ಬಿಗ್ ಬಾಸ್ ಮನೆಗೆ ಶರಣ್, ಅಧಿತಿ ಪ್ರಭುದೇವ ಎಂಟ್ರಿ! ಫಿನಾಲೆ ಟಿಕೆಟ್ ಪಡೆದವರು ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನೇನು ಫೈನಲ್ ಹಂತಕ್ಕೆ ತಲುಪಿದೆ ಟಿಕೆಟ್ ಟು ಫಿನಾಲೆ ಟಾಸ್ಕ್ ಗಳು ಜೋರಾಗೆ ನಡಿತಾ ಇದೆ, ಸ್ಪರ್ಧಿಗಳಲ್ಲಿ ಫಿನಾಲೆಗೆ ಹೋಗುವ ಹುಮ್ಮಸ್ಸು ಜಾಸ್ತಿಯಾಗಿದೆ. ರಜತ್, ಭವ್ಯಾ, ತ್ರಿವಿಕ್ರಂ ಹಾಗೂ ಹನುಮಂತ ಅವರು ಫಿನಾಲೆ ಟಿಕೆಟ್ ಪಡೆಯುವ ರೇಸ್ನಲ್ಲಿ ಇದ್ದಾರೆ. ಈ ಟಾಸ್ಕ್ನ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಇತ್ತು. ಅದಕ್ಕೆ ಉತ್ತರ ಇನ್ನಷ್ಟೇ ಸಿಗಬೇಕಿದೆ. ಈ ಮಧ್ಯೆ ಫಿನಾಲೆ ಟಿಕೆಟ್ ನೀಡೋಕೆ ಅಧಿತಿ ಪ್ರಭುದೇವ ಹಾಗೂ ಶರಣ್ ಆಗಮಿಸಿದ್ದಾರೆ.
ಹೌದು ಟ್ರಂಕ್ನಲ್ಲಿರುವ ಬಾವುಟ ಇರುವ ಸ್ಟಿಕ್ ತೆಗೆದುಕೊಂಡು ಹಗ್ಗಗಳಿಂದ ಮಾಡಿದ ಬಲೆಯನ್ನು ಹಿಡಿದು ಮೇಲಕ್ಕೆ ಏರಬೇಕಿದೆ. ಬಳಿಕ ಅಲ್ಲಿ ಹೋಗಿ ಬಾವುಟದ ಸ್ಟಿಕ್ ಇಟ್ಟು ಬಿಗ್ಬಾಸ್ ಎಂದು ಕೂಗಿ ಹೇಳಬೇಕು. ಈ ಟಾಸ್ಕ್ ಅನ್ನು ಸ್ಪರ್ಧಿಗಳು ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಸದ್ಯ ಈ ಟಾಸ್ಕ್ಗೆ ಅಣಿಯಾಗಿರುವ ತ್ರಿವಿಕ್ರಮ್,
ರಜತ್ ಕಿಶನ್, ಭವ್ಯ ಹಾಗೂ ಹನುಮಂತು ಇವರಲ್ಲಿ ಯಾರು ಅತ್ಯಂತ ಕಡಿಮೆ ಅವಧಿಯಲ್ಲಿ ಆಟ ಮುಗಿಸುತ್ತಾರೋ ಅವರು ಫಿನಾಲೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲಿದ್ದಾರೆ. ಮನೆಗೆ ಅತಿಥಿಯಾಗಿ ಆಗಮಿಸಿರುವ ಅದಿತಿ ಹಾಗೂ ಚರಣ್ ಅವರು ಸ್ಪರ್ಧಿಯನ್ನು ಗುರುತಿಸಿದ್ದಾರೆ. ನೇರವಾಗಿ ಫಿನಾಲೆಗೆ ಹೋಗುವಂತ ಒಬ್ಬ ಸ್ಪರ್ಧಿ ಎಂದು ಶರಣ್ ಹೇಳಿದ್ದಾರೆ. ಆದರೆ ಸ್ಪರ್ಧಿ ಯಾರು ಎಂದು ಹೆಸರನ್ನು ಬಹಿರಂಗ ಪಡಿಸಿಲ್ಲ. ಇನ್ನೂ ಅಧಿತಿ ಪ್ರಭುದೇವ ಹಾಗೂ ಶರಣ್ ಅವರ ನಟನೆಯ ‘ಛೂಮಂತರ್’ ಸಿನಿಮಾ ರಿಲೀಸ್ ಆಗಿದೆ. ಅದರ ಪ್ರಚಾರಕ್ಕಾಗಿ ಬಂದಿದ್ದಾರೆ.