ನೀವು ಮುಖ ತುಂಬಾ ಕಪ್ಪಾಗಿದ್ಯಾ!? ಡೋಂಟ್ ವರಿ ರಾತ್ರಿ ಇವುಗಳನ್ನು ತಪ್ಪದೇ ಹಚ್ಚಿ!

Date:

ನೀವು ಮುಖ ತುಂಬಾ ಕಪ್ಪಾಗಿದ್ಯಾ!? ಡೋಂಟ್ ವರಿ ರಾತ್ರಿ ಇವುಗಳನ್ನು ತಪ್ಪದೇ ಹಚ್ಚಿ!

ಚರ್ಮದ ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಬದಲಾದ ಜೀವನಶೈಲಿ, ಒತ್ತಡದ ಬದುಕು, ಸರಿಯಾಗಿ ನಿದ್ದೆ ಇಲ್ಲದೇ ಇರುವುದು, ಬಿಸಿಲಿನಲ್ಲಿ ಓಡಾಟ, ನಿರ್ಜಲೀಕರಣ ಹೀಗೆ ಅನೇಕ ಕಾರಣಗಳಿಂದ ಚರ್ಮ ಡ್ರೈ ಆಗಿ ಕಾಂತಿಯನ್ನು ಕಳೆದುಕೊಳ್ಳಬಹುದು.

ಇನ್ನೂ ಅನೇಕ ಮಂದಿ ತಾವು ಕಪ್ಪಾಗಿದ್ದೇವೆ ಎಂದು ಬೇಸರಗೊಳ್ಳುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಸ್ಕಿನ್ ಕೇರ್ ಉತ್ಪನ್ನಗಳನ್ನು ಬಳಸುತ್ತಾರೆ. ಹೀಗಿದ್ದರೂ ತಾವು ಅಂದುಕೊಂಡಂತೆ ಉತ್ತಮ ಫಲಿತಾಂಶ ಇರಲಿ, ಕೊಂಚ ವ್ಯತ್ಯಾಸ ಕೂಡ ಕಾಣುವುದಿಲ್ಲ. ಹೀಗಾಗಿ ತ್ವಚೆ ಹಾಗೂ ಸೌಂದರ್ಯವನ್ನು ಆಕರ್ಷಕವಾಗಿ ಇಟ್ಟುಕೊಳ್ಳಬೇಕು ಎಂದರೆ ಕೆಲವು ಆರೈಕೆ ಮಾಡುವುದು ತುಂಬಾ ಅಗತ್ಯ.

ಇದಕ್ಕಾಗಿ ರಾಸಾಯನಿಕ ಪದಾರ್ಥಗಳಿಂದ ಮುಖವನ್ನು ಅಂದಗೊಳಿಸುವ ಬದಲು ನೈಸರ್ಗಿಕ ಪದಾರ್ಥಗಳ ಬಳಕೆಯಿಂದ ಸದಾ ಕಾಲ ಮುಖ ಹೊಳೆಯುವಂತೆ ಇಟ್ಟುಕೊಳ್ಳಬಹುದು. ಅಲ್ಲದೇ ನಿಮ್ಮ ಮುಖವನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು.

ನೀವೇನಾದರೂ ಹೊರಗೆ ಹೋಗಿ ಬಂದಾಗ ಆಯಾಸ ಉಂಟಾಗಿ, ತ್ವಚೆ ಮಾಲಿನ್ಯಕ್ಕೆ ಒಳಗಾಗಬಹುದು. ಇದರಿಂದ ನಿಮ್ಮ ಮುಖ ಮಂಕಾಗಿ ಕಾಣಬಹುದು. ಹೀಗಾಗಿ ನಿಮ್ಮ ಮುಖದಲ್ಲಿನ ಕಲೆಗಳು ನಿವಾರಣೆಯಾಗುವುದರೊಂದಿಗೆ ಗ್ಲೋ ಆಗಿ ಕಾಣಬೇಕೆಂದರೆ ರಾತ್ರಿ ಹೊತ್ತು ಮಲಗುವ ಮುನ್ನ ಮುಖಕ್ಕೆ ಈ ಪದಾರ್ಥಗಳನ್ನು ಹಚ್ಚಿ. ಇದರಿಂದ ಮುಖದ ಮೇಲಿನ ಕಲೆಗಳು ಕಡಿಮೆಯಾಗಿ ಮತ್ತು ಕಾಂತಿಯುತವಾಗಿ ಸ್ಕಿನ್ ಕ್ಲಿಯರ್ ಆಗಿ ಕಾಣಿಸುತ್ತದೆ.

