ಟೆಕ್ಸಾಸ್ ಕನ್ನಡ ಶಾರ್ಟ್ ಫಿಲ್ಮ್ ಫೆಸ್ಟಿವಲ್ – ಕನ್ನಡದ ಕಣ್ಮಣಿಗಳ ಪ್ರತಿಬಿಂಬ
ಡಾ. ಅನುರಾಧ ತಾವರೇಕೆರೆ ಮತ್ತು ಡಾ. ಅಮರನಾಥ್, ಮೂಲತಃ ಕರ್ನಾಟಕದ ವೈದ್ಯ ದಂಪತಿ, ಇವರು ತಮ್ಮ ಜೀವನವನ್ನು ಅಮೆರಿಕಾದಲ್ಲಿ ಸೆಟಲ್ ಮಾಡಿಕೊಂಡಿದ್ದಾರೆ. ಆದರೂ, ತಮ್ಮ ಮನಸ್ಸಿನಲ್ಲಿ ಕನ್ನಡದ ಸಂಸ್ಕೃತಿ ಮತ್ತು ಭಾಷೆಯನ್ನು ಮರೆಯದೇ, ಈ ದಂಪತಿಗಳು ಟೆಕ್ಸಾಸ್ ಕನ್ನಡ ಶಾರ್ಟ್ ಫಿಲ್ಮ್ ಫೆಸ್ಟಿವಲ್ (TKSFF) ಎಂಬ ಅದ್ಭುತ ಕಾರ್ಯಕ್ರಮವನ್ನು ಆರಂಭಿಸಲು ಮುಂಚೂಣಿಯಲ್ಲಿದ್ದಾರೆ. ಇವರೊಂದಿಗೆ ಪ್ರಶಾಂತ್ ಗೌಡ ಮತ್ತು ರೋಹಿತ್ ಅವರು ಪ್ರಮುಖ ದಾರಿದೀಪಗಳಾಗಿ ನಿಂತು, ಕನ್ನಡದ ಕಿರಣವನ್ನು ವಿಶ್ವದ ದಿಕ್ಕುಗಳಿಗೆ ತಲುಪಿಸಲು ಶ್ರಮಿಸುತ್ತಿದ್ದಾರೆ , ಮತ್ತು ಫೋಕಸ್ ಟೀಮ್ ನ ಹರಿಚರಣ್ ಮೈಲಾರಯ್ಯ , ರಂಗನಾಥ ಬಂಡೆ , ಸುನಿಲ್ ಸುಬ್ಬಣ್ಣ , ಅರ್ಚನಾ ಶಶಿಧರ್ , ಶಿವಶಂಕರ್ ಎಸ್ ನಾಗರಾಜ್ , ಅಶ್ವಿನ್ ಮೈಸೂರ್ , ಚಕ್ರಪಾಣಿ ರಾವ್, ರಾಚಪ್ಪ ಬೆಳ್ಳಪ್ಪ , ಜಯಂತಿ ಆರ್ಯ ಅವರು ಸಹ ಶ್ರಮಿಸುತ್ತಿದ್ದಾರೆ
ಇವರೆಲ್ಲರೂ ಕನ್ನಡದ ಆರಾಧಕರಿಗೆ ಪ್ರೇರಣೆ. ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ, ತಮ್ಮ ಮಾತೃ ಭಾಷೆಯನ್ನು ಪ್ರೋತ್ಸಾಹಿಸಲು ಈ ಹಾದಿಯನ್ನು ಆಯ್ಕೆ ಮಾಡಿದ್ದು ಎಲ್ಲಾ ಕನ್ನಡಿಗರಿಗೆ ಸ್ಪೂರ್ತಿದಾಯಕ. TKSFF ಅವರ ಪ್ರಯತ್ನದ ಪ್ರತಿಫಲ ಮತ್ತು ಅವರ ಕನ್ನಡಪ್ರೇಮದ ಪರಿಮಳವನ್ನು ಉತ್ತರ ಅಮೆರಿಕಾದ ಕನ್ನಡಿಗರಿಗೆ ತಲುಪಿಸಲು ಒತ್ತು ನೀಡುತ್ತಿದೆ.
