ನಿಮಗೆ ಕಾಡುವ ತಲೆ ನೋವಿನಿಂದ ಮುಕ್ತಿ ಪಡೆಯಲು ಈ 5 ಮನೆಮದ್ದುಗಳನ್ನು ಟ್ರೈ ಮಾಡಿ..!

Date:

ನಿಮಗೆ ಕಾಡುವ ತಲೆ ನೋವಿನಿಂದ ಮುಕ್ತಿ ಪಡೆಯಲು ಈ 5 ಮನೆಮದ್ದುಗಳನ್ನು ಟ್ರೈ ಮಾಡಿ..!

ಪ್ರಸ್ತುತ ಪ್ರಪಂಚದಲ್ಲಿ ಹೆಚ್ಚಿನ ಜನರು ತಲೆನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ತಲೆನೋವು ಚಿಕ್ಕದಾಗಿ ಶುರುವಾಗುತ್ತದೆ. ಚಿಕ್ಕ ತಲೆನೋವಿಗೆ ಮನೆಮದ್ದುಗಳನ್ನು ಬಳಸಿ ನಾವೇ ಪರಿಹಾರ ಕಂಡುಕೊಳ್ಳುವುದು ಸಾಮಾನ್ಯ ಸಂಗತಿ. ಪ್ರತಿದಿನ ನೋವು ನಿವಾರಕಗಳನ್ನು ಸೇವಿಸಿದರೆ ತೊಂದರೆಯಾಗುತ್ತದೆ.
ನೋವು ನಿವಾರಕಗಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ಇದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಈ ಔಷಧಿಗಳ ದುಷ್ಪರಿಣಾಮಗಳಿಂದ ದೇಹದಲ್ಲಿ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ನಿಮಗೂ ತಲೆನೋವಿನ ಸಮಸ್ಯೆ ಕಾಡುತ್ತಿದ್ದರೆ 5 ಮನೆಮದ್ದುಗಳಿಂದ ಪರಿಹಾರ ಪಡೆಯಬಹುದು.
ತಲೆನೋವಿಗೆ ಮನೆಮದ್ದು :
ಆಪಲ್ :
ಹೌದು, ನಾವೆಲ್ಲರೂ ಸೇವಿಸುವ ಸೇಬು ನಮ್ಮ ತಲೆನೋವನ್ನು ಗುಣಪಡಿಸುತ್ತದೆ. ಔಷಧಿ ತೆಗೆದುಕೊಳ್ಳದೆ ತಲೆನೋವನ್ನು ನಿವಾರಿಸಬೇಕಾದರೆ ಸೇಬನ್ನು ಸೇವಿಸಬೇಕು. ಆದರೆ ನೆನಪಿರಲಿ ತಲೆ ನೋವಿನ ಪರಿಹಾರಕ್ಕೆ ಸೇಬು ಸೇವಿಸುವಾಗ ಸೇಬನ್ನು ಉಪ್ಪಿನೊಂದಿಗೆ ತಿನ್ನಬೇಕು. ತಲೆನೋವಿನಿಂದ ತ್ವರಿತ ಪರಿಹಾರ ಒದಗಿಸಲು ಇದು ಸಹಾಯ ಮಾಡುತ್ತದೆ.
ಬಾದಾಮಿ :
ತಲೆನೋವಿನಿಂದ ಮುಕ್ತಿ ಪಡೆಯಲು ಬಾದಾಮಿಯನ್ನೂ ಸೇವಿಸಬಹುದು. 5-7 ಬಾದಾಮಿಯನ್ನು ಜಗಿದು ತಿಂದರೆ ತಲೆನೋವು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಬಾದಾಮಿಯಲ್ಲಿ ಕಂಡುಬರುವ “ಸೆಲೆಸಿನ್” ಅಂಶವು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಮ್ಮ ದೇಹದಲ್ಲಿನ ಯಾವುದೇ ರೀತಿಯ ನೋವನ್ನು ನಿವಾರಿಸುತ್ತದೆ.
ಆಪಲ್ ವಿನೆಗರ್ :
ರಾತ್ರಿ ಪಾರ್ಟಿಯಲ್ಲಿ ಅತಿಯಾದ ಮದ್ಯಪಾನದಿಂದ ಮರುದಿನ ಬೆಳಿಗ್ಗೆ ತಲೆನೋವಿನಿಂದ ತೊಂದರೆಗೊಳಗಾಗಿದ್ದರೆ, ಆಪಲ್ ಸೈಡರ್ ವಿನೆಗರ್ ಪ್ರಯತ್ನಿಸಬಹುದು. ಒಂದು ಲೋಟ ಬಿಸಿ ನೀರಿನಲ್ಲಿ 1-2 ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ, ಅದರಲ್ಲಿ 1 ಚಮಚ ಜೇನುತುಪ್ಪ ಮತ್ತು ಕೆಲವು ಹನಿ ನಿಂಬೆ ರಸವನ್ನು ಸೇರಿಸಿ. ಈ ಪಾನೀಯ ತಲೆನೋವಿನಿಂದ ಬೇಗನೆ ಪರಿಹಾರವನ್ನು ನೀಡುತ್ತದೆ.
ಶುಂಠಿ ಮತ್ತು ತುಳಸಿ ರಸ :
ತೀವ್ರ ತಲೆನೋವಿನಿಂದ ತೊಂದರೆಗೀಡಾಗಿದ್ದರೆ, ತುಳಸಿ ಮತ್ತು ಶುಂಠಿಯ ರಸವನ್ನು ಬಳಸಬಹುದು. ಇದಕ್ಕಾಗಿ 10-15 ತುಳಸಿ ಎಲೆಗಳು ಮತ್ತು ಸ್ವಲ್ಪ ಶುಂಠಿಯನ್ನು ತೆಗೆದುಕೊಂಡು ಪುಡಿಮಾಡಬೇಕು. ನಂತರ ಅದರ ರಸವನ್ನು ತೆಗೆದು ಹಣೆಯ ಮೇಲೆ ಹಚ್ಚಬೇಕು. ಈ ರಸದ ಪೇಸ್ಟ್ ಅನ್ನು ಹಣೆಯ ಮೇಲೆ ಹಚ್ಚುವುದರಿಂದ ನೋವು ಬೇಗನೆ ಗುಣವಾಗುತ್ತದೆ. ನೋವು ಅಸಹನೀಯವಾಗಿದ್ದರೆ ಈ ರಸವನ್ನು ಸೇವಿಸಬಹುದು. ಆದರೆ ಈ ರಸವನ್ನು 1 ಟೀಸ್ಪೂನ್ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.
ಪುದೀನಾ ರಸ :
ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಪುದೀನಾ ನಮಗೆ ಔಷಧೀಯ ಪ್ರಯೋಜನಗಳನ್ನು ಕೂಡಾ ನೀಡುತ್ತದೆ. ತಲೆನೋವು ಕಾಣಿಸಿಕೊಂಡಾಗ ಪುದೀನ ಎಲೆಗಳ ರಸವನ್ನು ತೆಗೆದುಕೊಂಡು ಅದನ್ನು ನಿಮ್ಮ ಹಣೆಯ ಮೇಲೆ ಹಚ್ಚಬೇಕು. ಈ ರಸವನ್ನು ಹಚ್ಚುವುದರಿಂದ ತಲೆನೋವು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.

