ಅತಿಯಾದ ಹಾಲು ಸೇವನೆ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ..? ಇಲ್ಲಿದೆ ಮಾಹಿತಿ

Date:

ಅತಿಯಾದ ಹಾಲು ಸೇವನೆ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ..? ಇಲ್ಲಿದೆ ಮಾಹಿತಿ

ಒಂದು ಲೋಟ ಹಾಲಿನಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಇದ್ದು, ಇದು ಮೂಳೆಗಳನ್ನು ಬಲಪಡಿಸುವುದು ಮತ್ತು ಸ್ನಾಯುಗಳ ಬೆಳವಣಿಗೆಗೆ ಕೂಡ ಸಹಕಾರಿ. ಹೀಗಾಗಿ ಪ್ರತಿಯೊಂದು ಮನೆಯಲ್ಲೂ ಹಾಲು ಹಾಗೂ ಅದರ ಉತ್ಪನ್ನಗಳನ್ನು ಬಳಕೆ ಮಾಡುವುದನ್ನು ನಾವು ನೋಡುತ್ತೇವೆ.
ಆದರೆ ಅತಿಯಾಗಿ ಹಾಲು ಕುಡಿದರೆ ಅದರಿಂದ ಮೂಳೆಗಳು ಬಿರುಕು ಬಿಡುವುದು ಎಂದು ಹೇಳಲಾಗುತ್ತದೆ. ಈ ಲೇಖನದಲ್ಲಿ ಎಷ್ಟು ಹಾಲು ಕುಡಿದರೆ ಅದು ಹಾನಿ ಉಂಟು ಮಾಡುವುದು ಎಂದು ತಿಳಿಸಿಕೊಡಲಿದ್ದೇವೆ.
ಎಷ್ಟು ಕುಡಿಯಬೇಕು: ದಿನಕ್ಕೆ ಮೂರು ಕಪ್ ಹಾಲು ಕುಡಿಯಿರಿ. ಕಲಬೆರಕೆ ಇಲ್ಲದ ಮತ್ತು ರಾಸಾಯನಿಕ ರಹಿತ ಹಾಲನ್ನು ಸೇವಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಹಾಲು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ಆಯಾಸ: ದಿನನಿತ್ಯ ಮೂರು ಲೋಟಗಳಿಗಿಂತ ಹೆಚ್ಚು ಹಾಲು ಸೇವಿಸುವುದರಿಂದ ಸುಸ್ತು ಉಂಟಾಗುತ್ತದೆ. ಅತಿಯಾಗಿ ಸೇವಿಸುವುದರಿಂದ ಕರುಳಿನ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ ಮತ್ತು ನೀವು ಬೇಗನೆ ಆಯಾಸಗೊಳ್ಳಬಹುದು ಎಂದು ಅಧ್ಯಯನವು ಸೂಚಿಸುತ್ತದೆ. ಹಾಲಿನಲ್ಲಿರುವ ಎ1 ಕ್ಯಾಸೀನ್ ಇದಕ್ಕೆ ಕಾರಣ.
ಚರ್ಮದ ಸಮಸ್ಯೆಗಳು: ಹೆಚ್ಚು ಹಾಲು ಕುಡಿಯುವುದರಿಂದ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಅಲರ್ಜಿ ಮತ್ತು ಮೊಡವೆಯಂತಹ ಚರ್ಮದ ಸಮಸ್ಯೆಗಳು ಬರುತ್ತವೆ. ನೀವು ಹಾಲಿನಲ್ಲಿ ಹೆಚ್ಚು ಸಂರಕ್ಷಕಗಳನ್ನು ಬಳಸಿದರೆ, ಚರ್ಮವು ಕೆಂಪು ಬಣ್ಣಕ್ಕೆ ತಿರುಗುತ್ತದೆ, ಬಿರುಕು ಮತ್ತು ರಾಷಸ್ ಆಗುತ್ತದೆ.
ಬ್ರೈನ್ ಫಾಗ್ಸ್: ಹೆಚ್ಚು ಹಾಲು ಸೇವಿಸುವುದರಿಂದ ಜ್ಞಾಪಕ ಶಕ್ತಿ ನಷ್ಟವಾಗುತ್ತದೆ. ಮೆದುಳು ಮಂಜು ಮಂಜಾಗುತ್ತದೆ. ಹೆಚ್ಚು ಹಾಲು ಕುಡಿದರೆ ಕೆಲಸದತ್ತ ಗಮನ ಹರಿಸದಿರುವುದು, ಏಕಾಗ್ರತೆ ಕಡಿಮೆಯಾಗುವುದು ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ವಯಸ್ಸಾದವರಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ.
ಜೀರ್ಣಕಾರಿ ಸಮಸ್ಯೆಗಳು: ಹೆಚ್ಚು ಹಾಲು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಹೊಟ್ಟೆ ಉಬ್ಬುವುದು ಮತ್ತು ಅತಿಸಾರದ ಅಪಾಯವೂ ಇದೆ. ನಿಮ್ಮ ದೇಹವು ಲ್ಯಾಕ್ಟೋಸ್ ಅನ್ನು ಸರಿಯಾಗಿ ಚಯಾಪಚಯಗೊಳಿಸಲು ಸಾಧ್ಯವಾಗದಿದ್ದರೆ, ಅದು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ.
ಹಾರ್ಮೋನ್ ಸಮಸ್ಯೆಗಳು: ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಡೈರಿ ಉದ್ಯಮದಲ್ಲಿ ಬೆಳವಣಿಗೆಯ ಹಾರ್ಮೋನುಗಳನ್ನು ಬಳಸಲಾಗುತ್ತದೆ. ಇಂತಹ ಹಾಲು ಕುಡಿಯುವುದರಿಂದ ದೇಹದಲ್ಲಿ ಹಾರ್ಮೋನ್ ಸಮತೋಲನ ತಪ್ಪುತ್ತದೆ.
ಹಾಗಾಗಿ ವೈದ್ಯರ ಸಲಹೆಯಂತೆ ದಿನಕ್ಕೆ ಒಂದು ಲೋಟ ಹಾಲು ಕುಡಿದರೆ ಅದು ನಮ್ಮ ದೇಹಕ್ಕೆ ಅಮೃತದಂತೆ ಕೆಲಸ ಮಾಡುತ್ತದೆ. ನಮಗೆ ಬೇಕಾದ ಪೋಷಕಾಂಶಗಳು ಸರಿಯಾಗಿ ಸಿಗುತ್ತವೆ.

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್‌ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..? 

ಧರ್ಮಸ್ಥಳ ಕೇಸ್‌ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..?  ಮಂಗಳೂರು:...

ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ!

ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ! ಮೈಸೂರು: ಹಿರಿಯ ಸಾಹಿತಿ...

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆ !

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆಯ ಹಿನ್ನಲೆ ನೋಡೊದಾದ್ರೆ, ಸ್ಕಂದಮಾತೆ...

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...