ಮುಖಕ್ಕೆ ಹಚ್ಚಲು ಬಳಸುವ ಈ ವಸ್ತುಗಳಿಗಾಗಿ ನೀವು ಯಾವುದೇ ಹಣ ವೆಚ್ಚ ಮಾಡುವ ಅಗತ್ಯ ಕೂಡ ಇಲ್ಲ. ಕೇವಲ ಮನೆಯಲ್ಲಿರುವ ಈ ಪದಾರ್ಥಗಳ ಮೂಲಕವೇ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಜೊತೆಗೆ ಅನೇಕ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ತೆಂಗಿನ ಎಣ್ಣೆ: ನಿಮ್ಮ ಚರ್ಮವು ತುಂಬಾ ಒಣಗಿದ್ದರೆ, ನೀವು ಮಲಗುವ ಮುನ್ನ ತೆಂಗಿನ ಎಣ್ಣೆಯನ್ನು ಮುಖಕ್ಕೆ ಹಚ್ಚಬಹುದು. ತೆಂಗಿನ ಎಣ್ಣೆಯಿಂದಾಗಿ ಚರ್ಮ ಒಡೆದುಕೊಳ್ಳುವಿಕೆ ಸಮಸ್ಯೆ ಕಡಿಮೆಯಾಗುತ್ತದೆ.

ವಿಟಮಿನ್ ಇ ಕ್ಯಾಪ್ಸುಲ್ಗಳು: ವಿಟಮಿನ್ ಇ ಕ್ಯಾಪ್ಸುಲ್ಗಳನ್ನು ಸಹ ಮುಖದ ಮೇಲೆ ಹಚ್ಚಬಹುದು. ವಿಟಮಿನ್ ಇ ಕ್ಯಾಪ್ಸುಲ್ಗಳು ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ. ಹಾಗಾಗಿ ನೀವು ಈ ಕ್ಯಾಪ್ಸುಲ್ ಅನ್ನು ನಿಮ್ಮ ಮುಖದ ಮೇಲೆ ಅನ್ವಯಿಸಬಹುದು ಅಥವಾ ಬಾದಾಮಿ ಎಣ್ಣೆಯನ್ನು ಅಲೋವೆರಾದೊಂದಿಗೆ ಮಿಶ್ರಣ ಮಾಡಿ ಕೂಡ ಮುಖಕ್ಕೆ ಹಚ್ಚಬಹುದು. ಇದು ಚರ್ಮದ ರಚನೆಯನ್ನು ಸುಧಾರಿಸುತ್ತದೆ.

ಅಲೋವೆರಾ: ಅಲೋವೆರಾ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಅಲೋವೆರಾ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಚಳಿಗಾಲದಲ್ಲಿ ಶುಷ್ಕ ಗಾಳಿಯು ಚರ್ಮವನ್ನು ಹಿಗ್ಗಿಸುತ್ತದೆ. ಹೀಗಾಗಿ ಇಂತಹ ಸಮಯದಲ್ಲಿ ಅಲೋವೆರಾವನ್ನು ಬಳಸುವುದು ಈ ಚರ್ಮದ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ.

ಕಚ್ಚಾ ಹಾಲು: ದಿನವಿಡೀ ವಿವಿಧ ರೀತಿಯ ಧೂಳು ಮುಖಕ್ಕೆ ಅಂಟಿಕೊಂಡಿರುತ್ತದೆ. ಇದನ್ನು ಹೋಗಲಾಡಿಸಲು ಹಸಿ ಹಾಲನ್ನು ಮುಖಕ್ಕೆ ಹಚ್ಚಬಹುದು. ಒಂದು ಬಟ್ಟಲಿನಲ್ಲಿ ಹಸಿ ಹಾಲನ್ನು ತೆಗೆದುಕೊಂಡು ಅದರಲ್ಲಿ ಕಟಾನ್ ಉಂಡೆಯನ್ನು ಅದ್ದಿ ಮುಖಕ್ಕೆ ಹಚ್ಚಿ. ಈ ರೀತಿ ಹಸಿ ಹಾಲಿನ ಬಳಕೆಯಿಂದ ಮುಖದ ಚರ್ಮವು ಕಾಂತಿಯುತವಾಗಿರುತ್ತದೆ ಮತ್ತು ಮುಖದಲ್ಲಿರುವ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತದೆ.

ಮಾಯಿಶ್ಚರೈಸರ್: ನಿಮ್ಮ ಚರ್ಮ ಯಾವುದೇ ಬಗೆಯಾಗಿರಲಿ ಮಾಯಿಶ್ಚರೈಸರ್ ಅತಿ ಮುಖ್ಯವಾದುದು. ಇದನ್ನು ಪ್ರತಿದಿನ ಬೆಳಗಿನ ಸಮಯ ಅಥವಾ ರಾತ್ರಿಯ ಸಮಯದಲ್ಲಿ ಬಳಸುವುದರಿಂದ ಆರೋಗ್ಯಕರವಾದ ಹಾಗು ಕಾಂತಿಯುತ ಚರ್ಮವನ್ನು ಪಡೆಯಬಹುದಾಗಿದೆ.

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...