ಮೊಳಕೆಕಟ್ಟಿದ ಹೆಸರುಕಾಳು ತಿನ್ನುವುದರಿಂದಾಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿದೆ ನೋಡಿ..!
ಸಾವಯುವ ಮೂಲದಿಂದ ಕೂಡಿರುವ ಜೀವನ ಎಲ್ಲರ ನಿರೀಕ್ಷೆ. ನಮ್ಮ ಆರೋಗ್ಯದ ರಕ್ಷಣೆಗಾಗಿ ಎಲ್ಲಾ ಆಯಾಮಗಳಲ್ಲೂ ನಾವು ಆಲೋಚನೆ ಮಾಡಿದರೆ ಮೊಳಕೆ ಕಟ್ಟಿದ ಕಾಳುಗಳು ಅಡ್ಡ ಪರಿಣಾಮವಿಲ್ಲದೆ ನಮಗೆ ಸಹಾಯ ಮಾಡುತ್ತವೆ. ಅನೇಕ ಅದ್ಭುತ ಲಾಭಗಳನ್ನು ತನ್ನೊಳಗೆ ಅಡಗಿಸಿಕೊಂಡಿರೋ ಮೊಳಕೆ ಕಾಳುಗಳಲ್ಲಿ ಮೊಳಕೆ ಒಡೆದ ಹೆಸರು ಕಾಳು ಒಂದು. ಇದನ್ನು ಮೊಳಕೆ ಬರಿಸಿ ತಿನ್ನುವುದರಿಂದ ಅದರ ಉತ್ಕರ್ಷಣ ನಿರೋಧಕ ಗುಣಗಳನ್ನು ಹೆಚ್ಚಿಸುತ್ತದೆ ಮತ್ತು ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸುತ್ತದೆ.
-ಹೆಸರುಕಾಳು ಕಬ್ಬಿಣ, ಪೊಟ್ಯಾಸಿಯಮ್, ಅಮೈನೋ ಏಡ್ಸ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.
– ಹೆಸರು ಕಾಳು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ
– ಇದು ಒಟ್ಟು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
– ಯಕೃತ್ತಿಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ
-ಮೊಳಕೆ ಭರಿಸಿದ ಹೆಸರುಬೇಳೆಯಲ್ಲಿ ಉನ್ನತ ಮಟ್ಟದ ಕಿಣ್ವಗಳು ಇರುವುದು. ಈ ಕಿಣ್ವಗಳು ದೇಹದಲ್ಲಿ ಚಯಾಪಚಯ ಕ್ರಿಯೆ ವೃದ್ಧಿಸಿ, ದೇಹದಲ್ಲಿ ರಾಸಾಯನಿಕ ಪ್ರತಿಕ್ರಿಯೆಯನ್ನು ವೃದ್ಧಿಸಿ, ಜೀರ್ಣಕ್ರಿಯೆಗೆ ನೆರವಾಗುವುದು. ಕಿಣ್ವಗಳು ಆಹಾರವನ್ನು ವಿಘಟಿಸುವುದು ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುವುದು. ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ಜೀರ್ಣಕ್ರಿಯೆಯನ್ನು ನಿಯಂತ್ರಿಸುವುದು.
– ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಾಯಕವಾಗಿದೆ.
-ಕ್ಯಾಲೊರಿ ತುಂಬಾ ಕಡಿಮೆಯಿರುವ ಕಾರಣದಿಂದಾಗಿ ತೂಕ ಇಳಿಸಿಕೊಳ್ಳುವ ಆಹಾರ ಕ್ರಮದಲ್ಲಿ ಇದನ್ನು ಚಿಂತೆಯಿಲ್ಲದೆ ಬಳಸಿಕೊಳ್ಳಬಹುದು. ಇದರಲ್ಲಿ ಇರುವಂತಹ ನಾರಿನಾಂಶವು ದೀರ್ಘಕಾಲದ ತನಕ ಹಸಿವಾಗದಂತೆ ನೋಡಿಕೊಳ್ಳುವುದು. ಹೆಚ್ಚು ತಿನ್ನಬೇಕು ಎಂದು ಮೆದುಳಿಗೆ ಹೇಳುವ ಗ್ರೆಲಿನ್ ಹಾರ್ಮೋನು ಬಿಡುಗಡೆಯನ್ನು ಇದು ತಡೆಯುವುದು.
-ಗ್ಲೊಬುಲಿನ್ ಮತ್ತು ಅಲ್ಬುಲಿನ್ ಪ್ರೋಟೀನ್ ನ ಪ್ರಮುಖ ಅಂಶವಾಗಿದೆ. ಮೊಳಕೆಯುಕ್ತ ಹೆಸರುಬೇಳೆಯಲ್ಲಿ ಶೇ.85ರಷ್ಟು ಅಮಿನೋ ಆಮ್ಲವನ್ನು ಇದು ಬಳಸಿಕೊಳ್ಳುವುದು. ಕೋಶಗಳನ್ನು ಬೆಳೆಸಲು ಹಾಗೂ ಸರಿಪಡಿಸಲು ಪ್ರೋಟೀನ್ ಅಗತ್ಯವಾಗಿ ಬೇಕು. ಪ್ರೋಟೀನ್ ನಿಂದ ಮೂಳೆಗಳು, ಸ್ನಾಯುಗಳ, ಚರ್ಮ ಬೆಳೆಯುವುದು.