ತುಟಿಗಳು ತೊಂಡೆ ಹಣ್ಣಿನ ಹಾಗೆ ಇರ್ಬೇಕಾ!? ಹಾಗಿದ್ರೆ ಈ ಮನೆ ಮದ್ದುಗಳನ್ನೊಮ್ಮೆ ಟ್ರೈ ಮಾಡಿ!
ತುಟಿಗಳು ಅಂದವಾಗಿ, ಮೃದುವಾಗಿ, ಶೈನಿಯಾಗಿ, ಪಿಂಕ್ ಕಲರ್ ನಲ್ಲಿ ಇದ್ದರೆ ತುಟಿಗಳು ತುಂಬಾ ಚೆನ್ನಾಗಿ ಕಾಣುತ್ತವೆ. ಅಲ್ಲದೇ ಎಲ್ಲರಿಗೂ ತುಟಿಗಳು ಹೀಗೆ ಇರಬೇಕು ಎಂಬಾ ಆಸೆ ಇರುತ್ತದೆ ಆದ್ರೆ ಎಲ್ಲರಿಗೂ ತುಟಿಗಳು ಹೀಗೆ ಇರಲ್ಲ. ಕೆಲವೊಮ್ಮೆ ತುಟಿಗಳ ಮೇಲೆ ಬಿಳಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಹೀಗಾದಾಗ ಮನೆಯಲ್ಲಿರುವ ಈ ಮನೆ ಮದ್ದನ್ನು ಪ್ರಯತ್ನಿಸಿದರೆ ತುಟಿಯ ಮೇಲಿನ ಬಿಳಿ ಕಲೆಗಳು ಸುಲಭವಾಗಿ ನಿವಾರಣೆಯಾಗುತ್ತದೆ.
ಮೊದಲಿಗೆ ಬೆಳ್ಳುಳ್ಳಿ ಎಸಳು ಗಳನ್ನು ಜಜ್ಜಿಕೊಂಡು, ಅದಕ್ಕೆ ಬಾದಾಮಿ ಎಣ್ಣೆ ಸೇರಿಸಿಕೊಳ್ಳಿ. ಇದನ್ನು ದಿನನಿತ್ಯ ತುಟಿಗಳಿಗೆ ಹಚ್ಚಿಕೊಳ್ಳಿ. ಕೆಲವು ನಿಮಿಷ ಕಾಲ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯುವುದು ಪರಿಣಾಮಕಾರಿ ಮನೆ ಮದ್ದಾಗಿದೆ.
ಸ್ವಲ್ಪ ನೀರಿಗೆ ಒಂದೆರಡು ಚಮಚ ನಿಂಬೆರಸವನ್ನು ಸೇರಿಸಿ, ಹತ್ತಿ ಉಂಡೆಯಲ್ಲಿ ಅದ್ದಿಕೊಳ್ಳಿ. ಇದನ್ನು ನಿಮ್ಮ ತುಟಿಗಳ ಮೇಲೆ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಇರಿಸಿಕೊಳ್ಳಿ. ಹೀಗೆ ಮಾಡುವುದರಿಂದ ಬಿಳಿ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು.
ಕೊಬ್ಬರಿ ಎಣ್ಣೆಯನ್ನು ಬಿಳಿ ಕಲೆಗಳ ಮೇಲೆ ಹಚ್ಚಿ ಮಸಾಜ್ ಮಾಡುವುದರಿಂದ ಎರಡೇ ವಾರಗಳಲ್ಲಿ ಕಲೆಯೂ ಇಲ್ಲದಂತಾಗುತ್ತದೆ.
ಒಂದು ಚಮಚ ಅರಶಿನ ಪುಡಿಗೆ ಎರಡು ಚಮಚ ಸಾಸಿವೆ ಎಣ್ಣೆ ಸೇರಿಸಿ ಮಿಶ್ರಣ ಮಾಡಿ ಕಲೆಯಿದ್ದಲ್ಲಿ ಹಚ್ಚಿದರೆ ಕಲೆಯೂ ನಿವಾರಣೆಯಾಗುತ್ತದೆ.
ಆ್ಯಪಲ್ ಸೀಡರ್ ವಿನೇಗರ್ ನಲ್ಲಿ ಹತ್ತಿ ಉಂಡೆ ಅದ್ದಿ, ಇದನ್ನು ತುಟಿಗಳಲ್ಲಿ ಕಲೆ ಇರುವಲ್ಲಿಗೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಆಲಿವ್ ತೈಲವನ್ನು ತುಟಿಗಳಲ್ಲಿ ಕಲೆ ಇರುವ ಜಾಗಕ್ಕೆ ಇದನ್ನು ಹಚ್ಚಿಕೊಳ್ಳಿ, ಒಂದು ಗಂಟೆ ಕಾಲ ಹಾಗೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ದಿನಕ್ಕೆ ಎರಡು ಮೂರು ಸಲ ಈ ಮನೆ ಮದ್ದನ್ನು ಹಚ್ಚಿದರೆ ಕಲೆಯೂ ನಿವಾರಣೆಯಾಗುತ್ತದೆ.