ನೀರಿನಲ್ಲಿ ತೊಳೆದಲ್ಲಿ ನಿಮ್ಮ ಚರ್ಮಬಿಗಿಯಾಗುತ್ತದೆ.
3.ಟೊಮೆಟೋ ಹಾಗೂ ಲಿಂಬೆ ಹಣ್ಣಿನ ಜ್ಯೂಸ್

tomatolemon
2 ಟೊಮೆಟೋವನ್ನು ಚೆನ್ನಾಗಿ ಪೇಸ್ಟ್ ಮಾಡಿ,ಅದಕ್ಕೆ ಕೆಲವೊಂದು ಹನಿ ಲಿಂಬೆಹಣ್ಣಿನ ರಸ ಸೇರಿಸಿ ದಪ್ಪನೆಯ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಮೇಲಿನ ವಿಧಾನದಂತೆ ತಣ್ಣನೆಯ ನೀರಿನಲ್ಲಿ ತೊಳೆದಲ್ಲಿ ಚರ್ಮದಲ್ಲಿರೋ ಆ ತೊಂದರೆ ನಿವಾರಣೆಯಾಗುತ್ತದೆ.
4.ರೋಸ್ ವಾಟರ್,ಸೌತೆ ಹಾಗೂ ಲಿಂಬೆ ಹಣ್ಣು

cucumbermask
ನಿಮ್ಮ ಮುಖದ ಸೌಂದರ್ಯಕ್ಕೆ ಇದೊಂದು ಪ್ರಮುಖ ಮನೆಮದ್ದಾಗಿದೆ. ಸೌತೆ ಸಿಪ್ಪೆ ತೆಗೆದು ಅದರ ಒಳಗಿನ ಬದಿಯನ್ನು ಮಾತ್ರ ತೆಗೆದಿಟ್ಟು, ಅದಕ್ಕೆ ಒಂದು ಚಮಚ ರೋಸ್ ವಾಟರ್ ಹಾಗೂ 3-4 ಹನಿ ಲಿಂಬೆ ಹಣ್ಣಿನ ರಸವನ್ನು ಸೇರಿಸಿ, ಈ ಮಿಶ್ರಣವನ್ನು ಒಂದು ತೆಳು ಬಟ್ಟೆಯ ಮೇಲೆ ಹರಡಿ, ಕ್ರಮೇಣ ನಿಮ್ಮಪೂರ್ತಿ ಮುಖದ ಭಾಗಕ್ಕೆ ಇದನ್ನುಲೇಪಿಸಿ. 15 ನಿಮಿಷಗಳವರೆಗೆ ಇದು ಒಣಗುವವರೆಗೂ ಇಟ್ಟು ನಂತರ ತಣ್ಣನೆಯ ನೀರಿನಲ್ಲಿ ತೊಳೆದುಕೊಳ್ಳಿ, ಆ ಬಳಿಕ ನೋಡಿ ನಿಮ್ಮ ಮುಖದಲ್ಲಿರುವ ರಂಧ್ರಗಳು ಜಗ್ಗಿರುತ್ತವೆ.
5.ಪೈನಾಪ್ಪಲ್ ಹಾಗೂ ಲಿಂಬೆ ಹಣ್ಣಿನ ರಸ

pineapplelemonface
2 ಟೇಬಲ್ ಸ್ಪೂನ್ ಪೈನಾಪಲ್ ರಸವನ್ನು ಕಲವೊಂದು ಹನಿ ಲಿಂಬೆಹಣ್ಣಿನ ರಸದೊಂದಿಗೆ ಮಿಕ್ಸ್ ಮಾಡಿ,ತೆಳುಬಟ್ಟೆಯನ್ನು ಅದರಲ್ಲಿ ನೆನೆಸಿಟ್ಟು, ನಿಧಾನವಾಗಿ ನಿಮ್ಮ ಮುಖಕ್ಕೆ ಹಚ್ಚಿ, ಒಣಗಲು ಬಿಟ್ಟು 1೦ ನಿಮಿಷ ಬಳಿಕ ತೊಳೆದುಕೊಳ್ಳಿ
6.ಬಾದಾಮ್ ಹಾಗೂ ಲಿಂಬೆ ಹಣ್ಣಿನ ಮಿಶ್ರಣ

almondmask
ರಾತ್ರಿ ಬಾದಮ್ ನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಅದನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ ಹಾಗೂ ಅದಕ್ಕೆ 1 ಚಮಚದಷ್ಟು ಲಿಂಬೆ ಹಣ್ಣೀನ ರಸ ಸೇರಿಸಿ ಮಿಶ್ರಣ ಮಾಡಿ ಬಳಿಕ ಮುಖಕ್ಕೆ ಲೇಪಿಸಿಕೊಳ್ಳಿ, 20-25 ನಿಮಿಷಗಳ ಬಳಿಕ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ನಿಮ್ಮ ಮುಖ ಮೃದುವಾಗಿ, ಸುಂದರವಾಗಿ ಕಂಗೊಳಿಸುವುದಲ್ಲದೆ,ರಂಧ್ರಗಳು ಮಾಸುತ್ತವೆ.
ಈ ಸೂಪರ್ ಸಿಂಪಲ್ ವಿಧಾನಗಳನ್ನು ಅನುಸರಿಸಿ ನೋಡಿ ಹೊಳೆಯುತ್ತಿರೋ ಮೃದು ಚರ್ಮ ನಿಮ್ಮದಾಗಿಸಿಕೊಳ್ಳಿ….

  • ಸ್ವರ್ಣಲತ ಭಟ್

Like us on Facebook  The New India Times

POPULAR  STORIES :

ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?

ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!

ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!

ಪ್ರಧಾನಿ ಅಂಗಳಕ್ಕೆ ತಲುಪಿದ ಜಗನ್-ಚಂದ್ರಬಾಬು ಬ್ಲಾಕ್‍ಮನಿ ಫೈಟ್..!

ಇನ್ನು ಕ್ರಿಕೆಟ್ ಮೈದಾನದಲ್ಲಿ 14 ಜನ ಫೀಲ್ಡರ್..!

LEAVE A REPLY

Please enter your comment!
Please enter your name here