Share post:

Subscribe

spot_imgspot_img

Popular

More like this
Related

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ!

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ! ಹೃದಯಾಘಾತದಿಂದ ಹಿರಿಯ ರಂಗಭೂಮಿ...

ಕರ್ನಾಟಕದಲ್ಲಿ 6 ದಿನಗಳ ಭಾರೀ ಮಳೆಯ ಮುನ್ಸೂಚನೆ: ಕರಾವಳಿಯಲ್ಲಿ ಗಾಳಿ, ಮಳೆ ಅಬ್ಬರ

ಕರ್ನಾಟಕದಲ್ಲಿ 6 ದಿನಗಳ ಭಾರೀ ಮಳೆಯ ಮುನ್ಸೂಚನೆ: ಕರಾವಳಿಯಲ್ಲಿ ಗಾಳಿ, ಮಳೆ...

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..?

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..? ದಸರಾ,...

ನವರಾತ್ರಿ ಎಂಟನೇ ದಿನ – ಮಹಾಗೌರಿ !

ನವರಾತ್ರಿ ಎಂಟನೇ ದಿನ – ಮಹಾಗೌರಿ ! ದೇವಿಯ ಹಿನ್ನಲೆ ನವರಾತ್ರಿಯ ಎಂಟನೇ ದಿನ...