ಬೆಳ್ಳಿ ಉಂಗುರ ಧರಿಸುವುದರಿಂದ ಎಷ್ಟೆಲ್ಲಾ ಪ್ರಯೋಜನ ಗೊತ್ತಾ?
ಬೆಳ್ಳಿಯು ಗುರು ಮತ್ತು ಚಂದ್ರ ಗ್ರಹಗಳಿಗೆ ಸಂಬಂಧಪಟ್ಟಿದ್ದು ನಮ್ಮ ದೇಹದಲ್ಲಿನ ನೀರು ಮತ್ತು ಕಫವನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ ಎಂದು ವೈದಿಕ ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಇದೊಂದು ಅದೃಷ್ಟಕಾರಕ ಲೋಹ ಎಂದು ಶಾಸ್ತ್ರಗಳು ಹೇಳುತ್ತವೆ.
ಗುರು ಮತ್ತು ಚಂದ್ರ ಗ್ರಹಗಳ ಸಂಪೂರ್ಣ ಅನುಗ್ರಹ ಪಡೆಯಬೇಕಾದರೆ ವೈದಿಕ ಜ್ಯೋತಿಷ್ಯಾಸ್ತ್ರದ ಪ್ರಕಾರ ಬೆಳ್ಳಿಯಿಂದ ಮಾತ್ರ ಸಾಧ್ಯವಾಗುತ್ತದೆ. ಬೆಳ್ಳಿಯ ಉಂಗುರವನ್ನು ತೊಡುವುದರಿಂದ ನಮ್ಮ ದೇಹದಲ್ಲಿನ ನಂಜು ನಿವಾರಣೆಯಾಗಿ ಉತ್ತಮವಾದ ಆರೋಗ್ಯವನ್ನು ಪಡೆಯಬಹುದು.
ಅಡುಗೆ ಮನೆಯಲ್ಲಿ ಬೆಳ್ಳಿಯ ಪಾತ್ರೆಗಳನ್ನು ಬಳಸುವುದರಿಂದ ಹಾಗೂ ಆಭರಣಗಳ ರೂಪದಲ್ಲಿ ಬಳಸುವುದರಿಂದ ಜೀವನದಲ್ಲಿ ಸಾಕಷ್ಟು ಧನಾತ್ಮಕ ಪ್ರತಿಫಲಗಳನ್ನು ಪಡೆಯಬಹುದು. ಇದು ಒತ್ತಡವನ್ನು ದೂರ ಮಾಡುವುದರ ಜತೆಗೆ ಮನೆಯಲ್ಲಿ ನೆಮ್ಮದಿಯನ್ನೂ ತರುವ ಗುಣ ಇದಕ್ಕಿದೆ. ಅದೇ ರೀತಿ ಕಿರುಬೆರಳಿಗೆ ಬೆಳ್ಳಿ ಉಂಗುರ ಧರಿಸುವುದರಿಂದಲೂ ಅನೇಕ ಪ್ರಯೋಜನಗಳಿವೆ.
ಬೆಳ್ಳಿಯು ಗುರು ಮತ್ತು ಚಂದ್ರಗ್ರಹಗಳಿಗೆ ಸಂಬಂಧಿಸಿದ ಕಾರಣ ಆ ಗ್ರಹಗಳ ಪ್ರಭಾವ ನಿಮ್ಮ ಮೇಲೆ ಉಂಟಾಗಿ ನಿಮ್ಮ ಸೌಂದರ್ಯ ಇಮ್ಮಡಿಸುತ್ತದೆ, ಜತೆಗೆ ಗುರು ಗ್ರಹನದ ಪ್ರಭಾವದಿಂದಾಗಿ ನಿಮ್ಮ ವ್ಯಕ್ತಿತ್ವವೂ ವಿಕಾಸವಾಗುತ್ತದೆ. ನಿಮ್ಮ ಮನಸ್ಸನ್ನು ಪ್ರಶಾಂತವಾಗಿಟ್ಟು ಕೋಪ ತಾಪಗಳನ್ನು ಕುಗ್ಗಿಸುವ ಗುಣಗಳು ಉಂಗುರಕ್ಕೆ ಇರುತ್ತವೆ.
ಒಂದು ವೇಳೆ ನಿಮಗೆ ಚಂದ್ರಗ್ರಹದ ಅನುಗ್ರಹ ದುರ್ಬಲವಾಗಿದ್ದರೆ ಅದರ ಪ್ರಭಾವ ಮಾನಸಿಕ ಸ್ಥಿತಿಯ ಮೇಲೆ ಉಂಟಾಗಿ ನಿಮ್ಮನ್ನು ದುರ್ಬಲಗೊಳಿಸುತ್ತದೆ. ಆದರೆ ಬೆಳ್ಳಿಯ ಉಂಗುರ ತೊಡುವುದರಿಂದ ಈ ಸಮಸ್ಯೆಗಳು ಬರಲ್ಲ. ಚಂದ್ರನ ಬಲವನ್ನು ಹೆಚ್ಚಿಸುವ ಗುಣ ಬೆಳ್ಳಿಗಿದೆ. ಶೀತ, ಕೆಮ್ಮು, ಸಂಧಿವಾತದಂತಹ ಸಮಸ್ಯೆಗಳು ಹೆಚ್ಚಾಗಿ ಕಾಡಲ್ಲ.
ಒಂದು ವೇಳೆ ನಿಮಗೆ ಉಂಗುರ ತೊಡಲು ಸಾಧ್ಯವಿಲ್ಲ ಎಂದಾದರೆ, ಬೆಳ್ಳಿಯ ಸರವನ್ನು ಹಾಕಿಕೊಳ್ಳಬಹುದು. ಬೆಳ್ಳಿಯ ಉಂಗುರವನ್ನು ತೊಡುವುದರಿಂದ ಆಗುವಷ್ಟೇ ಲಾಭಗಳು ಬೆಳ್ಳಿಯ ಸರ ತೊಡುವುದರಿಂದ ಆಗುತ್ತವೆ. ಅಷ್ಟೇ ಅಲ್ಲದೆ ಗಂಟಲಿನ ಬಳಿ ಇರುವ ಚಕ್ರವನ್ನು ಇದು ಪ್ರಭಾವಿಸುತ್ತದೆ. ಉಗ್ಗುವುದು, ಮಾತನಾಡಲು ಆಗುವಂತಹ ತೊಂದರೆಗಳು ಇದರಿಂದ ಪರಿಹಾರವಾಗುತ್ತವೆ.