ಉತ್ಸವದ ವಿಶೇಷ:
TKSFF ಕನ್ನಡ ಕಿರುಚಿತ್ರಗಳನ್ನು ಪ್ರೋತ್ಸಾಹಿಸುವ, ಹೊಸ ಪ್ರತಿಭೆಗಳನ್ನು ಗುರುತಿಸುವ ಮತ್ತು ಕನ್ನಡ ಕತೆಗಳನ್ನು ಜಗತ್ತಿನ ಮುಂದೆ ತರುವ ಒಂದು ಸೃಜನಶೀಲ ವೇದಿಕೆ.
ವೆಬಿನಾರ್‌ಗಳು, ರೆಡ್ ಕಾರ್ಪೆಟ್ ಪ್ರದರ್ಶನಗಳು ಮತ್ತು ಕಿರುಚಿತ್ರ ಪ್ರದರ್ಶನಗಳ ಮೂಲಕ ಕನ್ನಡಿಗರಿಗೆ ತಮ್ಮ ಕಲೆ ತೋರಿಸಲು ಅವಕಾಶ ನೀಡುತ್ತದೆ.
ಈ ಉತ್ಸವದ ಮೂಲಕ ಕನ್ನಡ ಸಂಸ್ಕೃತಿಯ ದಾರಿಯನ್ನು ಮುಂದುವರಿಸೋಣ ಎಂಬ ಸಂದೇಶವನ್ನು ಹರಡಲಾಗುತ್ತದೆ.
ಪ್ರಮುಖ ಇವೆಂಟ್:
ಜನವರಿ 11 ರಂದು ಮಲ್ಲೇಶ್ವರಂನ ರೇಣುಕಾಂಬ ಡಿಜಿಟಲ್ ಸ್ಟುಡಿಯೋದಲ್ಲಿ ಟಿ.ಕೆ.ಎಸ್.ಎಫ್.ಎಫ್. ಹಮ್ಮಿಕೊಂಡಿರುವ ಕನ್ನಡ ಕಿರುಚಿತ್ರ ಪ್ರದರ್ಶನ ಕಾರ್ಯಕ್ರಮವು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಚಲನಚಿತ್ರೋದ್ಯಮದ ಅನೇಕ ಪ್ರಮುಖ ಅತಿಥಿಗಳು ಭಾಗವಹಿಸಲಿದ್ದಾರೆ.
ತಿಳಿವು ಮತ್ತು ಒಗ್ಗಟ್ಟಿನ ಸಂಕಲ್ಪ:
TKSFF ಕನ್ನಡದ ಕಲೆ ಮತ್ತು ಕಥೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿಸಲು ಶ್ರಮಿಸುತ್ತಿದೆ. ಕನ್ನಡಿಗರ ಕನಸುಗಳನ್ನು ಸಾಕಾರಗೊಳಿಸಲು, ಇವರ ಒಗ್ಗಟ್ಟಾದ ಶ್ರಮ, ಪ್ರೋತ್ಸಾಹ, ಮತ್ತು ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ.
ಇವುಕಿಂತ ಹೆಚ್ಚಾಗಿ ಕನ್ನಡದ ಬೆಳವಣಿಗೆಯನ್ನು ಉತ್ತೇಜಿಸಲು ನಾವು ನೋಡಬೇಕಾದ ಉದಾಹರಣೆ TKSFF. ಹೆಚ್ಚಿನ ಮಾಹಿತಿಗೆ www.texaskannadashortfilmfestival.org ಗೆ ಭೇಟಿ ನೀಡಿ.
“ನಮ್ಮ ಕನ್ನಡ, ನಮ್ಮ ಹೆಮ್ಮೆ”