ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು!

Date:

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು!

ಬಳ್ಳಾರಿ: ಬಾಣಂತಿಯರ ಸಾವಿನ ಸಂಖ್ಯೆ ಕರ್ನಾಟಕ ಸರ್ಕಾರ ತಲೆ ತಗ್ಗಿಸುವಂತೆ ಮಾಡಿದೆ. ಈ ಎಲ್ಲ ಪ್ರಕರಣಗಳ ತನಿಖೆ ನಡೆಯುತ್ತಿದೆ. ಇದರ ಮಧ್ಯೆಯೇ ಮತ್ತೋರ್ವ ಬಾಣಂತಿ ಮೃತಪಟ್ಟಿದ್ದಾರೆ. ಹೌದು ಬಳ್ಳಾರಿ ನಗರದ ವೈದ್ಯಕೀಯ ಕಾಲೇಜು ಮತ್ತು ವಿಜ್ಞಾನ ಕೇಂದ್ರ (ಬಿಮ್ಸ್) ದಲ್ಲಿ ಮಂಗಳವಾರ ಸಂಜೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ.
ರೇಷ್ಮಾ ಗೌಸ್ಫೀರ್ (20) ಎಂಬುವರಿಗೆ ಜನವರಿ 4ರಂದು ಸಿಜೇರಿಯನ್ ಹೆರಿಗೆ ಮಾಡಲಾಗಿತ್ತು. ನಾಲ್ಕು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದರು. ಬಳಿಕ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಜ.14ರಂದು ಮತ್ತೆ ವಿಮ್ಸ್ಗೆ ದಾಖಲಿಸಿ ಕೃತಕ ಉಸಿರಾಟದಲ್ಲಿಟ್ಟು ಚಿಕಿತ್ಸೆ ಕೊಡಲಾಗಿತ್ತಾದರೂ, ಮಂಗಳವಾರ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ರೇಷ್ಮಾ ಮೃತಪಟ್ಟಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಶಿಕಾರಿಪುರ ಸೇರಿ ನಾಲ್ಕೈದು ಕಡೆ ಪಾದಯಾತ್ರೆಯಲ್ಲಿ ನಾನೇ ಭಾಗವಹಿಸುವೆ: ಡಿ.ಕೆ. ಶಿವಕುಮಾರ್

ಶಿಕಾರಿಪುರ ಸೇರಿ ನಾಲ್ಕೈದು ಕಡೆ ಪಾದಯಾತ್ರೆಯಲ್ಲಿ ನಾನೇ ಭಾಗವಹಿಸುವೆ: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಕಾಡಾನೆ ದಾಳಿ: ಸಕಲೇಶಪುರದಲ್ಲಿ ಮಹಿಳೆ ಸಾವು, ಸಚಿವ ಈಶ್ವರ ಖಂಡ್ರೆ ತೀವ್ರ ಶೋಕ

ಕಾಡಾನೆ ದಾಳಿ: ಸಕಲೇಶಪುರದಲ್ಲಿ ಮಹಿಳೆ ಸಾವು, ಸಚಿವ ಈಶ್ವರ ಖಂಡ್ರೆ ತೀವ್ರ...

ಮೊದಲ ಪತ್ನಿಗೆ ವಂಚನೆ: ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿ ಬಂಧನ

ಮೊದಲ ಪತ್ನಿಗೆ ವಂಚನೆ: ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿ ಬಂಧನ ಬೆಂಗಳೂರು:...

ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ: ಸುಪ್ರೀಂಕೋರ್ಟ್ ನಿರ್ದೇಶನ

ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ: ಸುಪ್ರೀಂಕೋರ್ಟ್ ನಿರ್ದೇಶನ ಬೆಂಗಳೂರು: ಗ್ರೇಟರ್...