ತಲೆಹೊಟ್ಟಿನಿಂದ ತಲೆಬಿಸಿ ಆಗಿದ್ಯಾ..? ಟೆನ್ಶನ್ ಬಿಡಿ, ಈ ಟಿಪ್ಸ್ ಫಾಲೋ ಮಾಡಿ!
ಹೊಟ್ಟಿನ ಸಮಸ್ಯೆ ಸಾಮಾನ್ಯವೆಂದುಕೊಳ್ಳಬೇಡಿ ಇದರಿಂದ ಕೂದಲು ಉದುರುವಿಕೆಯೂ ಹೆಚ್ಚಾಗುವುದು. ಬೇಸಿಗೆಯಲ್ಲಿ ಬಿಸಿಲಿನಲ್ಲಿ ಓಡಾಡುವಾಗ ಅತಿಯಾದ ಬೆವರಿ ಕೂದಲಿನ ನಡುವೆ ಶೇಖರಣೆಗೊಂಡು ಅದಕ್ಕೆ ಧೂಳು ಸೇರಿ ಹೊಟ್ಟಾಗುತ್ತದೆ. ನಿಯಮಿತವಾಗಿ ತಲೆ ಸ್ನಾನ ಮಾಡಿದರೂ ಈ ಸಮಸ್ಯೆಯಿಂದ ಮುಕ್ತವಾಗೋದು ಅಸಾಧ್ಯ ಎಂಬಂತೆ ಆಗುತ್ತದೆ. ಇಂತಹ ಪರಿಸ್ಥಿತಿಯಿಂದ ಹೊರ ಬರುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ಇಲ್ಲಿದೆ ನೋಡಿ ಟಿಪ್ಸ್
ತಲೆ ಹೊಟ್ಟು ನಿವಾರಣೆಗೆ ಮನೆಮದ್ದುಗಳು ತೆಂಗಿನ ಎಣ್ಣೆಯನ್ನು ಬಳಸಿ ತೆಂಗಿನ ಎಣ್ಣೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಸಾಮಾನ್ಯವಾಗಿ ತಲೆಹೊಟ್ಟು ನಿವಾರಣೆಗೆ ಬಳಸಲಾಗುತ್ತದೆ. ಚರ್ಮದ ತೇವಾಂಶವನ್ನು ಸುಧಾರಿಸುವುದರ ಜತೆಗೆ ತಲೆ ಕೂದಲು ಬೆಳವಣಿಗೆಗೆ ಸಹಾಯಕವಾಗಿದೆ. ಆದ್ದರಿಂದ ತೆಂಗಿನ ಎಣ್ಣೆಯನ್ನು ತಲೆಗೆ ಸವರಿಕೊಳ್ಳುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಇದರಿಂದ ಬಹುಬೇಗ ಹೊಟ್ಟು ಸಮಸ್ಯೆಯಿಂದ ಪರಿಹಾರ ಪಡೆಯಬಹುದಾಗಿದೆ.
ಅಲೋವೆರಾ ಅಲೋವೆರಾ ಕೂಡಾ ಅಪಾರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಲೊವೆರಾ ತಣ್ಣನೇಯ ಅನುಭವವನ್ನು ನೀಡುವುದರ ಜತೆಗೆ ಚರ್ಮವನ್ನು ಮೃದುವಾಗಿಸುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ತಲೆಗೆ ಅಲೋವೆರಾವನ್ನು ಹಚ್ಚಿ 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಲೆ ಸ್ನಾನ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಬಹುಬೇಗ ತಲೆಯ ಹೊಟ್ಟೆ ನಿವಾರಣೆ ಮಾಡಿಕೊಳ್ಳಬಹುದಾಗಿದೆ.
ಬೆಳ್ಳುಳ್ಳಿ ಬೆಳ್ಳುಳ್ಳಿಯ ವಾಸನೆ ಕೆಲವರಿಗೆ ಆಗುವುದಿಲ್ಲ. ತಲೆಗೆ ಹಚ್ಚಿ ಕೆಲ ದಿನಗಳವರೆಗೂ ಸಹ ಬೆಳ್ಳುಳ್ಳಿಯ ವಾಸನೆ ಬರುತ್ತಿರುತ್ತದೆ. ಇದನ್ನು ತಲೆಹೊಟ್ಟು ನಿವಾರಕ ಚಿಕಿತ್ಸೆಯಾಗಿ ಬಳಸಬಹುದಾಗಿದೆ. ಒಂದು ಲವಂಗ ಮತ್ತು ಎರಡು ಬೆಳ್ಳುಳ್ಳಿಯನ್ನು ಪುಡಿ ಮಾಡಿ ನೀರಿನೊಂದಿಗೆ ಬೆರೆಸಿ ನಂತರ ತಲೆಗೆ ಹಚ್ಚಿಕೊಳ್ಳಿ. ಇದರಿಂದ ತಲೆ ಹೊಟ್ಟು ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದಾಗಿದೆ.